ಲಕ್ಷ್ಮೇಶ್ವರ: ಪಟ್ಟಣದಲ್ಲಿ ಭಾನುವಾರ ಸಂಜೆ ಗುಡುಗು ಮಿಂಚುಸಹಿತ ಭಾರಿ ಗಾಳಿಯೊಂದಿಗೆ ಮಳೆ ಸುರಿಯಿತು.

ಮಳೆಗಿಂತ ಗುಡುಗು, ಮಿಂಚು, ಸಿಡಿಲು ಹಾಗೂ ಗಾಳಿಯ ಆರ್ಭಟವೇ ಜೋರಾಗಿತ್ತು. ಗಾಳಿಯ ಆರ್ಭಟಕ್ಕೆ ಕೆಲ ಕಡೆ ಕಟ್ಟಿದ್ದ ಬ್ಯಾನರ್ಗಳು ಕಿತ್ತುಕೊಂಡು ಹಾರಿಹೋದವು. ಪೋಸ್ಟ್ ಆಫೀಸ್ ಹತ್ತಿರ ಗ್ಯಾರೇಜ್ಗೆ ಹಾಕಿದ್ದ ಕೆಲ ತಗಡುಗಳು ಕಿತ್ತುಕೊಂಡು ಹೋದವು. ಪಶು ಆಸ್ಪತ್ರೆಯ ಕಾಂಪೌಂಡ್ ಹತ್ತಿರ ನಿಂತಿದ್ದ ಕಾರಿನ ಮೇಲೆ ಗಿಡದ ಟೊಂಗೆ ಬಿದ್ದು, ಹಾನಿಯಾಯಿತು.

ಪಟ್ಟಣದ ಕೆಂಚಲಾಪುರ ಓಣಿಯ ಹತ್ತಿರ ಜೋಗಿನ ಹಳ್ಳದ ನೀರು ಹರಿಯುವ ಸೇತುವೆಗೆ ಅಡ್ಡಲಾಗಿ ಕಸಕಡ್ಡಿ ನಿಂತಿದ್ದರಿಂದ ಮಳೆ ನೀರು ಮನೆಗಳತ್ತ ನುಗ್ಗಿತು. ಇದರಿಂದಾಗಿ ಬನಶಂಕರಿ ದೇವಸ್ಥಾನಕ್ಕೆ ಹೋಗುವ ಮುಖ್ಯ ರಸ್ತೆಯ ಜಲಾವೃತಗೊಂಡು ಸಾರ್ವಜನಿಕರಿಗೆ ತೊಂದರೆಯಾಯಿತು. ಗಾಳಿ ಬೀಸುತ್ತಲೇ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.

ಬಿಸಿಲಿನ ತಾಪದಿಂದ ತತ್ತರಿಸಿದ್ದ ಜನತೆಗೆ ಮಳೆ ಸಮಾಧಾನ ನೀಡಿದ್ದು, ರೈತರು ಮುಂಗಾರು ಬಿತ್ತನೆಗೆ ಮುಂದಾಗುವ ವಾತಾವರಣ ನಿರ್ಮಾಣವಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-23-2022979306

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.