ಲಕ್ಷ್ಮೇಶ್ವರ: ‘ಇಂದು ಜಗತ್ತಿನ ಎಲ್ಲೆಡೆ ಕಾಡುತ್ತಿರುವ ಯುದ್ಧ, ಘರ್ಷಣೆ, ರಕ್ತಪಾತಗಳಿಗೆ ಭಗವಾನ್ ಮಹಾವೀರರ ತತ್ವ ಹಾಗೂ ಸಿದ್ದಾಂತಗಳೇ ಪರಿಹಾರ. ಸತ್ಯ, ಶಾಂತಿ, ಅಹಿಂಸೆ ಪರಮಧರ್ಮ ಆಗಬೇಕಾಗಿದೆ’ ಎಂದು ಸಾಹಿತಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಜೈನಶಾಸ್ತ್ರ ಅಧ್ಯಯನ ಪೀಠದ ಸಂಯೋಜಕ ಜಿನದತ್ತ ಹಡಗಲಿ ಹೇಳಿದರು.

ಲಕ್ಷ್ಮೇಶ್ವರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶಿಕ್ಷಕ ಎಲ್.ಆರ್.ಮಲ್ಲಸಮುದ್ರ ಅವರ ನಿವಾಸದಲ್ಲಿ ಸೋಮವಾರ ನಡೆದ ಮಾಸದ ಮಾತು ಕಾರ್ಯಕ್ರಮ ಸರಣಿಯ 31ನೇ ಕಾರ್ಯಕ್ರಮದಲ್ಲಿ ಭಗವಾನ್ ಮಹಾವೀರ ಜಯಂತಿ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಕ ಎಲ್.ಆರ್.ಮಲ್ಲಸಮುದ್ರ ಮಾತನಾಡಿ, ‘ಭಗವಾನ್ ಮಹಾವೀರರ ವಿಚಾರಗಳನ್ನು ಅರಿತು ಆಚರಿಸಬೇಕಾಗಿದೆ’ ಎಂದರು.

ವಿಕಲಚೇತನ ನೌಕರರ ಸಂಘದ ಗೌರವಾಧ್ಯಕ್ಷ ಬಿ.ಎಂ.ಕುಂಬಾರ ಮಾತನಾಡಿದರು.

ಹಿರಿಯ ವಕೀಲ ಎ.ಬಿ. ಪಾಟೀಲ, ‘ಸದಾ ಅಹಿಂಸೆಯನ್ನೇ ಪ್ರತಿಪಾದಿಸುವ ಜೈನ ಧರ್ಮೀಯರು ಚಿಕ್ಕೋಡಿಯಲ್ಲಿ ಜೈನ ಮುನಿಯೊಬ್ಬರನ್ನು ಹತ್ಯೆ ಮಾಡಿದಾಗಲೂ ಹತ್ಯೆ ಮಾಡಿದವರನ್ನು ಕ್ಷಮಿಸಿದ್ದು ಜಗತ್ತಿಗೆ ಮಾದರಿ’ ಎಂದರು.

ಚಿಂತಕ ಅನಂತರಾಜ ಮಿಣಜಗಿ ‘ವರ್ಧಮಾನ ಮಹಾವೀರರ ತತ್ವಗಳು, ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲವು’ ಎಂದು ಹೇಳಿದರು.

ದಿಗಂಬರ ಜೈನ ಸಮಾಜದ ಅಧ್ಯಕ್ಷ ಸುರೇಂದ್ರಗೌಡ ಪಾಟೀಲ, ನಿವೃತ್ತ ಶಿಕ್ಷಕ ಎನ್.ಒ.ಹಡಗಲಿ, ಎ.ಎಂ.ಮಠದ, ಶ್ರಾವಕಿಯರಾದ ಸಾವಿತ್ರಮ್ಮ ಲಕ್ಷ್ಮಣ ಮಲ್ಲಸಮುದ್ರ, ಶಾಂತಾ ಮಹಾವೀರಗೌಡ್ರು ಪಾಟೀಲ, ಸೌಮ್ಯ ಪಂಡಿತ, ವನಮಾಲಾ ಪಾಟೀಲ, ಭಗವಾನ್ ಮಹಾವೀರರ ಗಾನಾಂಜಲಿ ಕಾರ್ಯಕ್ರಮ ನಡೆಸಿಕೊಟ್ಟರು.

ಸಪ್ತಮಿ ಮಂಜುನಾಥ ಗೊರವರ ಸಿತಾರ್ ವಾದನ ನುಡಿಸಿದರು. ಲಕ್ಷ್ಮೇಶ್ವರ ತಾಲ್ಲೂಕು ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ, ಈರಣ್ಣ ಗಾಣಿಗೇರ, ಎಸ್.ಬಿ. ಅಣ್ಣಿಗೇರಿ, ಈರಣ್ಣ ಅಕ್ಕೂರ, ನಾಗರಾಜ ಮಜ್ಜಿಗುಡ್ಡ, ಐ.ಎ. ಬಳಿಗಾರ ಸೇರಿದಂತೆ ಅನೇಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-23-80650116

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.