ಲಕ್ಷ್ಮೇಶ್ವರ: ಪ್ರತಿವರ್ಷ ಸುರಿಯುವ ಮಳೆಗೆ ಪಟ್ಟಣದ ಜನತೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಲು ಕಿಂಚಿತ್ತು ಕಾಳಜಿ ವಹಿಸದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಕೆಂಚಲಾಪುರ ಓಣಿ ಮೇಲ್ಭಾಗದಿಂದ ಲಂಡಿಹಳ್ಳ ಸೇರುವ ಜೋಗಿ ಹಳ್ಳ ಮಳೆಗಾಲದಲ್ಲಿ ವೇಗವಾಗಿ ಹರಿಯುತ್ತದೆ. ಕೆಂಚಲಾಪುರ ಓಣಿಯ ಬನಶಂಕರಿದೇವಿ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಅಡ್ಡಲಾಗಿ ಸೇತುವೆ ನಿರ್ಮಿಸುವ ಮೊದಲು ಹಳ್ಳದ ನೀರು ನೇರವಾಗಿ ಕೆಂಚಲಾಪುರ ಓಣಿಯ ಹತ್ತಾರು ಮನೆಗಳಿಗೆ ನುಗ್ಗುತ್ತಿತ್ತು. ಸೇತುವೆ ನಿರ್ಮಾಣದಿಂದಾಗಿ ಈ ಸಮಸ್ಯೆ ತಪ್ಪಿದೆ. ಆದರೆ, ಸೇತುವೆ ಪೈಪ್ಗಳಿಗೆ ಸಾಕಷ್ಟು ಕಸಕಡ್ಡಿ ಸಿಕ್ಕಿ ಹಾಕಿಕೊಂಡಿದ್ದರಿಂದ ಭಾನುವಾರ ಸುರಿದ ಬಿರುಸು ಮಳೆಗೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೇ ರಸ್ತೆ ಮೇಲೆ ನೀರು ಹರಿಯಿತು. ಇದರಿಂದಾಗಿ ಕೆಲ ಗಂಟೆಗಳ ಕಾಲ ಕೆಂಚಲಾಪುರ ಓಣಿಯ ನಿವಾಸಿಗಳು ಪಟ್ಟಣದ ಸಂಪರ್ಕ ಕಳೆದುಕೊಂಡಿದ್ದರು.

ಇನ್ನು ಇಟ್ಟಿಗೇರಿ ಕೆರೆಗೆ ನೀರು ಹರಿದು ಬರುವ ಜಾಗೆಯ ಸುತ್ತಮುತ್ತ ಹತ್ತಾರು ಮನೆಗಳು ನಿರ್ಮಾಣಗೊಂಡಿವೆ. ಮೂರು ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ಕೆರೆ ಸಂಪೂರ್ಣ ಭರ್ತಿಯಾಗಿ ಹಿನ್ನೀರು ಉಂಟಾಗಿತ್ತು. ಇದರಿಂದಾಗಿ ಸಾಯಿಬಾಬಾ ದೇವಸ್ಥಾನ ಸೇರಿ ಹತ್ತಾರು ಮನೆಗಳು ತಿಂಗಳುಗಟ್ಟಲೆ ಹಿನ್ನೀರಿನಲ್ಲಿ ಮುಳುಗಿದ್ದವು. ಈ ತೊಂದರೆ ತಪ್ಪಿಸುವ ಸಲುವಾಗಿ ಲಕ್ಷಾಂತರ ರೂಪಾಯಿ ಅನುದಾನದಲ್ಲಿ ಹಿನ್ನೀರು ನುಗ್ಗದಂತೆ ಕೆರೆಗೆ ಅಡ್ಡಲಾಗಿ ಮಣ್ಣಿನ ಬೃಹತ್ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ, ಇದು ಈಗ ಬೇರೆ ಸಮಸ್ಯೆಯನ್ನು ಸೃಷ್ಟಿಸಿದೆ. ಮಳೆ ನೀರು ಕೆರೆ ಸೇರಲು ಮಣ್ಣಿನ ತಡೆಗೋಡೆ ಅಡ್ಡವಾಗಿದ್ದು ಭಾನುವಾರ ಸುರಿದ ಬಿರುಸು ಮಳೆಗೆ ನೀರು ಮತ್ತೆ ಸಾಯಿಬಾಬಾ ದೇವಸ್ಥಾನ ಸೇರಿ ಮನೆಗಳಿಗೆ ನುಗ್ಗಿ ಆವಾಂತರ ಸೃಷ್ಟಿಸಿ ನಿವಾಸಿಗಳಲ್ಲಿ ಭಯ ಮೂಡಿಸಿತ್ತು.

ದೊಡ್ಡ ಮಳೆ ಸುರಿದಾಗೊಮ್ಮೆ ಸೋಮೇಶ್ವರ ಪಾದಗಟ್ಟಿಯಿಂದ ಬಜಾರದಲ್ಲಿನ ಹಾವಳಿ ಹನುಮಪ್ಪನ ದೇವಸ್ಥಾನದವರೆಗೆ ಮೊಣಕಾಲವರೆಗೆ ನೀರು ಹರಿಯುವುದರಿಂದ ಬೀದಿಬದಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಾರೆ. ಈ ಸಮಸ್ಯೆ ಹತ್ತಾರು ವರ್ಷಗಳಿಂದ ಇದೆ. ಹಾಗೆಯೇ ಕೆವಿಜಿ ಬ್ಯಾಂಕಿನ ಹತ್ತಿರ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ನೀರು ರಾಜ್ಯ ಹೆದ್ದಾರಿ ಮೇಲೆ ಹರಿಯುವುದರಿಂದ ಈ ಭಾಗದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತದೆ.

ಜತೆಗೆ ಹಳೆ ಬಸ್ ನಿಲ್ದಾಣದಿಂದ ವೇಗವಾಗಿ ಹರಿಯುವ ನೀರು ನೇರವಾಗಿ ತಾಯಿ ಪಾರ್ವತಿ ಮಕ್ಕಳ ಬಳಗದ ಆವರಣಕ್ಕೆ ನುಗ್ಗಿ ಅಲ್ಲಿ ಆವಾಂತರ ಸೃಷ್ಟಿಸುತ್ತದೆ. ಇಷ್ಟೆಲ್ಲ ಸಮಸ್ಯೆಗಳನ್ನು ಪ್ರತಿವರ್ಷ ಲಕ್ಷ್ಮೇಶ್ವರದ ಜನ ಅನುಭವಿಸುತ್ತಲೇ ಇದ್ದಾರೆ. ಆದರೆ ಪುರಸಭೆ ಮಾತ್ರ ಸಮಸ್ಯೆ ಪರಿಹಾರಕ್ಕೆ ಈವರೆಗೆ ಸೂಕ್ತ ಕ್ರಮಕೈಗೊಂಡಿಲ್ಲ. ಅಗತ್ಯ ಇರುವಲ್ಲಿ ರಾಜಕಾಲುವೆಗಳನ್ನು ನಿರ್ಮಿಸಿದರೆ ಮಾತ್ರ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ಈ ನಿಟ್ಟಿನಲ್ಲಿ ಪುರಸಭೆ ಕಾರ್ಯೋನ್ಮುಖ ಆಗಬೇಕು ಎಂದು ಪಟ್ಟಣದ ಜನತೆ ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-23-1209907857

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.