ಲಕ್ಷ್ಮೇಶ್ವರ: ‘59 ವರ್ಷಗಳಿಂದ ಆಸ್ತಮಾ ರೋಗಿಗಳಿಗೆ ಉಚಿತವಾಗಿ ಔಷಧವನ್ನು ವಿತರಿಸುವ ಮೂಲಕ ಲಕ್ಷ್ಮೇಶ್ವರದ ಕೀರ್ತಿಯನ್ನು ದೇಶದ ಉದ್ದಗಲಕ್ಕೂ ಹಬ್ಬುವಂತೆ ಮಾಡಿದ್ದ ದಿ. ಡಾ. ಬಾಬುರಾವ್ ಕುಲಕರ್ಣಿ ಅವರ ಸೇವೆ ಅಪಾರ’ ಎಂದು ಮುಖಂಡ ಕೃಷ್ಣ ಕುಲಕರ್ಣಿ ಹೇಳಿದರು.

60ನೇ ವರ್ಷದ ಆಸ್ತಮಾ ಔಷಧ ಉಚಿತ ವಿತರಣಾ ಕಾರ್ಯಕ್ರಮದ ಅಂಗವಾಗಿ ಪಟ್ಟಣದಲ್ಲಿರುವ ದಿ. ಬಾಬುರಾವ್ ಕುಲಕರ್ಣಿ ಅವರ ನಿವಾಸದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪುರಸಭೆ ಮಾಜಿ ಅಧ್ಯಕ್ಷ ವಿ.ಜಿ. ಪಡಗೇರಿ ಮಾತನಾಡಿ, ‘ಬಾಬುರಾವ್ ಕುಲಕರ್ಣಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ಸಾಗೋಣ. 60ನೇ ವರ್ಷದ ಆಸ್ತಮಾ ಯಜ್ಞವನ್ನು ಯಶಸ್ವಿಗೊಳಿಸೋಣ’ ಎಂದರು.

ಮುಖಂಡ ಗೋಪಾಲ ಪಡ್ನೀಸ್ ಮಾತನಾಡಿ, ‘ಜೂನ್ 8ರಂದು ಸಂಜೆ 7 ಗಂಟೆ ಸುಮಾರಿಗೆ ಡಾ. ಹರೀಶ ಕುಲಕರ್ಣಿ ನೇತೃತ್ವದಲ್ಲಿ ಲಕ್ಷ್ಮೇಶ್ವರದ ಸರ್ಕಾರಿ ಪ್ರಾಥಮಿಕ ಶಾಲೆ ನಂ.1ರ ಆವರಣದಲ್ಲಿ ಆಸ್ತಮಾ ಯಜ್ಞ ನಡೆಯಲಿದೆ. ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಬೇಕಿದೆ’ ಎಂದು ತಿಳಿಸಿದರು.

ಪಲ್ಲಣ್ಣ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ನಿಂಗಪ್ಪ ಬನ್ನಿ ಮಾತನಾಡಿದರು. ಪಾಪಣ್ಣ ಬನ್ನಿ, ಪುಟ್ಟಪ್ಪ ಕೋರಿ, ದ್ಯಾಮಣ್ಣ ಕಲ್ಯಾಣ, ಮಲ್ಲಪ್ಪ ಬನ್ನಿ, ಶೇಖಪ್ಪ ಪೂಜಾರ, ಶಂಕ್ರಪ್ಪ ತಹಶೀಲ್ದಾರ, ಭರಮಪ್ಪ ಬನ್ನಿ, ನಿಂಗಪ್ಪ ಗೊರವರ, ಬಾಬಣ್ಣ ಖಂಡ್ರೆನವರ, ಅಡಿವೆಪ್ಪ ಮಾಮನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-23-1315483966

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.