ಲಕ್ಷ್ಮೇಶ್ವರ: ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರಿನ ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳ ಕಟ್ಟಡ ಅವ್ಯವಸ್ಥೆಗಳ ಆಗರವಾಗಿದೆ. ಕಟ್ಟಡದ ತುಂಬ ಎಲ್ಲೆಂದರಲ್ಲಿ ಕಸದ ಗುಂಪಿಗಳು ತುಂಬಿಕೊಂಡಿದ್ದು, ಇಡೀ ಕಟ್ಟಡ ಮಲಿನದ ಗುಂಡಿಯಂತೆ ಕಾಣುತ್ತಿದೆ.

25ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ಇಲ್ಲಿದ್ದು, ಅವುಗಳಲ್ಲಿ ಹೆಚ್ಚಾಗಿ ಮಾಂಸ ಮಾರಾಟ, ಎಗ್ರೈಸ್ ಅಂಗಡಿಗಳೇ ಜಾಸ್ತಿ ಇವೆ. ಸರ್ಕಾರದ ನಿಯಮದ ಪ್ರಕಾರ ವಾಣಿಜ್ಯ ಮಳಿಗೆಯ ಕಟ್ಟಡದಲ್ಲಿ ಮಾಂಸ ಮಾರಾಟ ನಿಷಿದ್ಧ. ಆದರೆ ಇಲ್ಲಿ ಸರ್ಕಾರದ ಆದೇಶಕ್ಕೆ ಯಾವುದೇ ಕಿಮ್ಮತ್ತು ಇಲ್ಲ.

ಇನ್ನು ಕಟ್ಟಡದ ಎದುರು ನಾಲ್ಕೈದು ತಳ್ಳುಗಾಡಿಯ ಚಹಾ ಅಂಗಡಿಗಳು ಇವೆ. ಬೆಳಿಗ್ಗೆ ಇಡ್ಲಿ, ವಡಾ, ದೋಸೆ ಮಾರಾಟ ಮಾಡಿದರೆ ಸಂಜೆ ಇದೇ ಜಾಗದಲ್ಲಿ ಎಗ್ರೈಸ್ ಮಾರಾಟ ನಡೆಯುತ್ತಿದೆ. ಪುರಸಭೆ ಅಧಿಕಾರಿಗಳು ಎಗ್ರೈಸ್ ಅಂಗಡಿಗಳಿಗೆ ಪರವಾನಗಿ ಕೊಟ್ಟಿದ್ದಾರೆ. ಆದರೆ ಅಲ್ಲಿ ಮಾರಾಟ ಆಗುವ ಎಗ್ರೈಸ್ನ ಗುಣಮಟ್ಟದ ಬಗ್ಗೆ ಗಮನ ಕೊಟ್ಟಿಲ್ಲ.

ಎಗ್ರೈಸ್ಗೆ ರುಚಿ ಪೌಡರ್, ಚಿಕನ್ ಮತ್ತು ಕರಿದ ಮೀನುಗಳಿಗೆ ಕೃತಕ ರಾಸಾಯನಿಕ ಬಣ್ಣಗಳ ಬಳಕೆ ನಡೆಯುತ್ತಿದೆ. ಇದು ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಕಟ್ಟಡದ ಎದುರಿನ ಅಂಗಡಿಗಳ ತ್ಯಾಜ್ಯ ಅಲ್ಲಿರುವ ಚರಂಡಿಯನ್ನು ಸೇರುತ್ತಿದ್ದು, ಕೊಳೆತು ಗಬ್ಬು ನಾರುತ್ತಿದೆ. ಆದರೂ ಪುರಸಭೆ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ.

‘ಪುರಸಭೆ ವಾಣಿಜ್ಯ ಮಳಿಗೆಗಳಲ್ಲಿ ಅನಧಿಕೃತ ವ್ಯಾಪಾರಸ್ಥರೇ ತುಂಬಿಕೊಂಡಿದ್ದು, ಮೂಲ ಮಾಲೀಕರೇ ಇಲ್ಲ. ಅವರು ತಮ್ಮ ಮಳಿಗೆಯನ್ನು ಹೆಚ್ಚಿನ ಬಾಡಿಗೆಗೆ ಕೊಟ್ಟಿರುವ ಬಗ್ಗೆ ಶಂಕೆ ಇದೆ. ಅಲ್ಲದೆ ಮಳಿಗೆಗಳಲ್ಲಿ ಸರ್ಕಾರದ ನಿಯಮಗಳ ಪ್ರಕಾರ ವ್ಯಾಪಾರ ನಡೆಯುತ್ತಿಲ್ಲ. ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಮಾಂಸದ ಆಹಾರ ಪದಾರ್ಥಗಳ ಮಾರಾಟ ನಡೆಯುತ್ತಿದೆ. ಅಲ್ಲದೆ ಇಡೀ ಕಟ್ಟಡದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆ ಆಗಿದ್ದು, ಈ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಗೋಡಿ ಆರೋಪಿಸಿದರು.

‘ಮಾಂಸ ಮಾರಾಟಗಾರರ ವಿರುದ್ಧ ಕ್ರಮ’

‘ವಾಣಿಜ್ಯ ಮಳಿಗೆಗಳಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವವನ್ನು ಪತ್ತೆ ಹಚ್ಚಿ ಅವರನ್ನು ಅಲ್ಲಿಂದ ತೆರವುಗೊಳಿಸಲಾಗುವುದು. ಅಲ್ಲದೆ ಮಾಂಸ ಮಾರಾಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಅಂಗಡಿಗಳ ಮಾಲೀಕರು ಚರಂಡಿಯಲ್ಲಿ ಕಸ ಮುಸುರಿ ಹಾಕಬಾರದು’ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.