ಸರ್ಕಾರಿ ಶಾಲೆ ಇದ್ದರೂ ಮಕ್ಕಳಿಗೆ ದೇವಸ್ಥಾನದಲ್ಲಿ ಪಾಠ

7

ಸರ್ಕಾರಿ ಶಾಲೆ ಇದ್ದರೂ ಮಕ್ಕಳಿಗೆ ದೇವಸ್ಥಾನದಲ್ಲಿ ಪಾಠ

Published:
Updated:
Deccan Herald

ಡಂಬಳ: ಶಿಕ್ಷಕರು ಮಕ್ಕಳಿಗೆ ಸರಿಯಾಗಿ ಪಾಠ ಮಾಡದೆ ಇರುವದರಿಂದ ಹತ್ತು ವರ್ಷ ಕಳೆದರು ನಮ್ಮ ಮಕ್ಕಳು ಏನು ಕಲಿತಿಲ್ಲ ಸರಕಾರಿ ಶಾಲೆಯಲ್ಲಿ ಮಕ್ಕಳು ಕಲಿಯುವುದು ಬೇಡ ಎಂದು ಮೂರು ದಿನಗಳಿಂದ ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸಿಲ್ಲ ಹೀಗಾಗಿ ಶಾಲೆಯ ಶಿಕ್ಷಕರು ನಿಯಮದಂತೆ ಶಾಲೆಗೆ ಬಂದರು ಗಂಟಿ ಹೊಡೆದು ಹಾಜರಿ ಹಾಕಿ ವಿಶ್ರಾಂತಿ ಪಡೆದು ವಾಪಸ್ಸು ಹೋಗುತ್ತಿದ್ದು ಶಾಲಾ ಅವಧಿಯಲ್ಲಿಯೇ ಬಿಇ ಎಂಜಿನಿಯರಿಂಗ್‌ ಪದವಿ ಪೂರ್ಣಗಳಿಸಿರುವ ಯುವಕ ಮಕ್ಕಳಿಗೆ ದೇವಸ್ಥಾನದಲ್ಲಿ ಪಾಠ ಮಾಡುತ್ತಿರುವ ಘಟನೆ ಹೋಬಳಿ ವ್ಯಾಪ್ತಿಯ ನಾರಾಯಣಪೂರ ಗ್ರಾಮದಲ್ಲಿ ನಡೆಯುತ್ತಿದೆ.

ನಮ್ಮ ಮಕ್ಕಳು ಐದನೆ ತರಗತಿಯವರಿಗೆ ಸ್ಥಳೀಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಾರೆ ಆದರೆ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ಕಲಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದ ನಮ್ಮ ಮಕ್ಕಳಿಗೆ ಅ,ಆ,ಈ,ಇ ಯಾವುದೆ ಅಕ್ಷರಗಳನ್ನು ಓದಲು ಬರುತ್ತಿಲ್ಲ ಹೀಗಾಗಿ ಐದನೆ ತರಗತಿ ಪೂರ್ಣಗೊಳಿಸಿದ ನಂತರ 6ನೇ ತರಗತಿ ಇಲ್ಲಿಯವರಿಗೆ ಯಾವುದೆ ಮಕ್ಕಳು ಪ್ರವೇಶ ಪಡೆದಿಲ್ಲ ಐದನೆ ತರಗತಿ ಪೂರ್ಣಗೊಳಿದವರು ದನಕರಗಳನ್ನು ಕಾಯಲು ಹೋಗುತ್ತಿದ್ದು ನಾವು ಆದಂಗ್ ನಮ್ಮ ಮಕ್ಕಳು ಆಗುವುದು ಬೇಡ ಶಿಕ್ಷಕರು ಸರಕಾರಿ ಸಂಬಳಕ್ಕೆ ದುಡಿಯಲಿ ನಮ್ಮ ಮಕ್ಕಳು ಅಲ್ಲಿ ಕಲಿಯವುದು ಬೇಡ ಎಂದು ಮೂರು ದಿನಗಳಿಂದ ಮಕ್ಕಳನ್ನು ಶಾಲೆಗೆ ಕಳಿಸಿಲ್ಲ ಹೀಗಾಗಿ ನಮ್ಮೂರಿನ ಯುವಕ ಇಂಜನೀಯರಿಂಗ್ ಪದವಿಧರ ರಮೇಶ ವಡವಿ ಅವರಿಗೆ ಎಲ್ಲಾ ಪಾಲಕರು ಸಹಕಾರ ನೀಡುತ್ತಿದ್ದು ನಮ್ಮ ಮಕ್ಕಳಿಗೆ ದೇವಸ್ಥಾನದಲ್ಲಿ ಪಾಠ ಹೇಳಿಕೊಡುತ್ತಿದ್ದಾನೆ ಎನ್ನುತ್ತಾರೆ ಎಸ್‍ಡಿಎಂಸಿ ಅಧ್ಯಕ್ಷ ಶರಣಪ್ಪ ಕವಲೂರ ಪಾಲಕರಾದ ರೇಣವ್ವ ಕಲಕೇರಿ ಮತ್ತು ಯಲ್ಲಪ್ಪ ಪಾಳೇಗಾರ ಸೇರಿದಂತೆ ಹಲವು ಪಾಲಕರ ಅನಿಸಿಕೆ.

