ಲಕ್ಷ್ಮೇಶ್ವರ: ಮಳೆಗಾಗಿ ಪ್ರಾರ್ಥಿಸಿ ಪಟ್ಟಣದ ಹಳ್ಳದಕೇರಿ ಓಣಿಯ ಸಾಲಾವಳಿ ಬಸವಣ್ಣ ದೇವರ ದೇವಸ್ಥಾನದಲ್ಲಿ ಸೋಮವಾರದಿಂದ ಕರೇವಾಡಿಮಠದ ಮರಿಸ್ವಾಮೀಜಿ ಮಂಜುನಾಥ ದೇವರು ಮೌನಾನುಷ್ಠಾನ ಕೈಗೊಂಡಿದ್ದಾರೆ.

ಕರೇವಾಡಿಮಠದ ಮಳೆಮಲ್ಲಿಕಾರ್ಜುನ ಶಿವಾಚಾರ್ಯರ ಮಾರ್ಗದರ್ಶನದ ಮೇರೆಗೆ ಮಂಜುನಾಥ ದೇವರು ಅನುಷ್ಠಾನಕ್ಕೆ ಮುಂದಾಗಿದ್ದಾರೆ.

ಮಳೆ ಕೈಕೊಟ್ಟಾಗ ಇದೇ ಸಾಲಾವಳಿ ಬಸವಣ್ಣ ದೇವರ ದೇವಸ್ಥಾನದಲ್ಲಿ ಓಣಿಯ ನಿವಾಸಿಗಳು ಹಗಲೂ ರಾತ್ರಿ ಭಜನೆ ಮಾಡುತ್ತಾ ಬಂದಿದ್ದಾರೆ. ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದು ರೈತರು ಈಗಾಗಲೇ ಬಿತ್ತನೆ ಕಾರ್ಯ ಮುಗಿಸುವ ಹಂತದಲ್ಲಿದ್ದಾರೆ. ಆದರೆ ಕಳೆದ ಒಂದು ವಾರದಿಂದ ಮಳೆ ಬಂದಿಲ್ಲ. ಇದರಿಂದಾಗಿ ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆಯಲು ಸಮಸ್ಯೆ ಉಂಟಾಗಿದೆ. ಸಾಲಾವಳಿ ಬಸವಣ್ಣ ದೇವರ ದೇವಸ್ಥಾನದಲ್ಲಿ ಪೂಜೆ ಹಚ್ಚಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ ಭಜನೆ ಹಚ್ಚಿದ ಸಂದರ್ಭದಲ್ಲಿ ಮಳೆ ಕೂಡ ಆಗಿದೆ.

‘ಮಂಜುನಾಥ ದೇವರು ಲೋಕಲ್ಯಾಣಾರ್ಥವಾಗಿ ಮಳೆ ಸುರಿದು ರೈತರಿಗೆ ಸುಖ ಸಮೃದ್ಧಿ ಸಿಗಲಿ ಎಂದು ಪ್ರಾರ್ಥಿಸಿ ಸೋಮವಾರದಿಂದ ಮೌನ ಅನುಷ್ಠಾನ ಕೈಗೊಂಡಿದ್ದಾರೆ. ಅವರ ಅನುಷ್ಠಾನದ ಫಲವಾಗಿ ಸೋಮವಾರವೇ ಉತ್ತಮ ಮಳೆ ಸುರಿದಿದೆ. ಹೀಗಾಗಿ ಬುಧವಾರ ಸ್ವಾಮೀಜಿ ತಮ್ಮ ಅನುಷ್ಠಾನ ಮುಕ್ತಾಯ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ ದೇವರ ಮೂರ್ತಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುವುದು. ನಂತರ ಅನ್ನ ಪ್ರಸಾದ ವಿತರಣೆ ನಡೆಯುವುದು. ಸಂಜೆ ಇದೇ ದೇವಸ್ಥಾನದ ಬಯಲಿನಲ್ಲಿ ಧರ್ಮಸಭೆ ನಡೆಯಲಿದೆ’ ಎಂದು ವೀರಭದ್ರಯ್ಯ ಹಾಗೂ ಸಂಗಯ್ಯ ಕರೇವಾಡಿಮಠ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಹಳ್ಳದಕೇರಿ ಓಣಿಯ ರೈತರು, ಹಿರಿಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-23-1933187444

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.