ಲಕ್ಷ್ಮೇಶ್ವರ: ಗಾಳಿ ಯಂತ್ರ ಸ್ಥಾಪನೆ ಮಾಡುವ ಕಂಪನಿಯ ಭಾರಿ ಗಾತ್ರದ ಟಿಪ್ಪರ್ ಗಳು ಅತಿಯಾದ ಭಾರ ಹೊತ್ತು ಸಾಗುವುದರಿಂದ ಸಮೀಪದ ಯಳವತ್ತಿ ಗ್ರಾಮದಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ ಎಂದು ಯಳವತ್ತಿ ಗ್ರಾಮದ ರೈತರು ಟಿಪ್ಪರ್ ತಡೆದು ಪ್ರತಿಭಟನೆ ಮಾಡಿದ ಘಟನೆ ಮಂಗಳವಾರ ನಡೆಯಿತು.

ಈ ವೇಳೆ ಗ್ರಾಮದ ರೈತ ಮುಖಂಡರಾದ ಬಾಪು ಗೌಡ ಭರಮಗೌಡರ , ಸುರೇಶ ಬೀರಣ್ಣವರ, ರಾಚಪ್ಪ ಅಜ್ಜನ ಗೌಡರ ಮಾತನಾಡಿ, ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಗ್ರಾಮ ಸಿಂಡಿಕೇಟ್ ಯೋಜನೆ ಅಡಿಯಲ್ಲಿ ನಿರ್ಮಿಸಿದ ರಸ್ತೆಯ ರೈತರು ತಮ್ಮ ಹೊಲಗಳಿಗೆ ಹೋಗಿ ಬರಲು ಅನಕೂಲವಾಗಿವೆ. ಈಗ ಗಾಳಿ ಯಂತ್ರ ಅಳವಡಿಸಲು ಹೋಗುತ್ತಿರುವ ಟ್ರಕ್ ಮತ್ತು ಟಿಪ್ಪರ್ ಗಳು ಅತಿಯಾದ ಭಾರ ಹೊತ್ತು ಸಾಗುವುದರಿಂದ ರಸ್ತೆಗಳು ಕೆಲವೇ ತಿಂಗಳಲ್ಲಿ ಹಾಳಾಗಿ ಹೋಗುವುದರಿಂದ ರೈತರ ಎತ್ತು ಚಕ್ಕೂ ಹಾಗೂ ಟ್ರ್ಯಾಕ್ಟರ್ ಗಳು ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಇದರಿಂದಾಗಿ ಭಾರಿ ಗಾತ್ರದ ವಾಹನ ಸಂಚಾರ ಮಾಡಲು ನಮ್ಮೂರಿನ ಎಲ್ಲ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತಾಲ್ಲೂಕಿನ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿದ್ದು, ವಾಹನ ಸಂಚಾರಕ್ಕೆ ಯೋಗ್ಯ ಇಲ್ಲದಂತಾಗಿವೆ. ಆದ್ದರಿಂದ ಇರುವ ನಮ್ಮ ರಸ್ತೆ ಉಳಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.

ಗಾಳಿ ಯಂತ್ರ ಅಳವಡಿಸಲು ಮುಂದಾಗಿರುವ ಕಂಪನಿಗಳ ಮಾಲೀಕರು ಹಾಗೂ ಜಿಲ್ಲಾ ಪಂಚಾಯಿತಿ ಇಲಾಖೆಯ ಅಧಿಕಾರಿಗಳು ಬಂದು ನಮ್ಮ ಸಮಸ್ಯೆಗೆ ಪರಿಹಾರ ನೀಡುವವರೆಗೆ ಭಾರಿ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲವೆಂದು ಗ್ರಾಮಸ್ಥರು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-23-624022092

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.