ಲಕ್ಷ್ಮೇಶ್ವರ: ‘ಸತ್ಸಂಗದಲ್ಲಿ ಪಾಲ್ಗೊಳ್ಳುವುದರಿಂದ ಸಮಾಜದಲ್ಲಿ ಸಾಮರಸ್ಯ ಮೂಡಲು ಸಾಧ್ಯ. ಅಲ್ಲದೆ, ಜೀವನದಲ್ಲಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಒಳ್ಳೆಯ ವಿಚಾರಗಳು ಸತ್ಸಂಗದಲ್ಲಿ ಚರ್ಚೆಗೆ ಬರುತ್ತವೆ. ಯುವ ಜನತೆ ಹೆಚ್ಚಾಗಿ ಇಂಥ ಸತ್ಸಂಗಗಳಲ್ಲಿ ಭಾಗವಹಿಸಬೇಕಾದ ಅಗತ್ಯ ಇದೆ’ ಎಂದು ಲಕ್ಷ್ಮೇಶ್ವರ ಎಪಿಎಂಸಿ ಮಾಜಿ ಅಧ್ಯಕ್ಷ ಬಸಣ್ಣ ಬೆಟಗೇರಿ ಹೇಳಿದರು.

ತಾಲ್ಲೂಕಿನ ರಾಮಗೇರಿ ಗ್ರಾಮದ ಗ್ರಾಮದೇವತೆ ದೇವಸ್ಥಾನದಲ್ಲಿ ಭಾನುವಾರ ದುರ್ಗಾದೇವಿ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ 23ನೇ ಸತ್ಸಂಗದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಮಹಾವಿದ್ಯಾಲಯಗಳ ರಾಜ್ಯಶಾಸ್ತ್ರ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಎಚ್.ಎನ್. ಕೆರೂರ ಮಾತನಾಡಿ, ‘ರಾಮಗೇರಿ ಗ್ರಾಮದಲ್ಲಿ ಹಿಂದಿನಿಂದಲೂ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಅದರ ಪರಿಣಾಮ ಇಂದು ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದೆ. ಇದು ಸತ್ಸಂಗದ ಪ್ರತಿಫಲ’ ಎಂದರು.

‘ನಾವು ಮಾಡಿದ ಸಾಧನೆ ಗೌಣವಾಗಿರಬೇಕು. ಜನ್ಮಕೊಟ್ಟ ತಂದೆ ತಾಯಿ, ಹಾಗೂ ಹುಟ್ಟಿದ ಊರನ್ನು ಎಂದಿಗೂ ಮರೆಯಬಾರದು’ ಎಂದರು ಹೇಳಿದರು.

ಪೊಲೀಸ್ ಅಧಿಕಾರಿ ಮಂಜನಗೌಡ ಪಾಟೀಲ, ಹುಬ್ಬಳ್ಳಿ ಶಹರ ಬಿಇಒ ಎಚ್.ಎಂ. ಫಡ್ನೇಶಿ ಮಾತನಾಡಿ, ‘ಪಾಲಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಥಾರ ಕಲಿಸಬೇಕು. ಸಂಸ್ಕಾರವಂತ ಮಕ್ಕಳು ದೇಶದ ದೊಡ್ಡ ಆಸ್ತಿ ಇದ್ದಂತೆ. ಬದುಕಿನಲ್ಲಿ ಕಷ್ಟಪಟ್ಟಾಗ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂಬುದನ್ನು ಯಾರೂ ಮರೆಯಬಾರದು’ ಎಂದು ತಿಳಿಸಿದರು.

ಶಿಕ್ಷಕಿ ರತ್ನ ಕುಂಬಾರ, ಪ್ರಸ್ತುತ ದಿನಮಾನದಲ್ಲಿ ನೈತಿಕತೆ ಮತ್ತು ಮೌಲ್ಯಗಳ ಮಹತ್ವ ಕುರಿತು ಉಪನ್ಯಾಸ ನೀಡಿದರು. ಯಲ್ಲಮ್ಮ ಕಲ್ಲಪ್ಪ ಬಿಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಚನಬಸಪ್ಪ ಲಿಂಗಶೆಟ್ಟಿ, ಶಿವಣ್ಣ ಬೆಟಗೇರಿ, ಅಣವೀರಪ್ಪ ಮೂರಶಿಳ್ಳಿ, ಹನಮಂತಪ್ಪ ಮ ಹಿತ್ತಲಮನಿ, ಜಗದೀಶ ಕುಮಶಿ, ಬಸವರಾಜ ಕುಬಟಿ, ಈಶ್ವರ ಹೊಸಮನಿ ಗಂಗಮ್ಮ ಕಾಳೆ, ಅಡಿವಕ್ಕ ನಿಂ. ಬೆಟಗೇರಿ, ಮುತ್ತಕ್ಕ ಬೆಟಗೇರಿ, ಲತಾ ಸಿದ್ಧಪ್ಪ ಸಜ್ಜಗಾರ, ಕೆ.ಪಿ. ಕಂಬಳಿ, ಪುಷ್ಪಾ ದೇವೇಂದ್ರಪ್ಪ ಬೆಟಗೇರಿ, ಜಯಶ್ರೀ ಶಿವಾನಂದ ಹರ್ತಿ, ಬಸಪ್ಪ ಸಿಂಗಣ್ಣವರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-23-2031185598

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.