ಲಕ್ಷ್ಮೇಶ್ವರ: ಪಟ್ಟಣದಲ್ಲಿ ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಜನಜೀವನಕ್ಕೆ ತೊಂದರೆಯಾಗಿದೆ. ಮೊದಲೆಲ್ಲಾ ಮಳೆಯಾದರೆ ಆ ನೀರು ಇಲ್ಲಿನ ಪುರಾತನ ಇಟ್ಟಿಗೇರಿ ಕೆರೆಯತ್ತ ಹರಿಯುತ್ತಿತ್ತು. ಆದರೆ, ಈಗ ಅಭಿವೃದ್ಧಿ ಹೆಸರಲ್ಲಿ ಕೆರೆಗೆ ಅಡ್ಡಲಾಗಿ ಮಣ್ಣಿನ ತಡೆಗೋಡೆ ನಿರ್ಮಿಸಿದ್ದು, ಮಳೆನೀರು ತಡೆಗೋಡೆ ಹಿಂಭಾಗದಲ್ಲಿರುವ ನಿವಾಸಗಳತ್ತ ನುಗ್ಗುತ್ತಿದೆ. ಇದರಿಂದಾಗಿ ಮಳೆಗಾಲದಲ್ಲಿ ಈ ಭಾಗದ ನಿವಾಸಿಗಳಿಗೆ ಆತಂಕ ಶುರುವಾಗಿದೆ.

ಹಿಂದಿನಿಂದಲೂ ಮಳೆ ನೀರು ಸರಾಗವಾಗಿ ಕೆರೆಗೆ ಹರಿದು ಬರುತ್ತಿತ್ತು. ಆದರೆ, ಕೆಲವು ವರ್ಷಗಳ ಹಿಂದೆ ನೀರು ಬರುವ ಜಾಗೆಯ ಅಕ್ಕಪಕ್ಕದಲ್ಲಿ ಹತ್ತಾರು ಮನೆಗಳು ನಿರ್ಮಾಣಗೊಂಡಿವೆ. ಎರಡ್ಮೂರು ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ಇಡೀ ಕೆರೆ ತುಂಬಿ ಹಿನ್ನೀರು ಉಂಟಾಗಿತ್ತು. ಇದರಿಂದಾಗಿ ಹಿನ್ನೀರಿನಲ್ಲಿ ಹತ್ತಾರು ಮನೆ ಮತ್ತು ಸಾಯಿಬಾಬಾ ದೇವಸ್ಥಾನ ತಿಂಗಳವರೆಗೆ ಮುಳಗುಡೆ ಆಗಿದ್ದವು. ಆ ಸಮಯದಲ್ಲಿ ಹಿನ್ನೀರು ಮನೆಗಳಿಗೆ ನುಗ್ಗದಂತೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಲು ನಿರ್ಧರಿಸಲಾಗಿತ್ತು. ಅದರಂತೆ ನಾಲ್ಕೈದು ತಿಂಗಳ ಹಿಂದಷ್ಟೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕೆರೆಗೆ ಅಡ್ಡಲಾಗಿ ಮಣ್ಣಿನ ತಡೆಗೋಡೆ ಕಟ್ಟಲಾಗಿದೆ.

ಇದಾದ ಬಳಿಕ ಮತ್ತೊಂದು ಸಮಸ್ಯೆ ಸೃಷ್ಟಿಯಾಯಿತು. ಮೊದಲಿನಂತೆ ನೀರು ಸರಾಗವಾಗಿ ಕೆರೆಗೆ ಹರಿದು ಬರಲು ಸೂಕ್ತ ವ್ಯವಸ್ಥೆ ಮಾಡಿಲ್ಲವಾದ ಕಾರಣ ನೀರು ತಡೆಗೋಡೆ ಹಿಂಭಾದಲ್ಲಿರುವ ಮನೆ ಮತ್ತು ದೇವಸ್ಥಾನಕ್ಕೆ ನುಗ್ಗುತ್ತಿದೆ. ಅಲ್ಲದೇ ಈಗ ನಿರ್ಮಿಸಿರುವ ಮಣ್ಣಿನ ತಡೆಗೋಡೆ ಕೂಡ ಬಿರುಕು ಬಿಟ್ಟಿದೆ. ಮನೆಗಳತ್ತ ನೀರು ಬರುತ್ತಿರುವುದನ್ನು ಗಮನಿಸಿದ ಅಲ್ಲಿನ ನಿವಾಸಿಗಳು ಆತಂಕಗೊಂಡು ವಿಷಯವನ್ನು ಪುರಸಭೆಗೆ ಮುಟ್ಟಿಸಿದ್ದಾರೆ. ಜತೆಗೆ, ಕೆರೆಗೆ ನೀರು ಬರದಂತೆ ತಡೆಗೋಡೆ ನಿರ್ಮಿಸಿದ್ದು ಯಾವ ಪುರುಷಾರ್ಥಕ್ಕೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

‘ನಾನೂ ಹೊಸದಾಗಿ ಬಂದಿದ್ದೇನೆ. ಈ ಕುರಿತು ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-23-1103331986

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.