ಲಕ್ಷ್ಮೇಶ್ವರ: ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಮಳೆ ವಿಳಂಬವಾದ ಕಾರಣ, ಆದಷ್ಟು ಬೇಗನೇ ಮಳೆ ಸುರಿಯಲಿ ಎಂದು ಪ್ರಾರ್ಥಿಸಿ ತಾಲ್ಲೂಕಿನ ಗೊಜನೂರು ಗ್ರಾಮದ ರೈತರು ದೇವರ ಮೊರೆ ಹೋಗಿದ್ದಾರೆ.

ರೈತರು ಮಾಗಿ ಉಳುಮೆ ಮಾಡಿಕೊಂಡು ಮುಂಗಾರು ಬಿತ್ತನೆಗಾಗಿ ಕಾದು ಕುಳಿತಿದ್ದಾರೆ. ಮುಂಗಾರು ಪೂರ್ವ ಅಶ್ವಿನಿ, ಭರಣಿ, ಕೃತಿಕಾ ಮಳೆಗಳು ಸುರಿದು ಕೆರೆ ಕಟ್ಟೆಗಳಿಗೆ ನೀರು ಬರಬೇಕಾಗಿತ್ತು. ಆದರೆ ಮೂರೂ ಮಳೆಗಳು ಕೈಕೊಟ್ಟಿವೆ. ಕೃತಿಕಾ ಮತ್ತು ರೋಹಿಣಿ ಮಳೆ ಆದರೆ ಮಾತ್ರ ಹೆಸರು, ಎಳ್ಳು, ಹೈಬ್ರೀಡ್ ಜೋಳದ ಬಿತ್ತನೆ ಸಾಧ್ಯ. ಆದ್ದರಿಂದ ಗ್ರಾಮದ ಮಲ್ಲಿಕಾರ್ಜುನ ತರುಣ ಭಜನೆ ಸಂಘದ ಸದಸ್ಯರು ಗುಡ್ಡದ ಮೇಲಿರುವ ಗೋಲಕವ್ವಾ ದೇವಿಗೆ ಮಂಗಳವಾರ ಉಡಿ ತುಂಬಿ ಭಜನೆ ಮಾಡಿ ಪ್ರಾರ್ಥಿಸಿದರು.

‘ಮಳೆ ವಿಳಂಬ ಆದಾಗ ನಮ್ಮೂರಿನ ಗುಡ್ಡದ ಮೇಲಿರುವ ಗ್ವಾಲಕವ್ವ ದೇವಿಗೆ ಉಡಿ ತುಂಬಿ ಜೋಳದ ಕಿಚಡಿ ಸಾಂಬಾರ ನೈವೇದ್ಯ ಮಾಡಿದರೆ ಮಳೆ ಆಗುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ’ ಎಂದು ರೈತ ಮುಖಂಡ ಚನ್ನಪ್ಪ ಷಣ್ಮುಖಿ ತಿಳಿಸಿದರು.

ಬಾಪೂಗೌಡ ಪಾಟೀಲ, ಹನಮಂತಪ್ಪ ಹೂಗಾರ, ಈರಯ್ಯ ಹಿರೇಮಠ, ಮಲ್ಲಪ್ಪ ದೇವರೊಳ್ಳಿ, ಅಜ್ಜಪ್ಪ ಪಾಟೀಲ, ರುದ್ರಗೌಡ ಪಾಟೀಲ, ಪಕ್ಕೀರೇಶ ಚಿಕ್ಕಗಸಿ, ಜೋಗಮ್ಮ ಚಿನ್ನಮ್ಮ ದುರಗಣ್ಣವರ, ಗಿರಿಜವ್ವ ಹೂಗಾರ, ಲಕ್ಷ್ಮವ್ವ ದೊಡ್ಡಮನಿ, ನೀಲವ್ವ ಪಾಟೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-23-1994348367

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.