ಲಕ್ಷ್ಮೇಶ್ವರ: ಪಟ್ಟಣದಲ್ಲಿರುವ ಎಪಿಎಂಸಿ ಕಚೇರಿ ಸಿಬ್ಬಂದಿ ಕೊರತೆಯಿಂದ ಬಳಲಿದೆ. ಕಾಯಂ ಸಿಬ್ಬಂದಿ ಇಲ್ಲದ ಕಾರಣ ಕೆಲಸಗಳು ವಿಳಂಬವಾಗುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಗದಗ ಹೊರತುಪಡಿಸಿದರೆ ಲಕ್ಷ್ಮೇಶ್ವರದ ಎಪಿಎಂಸಿಯಲ್ಲಿ ವಹಿವಾಟು ಜೋರಾಗಿದೆ. ತಾಲ್ಲೂಕಿನ ಬಾಜೂ ಇರುವ ಸವಣೂರು ಮತ್ತು ಕುಂದಗೋಳ ತಾಲ್ಲೂಕಿನ ರೈತರು ಫಸಲು ಮಾರಾಟ ಮಾಡಲು ಬರುತ್ತಾರೆ. ಪ್ರತಿ ಶುಕ್ರವಾರ ಜಾನುವಾರು ಸಂತೆ ಭರ್ಜರಿಯಾಗಿ ನಡೆಯುತ್ತದೆ. ಪ್ರತಿದಿನ ನಸುಕಿನಲ್ಲಿ ತರಕಾರಿ ಹರಾಜು ನಡೆದರೆ; ಬಳಿಕ ದಲಾಲಿ ಅಂಗಡಿಗಳು ಕಾರ್ಯಾರಂಭ ಮಾಡುತ್ತವೆ. ಇಲ್ಲಿ ಒಟ್ಟು 30 ದಲಾಲಿ ಅಂಗಡಿಗಳು ಇದ್ದು 150ಕ್ಕೂ ಹೆಚ್ಚು ಖರೀದಿದಾರರು ಇದ್ದಾರೆ.

ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಯಲವಗಿ, ಕೃಷ್ಣಾಪುರ, ಹೂವಿನಶಿಗ್ಲಿ, ಬಸವನಕೊಪ್ಪ, ಕೆರೆಕೊಪ್ಪ, ಗುಡಸಲಕೊಪ್ಪ, ನಾಯಿಕೆರೂರು, ಹೊನ್ನಿಕೊಪ್ಪ, ಕಡಕೋಳ, ಸಿದ್ದಾಪುರ, ಇಚ್ಚಂಗಿ, ಹತ್ತಿಮತ್ತೂರು, ಅಗಡಿ, ಕರ್ಜಗಿ ಹಾಗೂ ಕುಂದಗೋಳ ತಾಲ್ಲೂಕಿನ ಕುಂದಗೋಳ, ಗುಂಜಳ, ಸಂಕ್ಲಿಪೂರ, ಕಳಸ, ಹರ್ಲಾಪುರ, ಗುಡಗೇರಿ, ಅತ್ತಿಗೇರಿ, ಹುಲಗೂರು, ತರ್ಲಘಟ್ಟ, ಸಂಶಿ, ಶಿರೂರು, ಕಮಡೊಳ್ಳಿ ಸೇರಿ ಇನ್ನೂ ಹತ್ತಾರು ಊರುಗಳಿಂದ ನೂರಾರು ರೈತರು ಇಲ್ಲಿಗೆ ಬರುತ್ತಾರೆ. ಆದರೆ, ಇಷ್ಟೊಂದು ವಿಶಾಲವಾದ ಎಪಿಎಂಸಿಗೆ ಸಿಬ್ಬಂದಿ ಕೊರತೆ ಕಾಡುತ್ತಿದೆ.

ಲಕ್ಷ್ಮೇಶ್ವರ ಎಪಿಎಂಸಿಗೆ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ, ಲೆಕ್ಕಿಗ, ಪ್ರಥಮದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಮೂವರು ಮಾರಾಟ ಸಹಾಯಕರು, ಇಬ್ಬರು ಗ್ರೇಡರ್, ಬೆರಳಚ್ಚುಗಾರ, ವಾಹನ ಚಾಲಕ, ಮೂವರು ಸಿಪಾಯಿ, ಮಾರುಕಟ್ಟೆ ಮೇಲ್ವಿಚಾರಕರು ಸೇರಿ ಒಟ್ಟು 16 ಹುದ್ದೆಗಳು ಮಂಜೂರಾಗಿವೆ. ಆದರೆ, ಕಾರ್ಯದರ್ಶಿ ಹೊರತುಪಡಿಸಿದರೆ ಉಳಿದ ಸಿಬ್ಬಂದಿಯನ್ನು ಭರ್ತಿ ಮಾಡಿಲ್ಲ. ಈಗ ಏಳು ಜನರು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಕಾಯಂ ಸಿಬ್ಬಂದಿ ಇಲ್ಲದ ಕಾರಣ ಕೆಲಸ ಕಾರ್ಯಗಳು ವಿಳಂಬ ಆಗುತ್ತಿವೆ.

‘ಲಕ್ಷ್ಮೇಶ್ವರ ಎಪಿಎಂಸಿಯಲ್ಲಿ ಪೂರ್ಣ ಸಿಬ್ಬಂದಿ ಇಲ್ಲದ ಕಾರಣ ಕೆಲಸದಲ್ಲಿ ಸ್ವಲ್ಪ ವಿಳಂಬ ಆಗುತ್ತಿದೆ. ಸದ್ಯಕ್ಕೆ ಇರುವ ಸಿಬ್ಬಂದಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಇದ್ದರೆ ಕೆಲಸಗಳು ಮತ್ತಷ್ಟು ಬೇಗ ಆಗುತ್ತವೆ. ಆದಕಾರಣ ಸರ್ಕಾರ ಅಗತ್ಯ ಇರುವಷ್ಟು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು’ ಎಂದು ಎಪಿಎಂಸಿ ವರ್ತಕರ ಸಂಘದ ಕಾರ್ಯದರ್ಶಿ ಎಸ್.ಕೆ.ಕಾಳಪ್ಪನವರ ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-23-51080868

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.