ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಸಕ ಜಿ.ಎಸ್. ಪಾಟೀಲ ಹೇಳಿಕೆಯಲ್ಲಿ ತಪ್ಪಿಲ್ಲ: ಟಿ.ಈಶ್ವರ

Published 29 ಆಗಸ್ಟ್ 2024, 14:28 IST
Last Updated 29 ಆಗಸ್ಟ್ 2024, 14:28 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ‘ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಗಜೇಂದ್ರಗಡದಲ್ಲಿ ನಡೆದ ಅಹಿಂದ್‌ ಒಕ್ಕೂಟದ ಪ್ರತಿಭಟನಾ ಸಭೆಯಲ್ಲಿ ನೀಡಿದ ಹೇಳಿಕೆಯಲ್ಲಿ ತಪ್ಪಿಲ್ಲ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಈಶ್ವರ ಹೇಳಿದರು.

ಈ ಕುರಿತು ಗುರುವಾರ ಹೇಳಿಕೆ ನೀಡಿರುವ ಅವರು, ‘ಬಿಜೆಪಿಯವರು ಮೋದಿಯವರ ಭ್ರಮೆಯಲ್ಲಿ ಇದ್ದಾರೆ. ಮೋದಿಯವರ ತಪ್ಪನ್ನು ಟೀಕಿಸಿದರೆ ಅದು ಹೇಗೆ ದೇಶದ್ರೋಹವಾಗುತ್ತದೆ. ರೋಣದ ಗೌಡರ ಮನೆತನ ಈ ದೇಶದ ಸ್ವಾತಂತ್ರ ಹೋರಾಟದಲ್ಲಿ ದೊಡ್ಡಮೇಟಿಯವರ ಕುಟುಂಬದೊಂದಿಗೆ ಹೋರಾಟ ಮಾಡಿದೆ. ಅಂದೇ ದೇಶದ ಮಕ್ಕಳಿಗಾಗಿ ಜಿ.ಎಸ್. ಪಾಟೀಲರ ತಾಯಿ ಬಸಮ್ಮನವರು ಶಿಕ್ಷಣ ಕ್ರಾಂತಿ ಪ್ರಾರಂಭಿಸಿದರು. ಇಂತಹ ಕುಟುಂಬದಿಂದ ಬಂದ ಜಿ.ಎಸ್. ಪಾಟೀಲರು ಮೋದಿಯವರು ಮಾಡುತ್ತಿರುವ ನೀಚ ರಾಜಕಾರಣವನ್ನು ಟೀಕಿಸಿದರೆ ಅದು ತಪ್ಪಲ್ಲ’ ಎಂದರು.

‘ಹಿಟ್ಲರನಂತೆ ಆಡಳಿತ ನಡಿಸುತ್ತಿರುವ ಮೋದಿಯವರು ಪ್ರಜಾಪ್ರಭುತ್ವ, ದೇಶದ ಪ್ರಧಾನಿ ಎಂಬುದನ್ನು ಮರೆಯಬಾರದು’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ದಕ್ಷ ಹಿಂದುಳಿದ, ಬಡವರ ಪರ ಸರ್ಕಾರ ನಡೆಸುತ್ತಿರುವುದನ್ನು ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವುದು ಅವರ ಹುನ್ನಾರ. ಆದರೆ ಅವರ ಈ ಕುತಂತ್ರವನ್ನು, ಜನ ಮಾತನಾಡುವುದನ್ನು ಜಿ.ಎಸ್. ಪಾಟೀಲ ಹೇಳಿದ್ದಾರೆ ಅಷ್ಟೇ’ ಎಂದು ಈಶ್ವರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT