ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಹಿಂದೂ ಧರ್ಮದ ಉಳಿವಿಗಾಗಿ ಗಣೇಶೋತ್ಸವ’

Published 29 ಆಗಸ್ಟ್ 2024, 14:28 IST
Last Updated 29 ಆಗಸ್ಟ್ 2024, 14:28 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ‘ಹಿಂದೂ ಧರ್ಮದ ಉಳಿವಿಗಾಗಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ನಡೆಯುತ್ತಾ ಬಂದಿದೆ’ ಎಂದು ಗದಗ ಜಿಲ್ಲಾ ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳಿ ಮಾರ್ಗದರ್ಶಕ ರಾಜು ಖಾನಪ್ಪನವರ ಹೇಳಿದರು.

ಇಲ್ಲಿನ ಶಂಕರ ಭಾರತಿ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಗಜಾನೋತ್ಸವ ಮಹಾಮಂಡಳಿ ಲಕ್ಷ್ಮೇಶ್ವರದ ಸಮಿತಿ ರಚನೆ ಕುರಿತು ಬುಧವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

‘130 ವರ್ಷಗಳ ಹಿಂದೆ ಹಿಂದೂಗಳನ್ನು ಬ್ರಿಟಿಷರು ಒಂದೇ ಕಡೆ ಸೇರಲು ಬಿಡುತ್ತಿರಲಿಲ್ಲ. ಆ ಸಮಯದಲ್ಲಿ ಬಾಲಗಂಗಾಧರನಾಥ ತಿಲಕ್ ಅವರಿಗೆ ಈ ಗಣೇಶನ ಹಬ್ಬವನ್ನೇ ಸ್ವಾತಂತ್ರ ಸಂಗ್ರಾಮದ ಹೋರಾಟಕ್ಕೆ ಬಳಸಿಕೊಳ್ಳುವ ಪರಿಕಲ್ಪನೆ ಬಂತು. ಎಲ್ಲ ಹಿಂದೂಗಳನ್ನು ಒಂದೇ ವೇದಿಕೆಯಡಿ ತರಲು ಗಣೇಶನ ಹಬ್ಬ ಸೂಕ್ತ ಎನ್ನುವುದನ್ನು ಅವರು ಅರಿತರು. ಧರ್ಮದ ಉಳಿವಿಗಾಗಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಂಡಳಿ ಸ್ಥಾಪನೆ ಮಾಡಿದರು’ ಎಂದು ಹೇಳಿದರು.

‘ಎರಡು ವರ್ಷದ ಒಳಗಡೆ ಹಿರಿಯರ ಮಾರ್ಗದರ್ಶನದಂತೆ ಮಹಾಮಂಡಳಿ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ’ ಎಂದು ತಿಳಿಸಿದರು.

ಶ್ರೀರಾಮ ಸೇನೆಯ ತಾಲ್ಲೂಕು ಘಟಕದ ಸಂಚಾಲಕ ಈರಣ್ಣ ಪೂಜಾರ ಮಾತನಾಡಿ, ‘ಹಿಂದೂ ಧರ್ಮ ಉಳಿವಿಗಾಗಿ ಒಗ್ಗಟ್ಟಿನಿಂದ ಹಬ್ಬವನ್ನು ಆಚರಿಸಬೇಕು’ ಎಂದರು.

ಡಿಎಸ್ಎಸ್ ಜಿಲ್ಲಾ ಸಂಚಾಲಕ ಸುರೇಶ ನಂದೆಣ್ಣವರ ಹಾಗೂ ಮಂಜುನಾಥ ಹೊಗೆಸೊಪ್ಪಿನ,
ಬಸವರಾಜ ಚಕ್ರಸಾಲಿ, ಗಂಗಾಧರ ಮೆಣಸಿನಕಾಯಿ ಮಾತನಾಡಿದರು.

ಭರತ ಲದ್ದಿ, ಬಸವರಾಜ ಹಿರೇಮನಿ, ನವೀನ ಬೆಳ್ಳಟ್ಟಿ, ವಿಜಯ ಕುಂಬಾರ, ಮೋಹನ ನಂದೆಣ್ಣವರ, ಲೋಕೇಶ ಸುತಾರ, ಭರಮಪ್ಪ ಶರಸೂರಿ, ಅಮಿತ ಗುಡಗೇರಿ, ಪ್ರಾಣೇಶ ವ್ಯಾಪಾರಿ, ಕಿರಣ ಚಿಲ್ಲೂರಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT