ಲಕ್ಷ್ಮೇಶ್ವರ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ವಿಶ್ವ ತಂಬಾಕು ರಹಿತ ದಿನವನ್ನು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಗದಗ, ತಾಲ್ಲೂಕು ಆರೋಗ್ಯಧಿಕಾರಿಗಳ ಕಚೇರಿ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಮತ್ತು ನ್ಯಾಯಾಂಗ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಚರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ರೀಕಾಂತ ಕಾಟೆವಾಲೆ ಮಾತನಾಡಿ, ‘ತಂಬಾಕು, ಗುಟಕಾ, ಸಿಗರೇಟ್ ಸೇವನೆಯಿಂದ ಕ್ಷಯದಂಥ ಮಾರಕರೋಗಗಳು ಅಂಟಿಕೊಳ್ಳುತ್ತವೆ. ಅವುಗಳನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು’ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಫ್. ಕನಕನಹಳ್ಳಿ ಮಾತನಾಡಿ, ‘ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ ಸಂಬಂಧಿ ಮತ್ತು ಶ್ವಾಸಕೋಶದ ಶ್ವಾಸಕೋಶದ ಕಾಯಿಲೆಗಳು ಬರುತ್ತವೆ’ ಎಂದು ಹೇಳಿದರು.

ಬಾಲನ್ಯಾಯ ಮಂಡಳಿ ಸದಸ್ಯ ವಕೀಲ ಪ್ರಕಾಶ ವಾಲಿ ಮಾತನಾಡಿ, ‘ಸೆಕ್ಷನ್ ನಾಲ್ಕರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧ, ಸೆಕ್ಷನ್ 5ರ ಪ್ರಕಾರ ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು ಉತ್ತೇಜನಕ್ಕೆ ನಿಷೇಧ ಇದೆ’ ಎಂದು ತಿಳಿಸಿದರು.

ಡಾ.ನಿವೇದಿತ ಸಿಳ್ಳಿನ, ಹೀನಕೌಸರ್ ಗಂಜಿಹಾಳ ತಂಬಾಕು ರಹಿತ ದಿನಾಚರಣೆ ಬಗ್ಗೆ ಮಾತನಾಡಿದರು.

ಡಾ.ಪ್ರವೀಣಕುಮಾರ ಸಜ್ಜನ, ಎಫ್.ಬಿ. ಹೂಗಾರ, ರವಿ ಕೊಪ್ಪದ, ಎಂ.ಬಿ. ಅಕ್ಕಿ, ರವಿ ಪುತಳೀಕರ್, ರೇಣುಕಾ, ಶ್ವೇತಾ ಶಿರೋಳ. ಎಫ್.ಸಿ. ಹೊಸಮಠ. ಗೋವಿಂದ ಓಲೆಕಾರ, ಸಚಿನ್ ಎಲಿಗಾರ, ರೇಷ್ಮಾ ಲಮಾಣಿ, ಗಂಗಾಧರ ಬಣಗಾರ, ಕೆ.ಎಂ. ಕುಲಕರ್ಣಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-23-1773610041

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.