ಲಕ್ಷ್ಮೇಶ್ವರ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ವಿತರಿಸಲಾಗುತ್ತಿರುವ ಕಿಟ್ಗಳಲ್ಲಿನ ವಸ್ತುಗಳು ಸಂಪೂರ್ಣ ಕಳಪೆ ಆಗಿವೆ. ಈ ಹಿಂದೆ ವಿತರಿಸಲು ತರಿಸಿದ್ದ ಕಿಟ್ಗಳನ್ನೇ ಇಂದು ಇಲಾಖೆ ಮತ್ತೆ ಕಾರ್ಮಿಕರಿಗೆ ವಿತರಿಸುತ್ತಿದೆ. ಕಿಟ್ ಪೂರೈಕೆ ಮಾಡಿರುವ ಗುತ್ತಿಗೆದಾರರು ಕಳಪೆ ವಸ್ತುಗಳನ್ನು ಕಿಟ್ನಲ್ಲಿ ಇಟ್ಟಿದ್ದಾರೆ’ ಎಂದು ಶಾಸಕ ಡಾ.ಚಂದ್ರು ಲಮಾಣಿ ಆರೋಪಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಬುಧವಾರ ಕಟ್ಟಡ, ಎಲೆಕ್ಟ್ರಿಷಿಯನ್, ಪ್ಲಂಬರ್, ವೆಲ್ಡರ್ ಮತ್ತು ಪೇಂಟರ್ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಬಂದಿರುವ ಕಿಟ್ಗಳನ್ನು ವಿತರಿಸಿ ಅವರು ಮಾತನಾಡಿದರು.

‘ಈ ಹಿಂದೆ ಇದೇ ಕಿಟ್ಗಳನ್ನು ವಿತರಿಸಲು ಇಲಾಖೆ ಮುಂದಾಗಿತ್ತು. ಆಗ ಗುಣಮಟ್ಟದ ವಸ್ತುಗಳನ್ನು ಕಳುಹಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೆ. ಆದರೂ ಅದೇ ಕಿಟ್ಗಳನ್ನು ವಿತರಿಸಲು ತಂದಿದ್ದಾರೆ. ಸದ್ಯ ನಾನು ಕಿಟ್ ವಿತರಿಸದಿದ್ದರೆ ಕಾರ್ಮಿಕರು ನನ್ನ ಬಗ್ಗೆ ತಪ್ಪು ತಿಳಿದುಕೊಳ್ಳುತ್ತಾರೆ ಎಂಬ ಒಂದೇ ಕಾರಣಕ್ಕಾಗಿ ಮನಸ್ಸು ಒಪ್ಪದಿದ್ದರೂ ಕೂಡ ಕಿಟ್ ಕೊಡುತ್ತಿದ್ದೇನೆ’ ಎಂದು ಹೇಳಿದ ಅವರು ‘ಕಾರ್ಮಿಕರು ಅನಾರೋಗ್ಯದಿಂದ ಬಳಲುತ್ತಿರವವರಿಗೆ ವಿವಿಧ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸಿಗುತ್ತಿದೆ. ಈ ಕುರಿತು ಕಾರ್ಮಿಕರ ಸಂಘಗಳ ಪದಾಧಿಕಾರಿಗಳು ಹಾಗೂ ಇಲಾಖೆ ಅಧಿಕಾರಿಗಳು ಕಾರ್ಮಿಕರಿಗೆ ಸಂಪೂರ್ಣ ಮಾಹಿತಿ ಕೊಡಬೇಕು. ಮಾಹಿತಿ ಗೊತ್ತಿಲ್ಲದ ಎಷ್ಟೋ ಕಾರ್ಮಿಕರು ಹಣ ಖರ್ಚು ಮಾಡಿ ಚಿಕಿತ್ಸೆ ಪಡೆಯುವಂತಾಗಿದೆ’ ಎಂದು ಹೇಳಿದರು.

‘ಚಿಕಿತ್ಸೆಗಾಗಿ ಆನ್ಲೈನ್ನಲ್ಲಿ ಅರ್ಜಿ ಹಾಕಿದ ನಂತರ ಕಾರ್ಮಿಕ ಸಂಘಗಳ ಪದಾಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದಾಗ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸುತ್ತೇವೆ. ಇಂತಿಷ್ಟು ಹಣ ಕೊಡಬೇಕು ಎಂದು ಪೀಡಿಸುತ್ತಿದ್ದಾರೆ ಎಂದು ಕಾರ್ಮಿಕರೋರ್ವರು ಆರೋಪಿಸಿದರು. ‘ಹಣ ಕೇಳುವ ಕಾರ್ಮಿಕ ಸಂಘಗಳ ಪದಾಧಿಕಾರಿಗಳ ಕುರಿತು ಪೂರ್ಣ ಮಾಹಿತಿ ನೀಡಿದರೆ ಕ್ರಮಕೈಗೊಳ್ಳಲಾಗುವುದು’ ಎಂದು ಶಾಸಕ ಲಮಾಣಿ ತಿಳಿಸಿದರು.

ಕಾರ್ಮಿಕ ಇಲಾಖೆ ಅಧಿಕಾರಿ ಅಭಿನಂದನ, ತಾಲ್ಲೂಕು ಪಂಚಾಯ್ತಿ ಇಒ ಮಂಜುಳಾ ಹಕಾರೆ, ನರೇಗಾ ಎಡಿ ಕೃಷ್ಣಪ್ಪ ಧರ್ಮರ, ಚವಡಿ ಮೌನೇಶ ಬಾಲೆಹೊಸೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-23-1582490268

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.