ಲಕ್ಕುಂಡಿ: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ದ್ವಿ ಭಾಷಾ ಶಾಲೆಯ ಆವರಣದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ 24 ಶಿಕ್ಷಕರ ಗುರುವಂದನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

1999–2000ನೇ ಸಾಲಿನಲ್ಲಿ ಸರ್ಕಾರಿ ಗಂಡು ಮಕ್ಕಳ ಪ್ರಾಥಮಿಕ ಮತ್ತು ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ಹಾಗೂ ಬಿ.ಎಚ್.ಪಾಟೀಲ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ 85 ವಿದ್ಯಾರ್ಥಿಗಳು ಕಾರ್ಯಕ್ರಮ ಆಯೋಜಿಸಿದ್ದರು. ಶಿಕ್ಷಕ ಮತ್ತು ಶಿಕ್ಷಕಿಯರಿಗೆ ನೆನಪಿನ ಕಾಣಿಕೆ ನೀಡಿ, ಗೌರವ ಸಮರ್ಪಿಸಿದರು.

ತಮ್ಮ ಭವಿಷ್ಯ ರೂಪಿಸಿದ ಶಿಕ್ಷಕರು, ಬದುಕಿನ ಹಲವಾರು ಘಟನೆಗಳನ್ನು ಮೆಲುಕು ಹಾಕಿದರು. ಗುರುಗಳ ಪಾದಗಳಿಗೆ ನಮಸ್ಕರಿಸಿ, ಭಾವುಕರಾದರು.

ಶ್ರೀಕೃಷ್ಣ ದೇವಸ್ಥಾನದಿಂದ ಪ್ರಾಥಮಿಕ ಶಾಲೆಯವರೆಗೂ ಜಾಂಜ್ ಮೇಳದೊಂದಿಗೆ ಶಿಕ್ಷಕರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ದಾರಿಯುದ್ದಕ್ಕೂ ಹೂವಿನ ಸುರಿಮಳೆ, ನೃತ್ಯದೊಂದಿಗೆ ಶಿಕ್ಷಕ ಬಳಗಕ್ಕೆ ಜೈಘೋಷಗಳು ಮೊಳಗಿದವು.

ಪುರುಷರು ಬಿಳಿ ಅಂಗಿ ಹಾಗೂ ನೀಲಿ ಪ್ಯಾಂಟ್, ಕೇಸರಿ ಶಾಲು ಧರಿಸಿದ್ದರೆ; ಮಹಿಳೆಯರು ರೇಷ್ಮೆ ಸೀರೆಯುಟ್ಟ ಭಾಗವಹಿಸಿದ್ದು ಆಕರ್ಷಿಸಿತು. 30 ವರ್ಷಗಳ ನಂತರ ಸೇರಿದ ಸ್ನೇಹಿತರು, ಸಂತಸ ಹಂಚಿಕೊಂಡರು. ತಮ್ಮ ಕುಟುಂಬದವರನ್ನು ಪರಿಚಯಿಸಿ, ಉದ್ಯೋಗ, ಮಕ್ಕಳ ಶಿಕ್ಷಣ, ತಾಯಿ–ತಂದೆಯರ ಕುರಿತು ಮಾತನಾಡಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಅಲ್ಲಮಪ್ರಭುದೇವರ ಮಠದ ಸಿದ್ಧಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿದರು. ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಶರಣು ಗೋಗೇರಿ, ಡಿಡಿಪಿಐ ಆರ್.ಎಸ್. ಬುರಡಿ, ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶಂಕರ ಹಡಗಲಿ, ಮುಖ್ಯಶಿಕ್ಷಕ ಕೆ.ಬಿ. ಕೊಣ್ಣೂರು, ಎ.ಕೆ. ಪೂಜಾರ, ಎಸ್ಡಿಎಂಸಿ ಅಧ್ಯಕ್ಷ ಗವಿಸಿದ್ದಯ್ಯ ಯಲಿಶಿರುಂಜ ಇದ್ದರು.

ನಿವೃತ್ತ ಯೋಧ ಬಸವರಾಜ ಕುಕನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುರಾಜ ಬೆಂತೂರು ಸ್ವಾಗತಿಸಿದರು. ಮಹೇಶ ವಡ್ಡಿನ ನಿರೂಪಿಸಿದರು. ಹನುಮಂತಪ್ಪ ಹಟ್ಟಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-23-1819652532

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.