ಲಕ್ಷ್ಮೇಶ್ವರ: ‘ಜನನ-ಮರಣ ಪ್ರಮಾಣಪತ್ರವನ್ನು ಆಯಾ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಇದರಿಂದ ಗ್ರಾಮೀಣ ಭಾಗದ ಜನತೆಗೆ ಅನುಕೂಲವಾಗಿದೆ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಣ್ಣಪ್ಪ ರಾಮಗೇರಿ ಹೇಳಿದರು.
ತಾಲ್ಲೂಕಿನ ಗೋವನಾಳ ಗ್ರಾಮ ಪಂಚಾಯ್ತಿಯಲ್ಲಿ ಬುಧವಾರ ಗ್ರಾಮಸ್ಥರೊಬ್ಬರಿಗೆ ಪ್ರಮಾಣ ಪತ್ರ ನೀಡಿ ಮಾತನಾಡಿದರು.
‘ಪ್ರಮಾಣಪತ್ರಕ್ಕಾಗಿ ಈ ಮೊದಲು ಗ್ರಾಮೀಣ ಭಾಗದ ನಿವಾಸಿಗಳು ಪಟ್ಟಣದ ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾಗಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ’ ಎಂದರು.