ಲಕ್ಷ್ಮೇಶ್ವರ: 'ಸಹಕಾರ ಸಂಘಗಳಿಂದ ಪಡೆದ ಸಾಲವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮತ್ತು ಸಕಾಲಕ್ಕೆ ಸಾಲವನ್ನು ಮರು ಪಾವತಿ ಮಾಡಬೇಕು. ಅಂದಾಗ ಮಾತ್ರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಕೆಸಿಸಿ ಬ್ಯಾಂಕಿನ ನಿರ್ದೇಶಕ ಜಿ.ವಿ. ಪಾಟೀಲ ಹೇಳಿದರು.

ತಾಲ್ಲೂಕಿನ ಸೂರಣಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಂಗಳವಾರ ರೈತ ಫಲಾನುಭವಿಗೆ ಕಡಿಮೆ ಬಡ್ಡಿ ದರದಲ್ಲಿ ಟ್ರ್ಯಾಕ್ಟರ್ ವಿತರಿಸಿ ಅವರು ಮಾತನಾಡಿದರು.

‘ರೈತರ ಅನುಕೂಲಕ್ಕಾಗಿ ಹೈನುಗಾರಿಕೆ ನಡೆಸಲು ಮತ್ತು ಅಡಿಕೆ ಹಾಗೂ ಬಾಳೆ ಬೆಳೆಯಲು ಕಡಿಮೆ ಬಡ್ಡಿಯಲ್ಲಿ ಸಾಲ ವಿತರಿಸಲಾಗುತ್ತಿದೆ. ಈವರೆಗೆ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲ್ಲೂಕುಗಳಲ್ಲಿ ಎರಡನೂರಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳನ್ನು ರೈತರಿಗೆ ವಿತರಿಸಲಾಗಿದೆ. ಇನ್ನೂ ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗಿದೆ’ ಎಂದು ತಿಳಿಸಿದರು.

ಸೂರಣಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಶಶಿಕಲಾ ಬಸವರಾಜ ಸಾಸಲವಾಡ, ಉಪಾಧ್ಯಕ್ಷ ಪ್ರಕಾಶ ಕಳ್ಳಿಹಾಳ, ನಿರ್ದೇಶಕರಾದ ಚಂದ್ರಶೇಖರ ಮೂಲಿಮನಿ, ಮಲ್ಲಿಕಾರ್ಜುನಯ್ಯ ಹಿರೇಮಠ, ಶಿದ್ದಯ್ಯ ಮಾದಾಪುರಮಠ, ಫಕ್ಕೀರಪ್ಪ ಇಟಗಿ, ಮಹಮ್ಮದಆಸೀಪ್ ಗೋನಾಳ, ಸುರೇಶ ಕಾಕೋಳ, ಲಕ್ಕಪ್ಪ ದಾಸರ, ರಾಮಣ್ಣ ಕಾಶಿಕೋವಿ, ಶಕುಂತಲಾ ಶಂಕ್ರಪ್ಪ ಶೀರನಹಳ್ಳಿ, ಲಕ್ಷ್ಮೀ ಶರಣಪ್ಪ ಪೂಜಾರ, ಬಸವರಾಜ ಸಾಸಲವಾಡ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-23-987389803

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.