ಲಕ್ಷ್ಮೇಶ್ವರ: ಗದಗ ನಗರದಿಂದ ಲಕ್ಷ್ಮೇಶ್ವರ ಮೂಲಕ ಹಾವೇರಿ ನಗರಕ್ಕೆ ಸಂಪರ್ಕ ಕಲ್ಪಿಸುವ ಪಾಳಾ-ಬದಾಮಿ ರಸ್ತೆಗೆ ಹೊಂದಿಕೊಂಡು ಸವಣೂರು ತಾಲ್ಲೂಕು ಯಲವಗಿ ಗ್ರಾಮದ ಹತ್ತಿರ ರೈಲ್ವೆ ಇಲಾಖೆ ನಿರ್ಮಿಸಿರುವ ಅಂಡರ್ ಬ್ರಿಡ್ಜ್ ಲಕ್ಷ್ಮೇಶ್ವರ ತಾಲ್ಲೂಕಿನ ಅಭಿವೃದ್ಧಿಗೆ ಪರೋಕ್ಷವಾಗಿ ಅಡ್ಡಿಯಾಗಿದೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಮೊದಲು ಗದಗ ಕಡೆಯಿಂದ ಪ್ರತಿದಿನ ನೂರಾರು ಲಾರಿಗಳು ಲಕ್ಷ್ಮೇಶ್ವರ ಮಾರ್ಗವಾಗಿ ಸಂಚರಿಸುತ್ತಿದ್ದವು. ಅದರಂತೆ ಸಾರಿಗೆ ಇಲಾಖೆ ಬಸ್ಗಳೂ ಕೂಡ ಇದೇ ಮಾರ್ಗವಾಗಿ ಸಂಚಾರ ನಡೆಸುತ್ತಿದ್ದವು. ಆದರೆ ಮಳೆಗಾಲದಲ್ಲಿ ಯಲವಗಿ ರೈಲ್ವೆ ಅಂಡರ್ ಬ್ರಿಡ್ಜ್ನಲ್ಲಿ ಆಳದವರೆಗೆ ನೀರು ನಿಲ್ಲುತ್ತಿದ್ದು ವಾಹನಗಳ ಸಂಚಾರಕ್ಕೆ ಸಂಚಕಾರ ಬಂದೊದಗಿದೆ. ಅಲ್ಲದೆ ಲೋಡ್ ತುಂಬಿಕೊಂಡ ಲಾರಿಗಳು ಬ್ರಿಡ್ಜ್ ಮೂಲಕ ಹಾಯ್ದು ಹೋಗಲು ತೊಂದರೆ ಆಗುತ್ತಿದೆ. ಹೀಗಾಗಿ ಈ ಭಾಗದಲ್ಲಿ ಕೆಲ ವರ್ಷಗಳಿಂದ ಲಾರಿಗಳ ಸಂಚಾರವೇ ಬಂದ್ ಆಗಿದೆ. ಇದರಿಂದಾಗಿ ಲಕ್ಷ್ಮೇಶ್ವರದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ದೊಡ್ಡ ಹೊಡೆತ ಬಿದ್ದಿದೆ.

ಲಾರಿ ಸೇರಿದಂತೆ ಮತ್ತಿತರ ವಾಹನಗಳ ಸಂಚಾರ ನೆಚ್ಚಿಕೊಂಡು ಲಕ್ಷ್ಮೇಶ್ವರದಿಂದ ಸವಣೂರಿಗೆ ಹೋಗುವ ರಸ್ತೆ ಅಕ್ಕಪಕ್ಕ ಹತ್ತಾರು ಹೊಟೇಲ್ಗಳು, ಡಾಬಾಗಳು ತಲೆ ಎತ್ತಿದ್ದವು. ಆದರೆ ವಾಹನಗಳ ಸಂಚಾರವೇ ಇಲ್ಲದ್ದರಿಂದ ಎಲ್ಲ ಡಾಬಾಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ. ಅಷ್ಟೇ ಅಲ್ಲದೆ ಗದಗ ತಾಲ್ಲೂಕಿನ ನಾಗಾವಿ ಕ್ರಾಸ್ನಿಂದ ಶಿರಹಟ್ಟಿ, ಬೆಳ್ಳಟ್ಟಿ ಮಾರ್ಗವಾಗಿ ನೇರವಾಗಿ ರಾಣೆಬೆನ್ನೂರಿಗೆ ಸುಸಜ್ಜಿತ ರಾಜ್ಯ ಹೆದ್ದಾರಿ ನಿರ್ಮಾಣವಾಗಿದ್ದು ಮೊದಲು ಲಕ್ಷ್ಮೇಶ್ವರ ಮೂಲಕ ರಾಣೇಬೆನ್ನೂರಿಗೆ ತೆರಳುತ್ತಿದ್ದ ದೊಡ್ಡ ಹಾಗೂ ಸಣ್ಣ ವಾಹನಗಳು ಇದೀಗ ಗದಗದಿಂದ ಹೊಸದಾಗಿ ನಿರ್ಮಾಣಗೊಂಡಿರುವ ಈ ರಾಜ್ಯ ಹೆದ್ದಾರಿ ಮೂಲಕ ಲಕ್ಷ್ಮೇಶ್ವರಕ್ಕೆ ಬಾರದೇ ಸಂಚರಿಸುತ್ತಿವೆ. ಇದು ನೇರವಾಗಿ ಲಕ್ಷ್ಮೇಶ್ವರ ತಾಲ್ಲೂಕಿನ ಅಭಿವೃದ್ಧಿಗೆ ಹೊಡೆತ ಕೊಟ್ಟಿದೆ ಎಂದು ಅಲವತ್ತುಕೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-23-1285973322

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.