ಶಾಲೆಯಲ್ಲಿ 1ರಿಂದ ಐದನೆ ತರಗತಿಯ ಒಟ್ಟು ವಿದ್ಯಾರ್ಥಿಗಳು ಸಂಖ್ಯೆ 26 ಇದ್ದು ಜಿ.ವ್ಹಿ ಜಾಲಿಹಾಳ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಸಹಶಿಕ್ಷಕರಾಗಿ ಸೇವೆ ಮಾಡುತ್ತಿದ್ದ ಆರ್ ಎಚ್ ಹಿರೇಮಠ ಕಳೆದ ತಿಂಗಳ 31ರಂದು ನಿವೃತ್ತಿ ಹೊಂದಿದ್ದರಿಂದ ತಾತ್ಕಾಲಿಕವಾಗಿ ಅತಿಥಿ ಶಿಕ್ಷರ ನೇಮಕಾತಿ ಅರ್ಜಿ ಅಹ್ವಾನಿಸಲಾಗಿತ್ತು ಅದರಂತೆ ರಮೇಶ ವಡವಿ ಸೇರಿದಂತೆ ಆರು ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು ಆದರೆ ಸರ್ಕಾರಿ ನಿಯಮದ ಪ್ರಕಾರ ಯಾವುದೆ ಒತ್ತಡಕ್ಕೆ ಮಣಿಯದೆ ಅಂಕಗಳ ಆಧಾರದ ಮೇಲೆ ಬೇರೆಯವರನ್ನು ನೇಮಕ ಮಾಡಿಕೊಂಡಿದ್ದರಿಂದ ಗ್ರಾಮದ ಪಾಲಕರ ಮೇಲೆ ಒತ್ತಡ ಹಾಕಿ ಮಕ್ಕಳನ್ನು ಹೈಜಾಕ ಮಾಡಿ ದೇವಸ್ಥಾನ ಮುಂತಾದ ಕಡೆ ಶಾಲಾ ಅವಧಿಯಲ್ಲಿಯೇ ಕಾನೂನು ಬಾಹಿರವಾಗಿ ಪಾಠ ಮಾಡುತ್ತಿದ್ದಾನೆ ಎನ್ನುವ ಆರೋಪಗಳು ಕೆಲ ವ್ಯಕ್ತಿಗಳಿಂದ ಕೇಳಿ ಬರುತ್ತಿವೆ.

ಶಾಲೆಯ ಶಿಕ್ಷಕರು ಬಂದು ಗಂಟೆ ಹೋಡೆದು ಹಾಜರಿ ಹಾಕಿ ವಾಪಸ್ಸ ಹೋಗುತ್ತಿದ್ದರೆ ಬಿಸಿ ಊಟ ತಯಾರಿಕರು ಖಾಲಿ ಕುಳಿತು ಹೋಗುತ್ತಿದ್ದಾರೆ ಹೀಗಾಗಿ ಶಾಲೆ ಬೀಕೊ ಎನ್ನುತ್ತಿದೆ ಅಲ್ಲದೆ ಬೇರೆ ಶಿಕ್ಷರನ್ನು ಇಲ್ಲಿಗೆ ವರ್ಗಾವಣೆ ಮಾಡಿಸಿಕೊಳ್ಳುತ್ತವೆ ಎಂದರು ಪಾಲಕರು ಹಾಗೂ ರಮೇಶ ಒಡವಿ ಕೇಳುತ್ತಿಲ್ಲ ಏನ ಮಾಡಬೇಕು ಸಮಸ್ಯೆ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಪಾಲಕರನ್ನು ವಿನಂತಿಸಿಕೊಂಡರು ಮಕ್ಕಳನ್ನು ಶಾಲೆಗೆ ಕಳಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ಎನ್ ಶೀರನಹಳ್ಳಿ. ಒಟ್ಟಿನಲ್ಲಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಗ್ರಾಮದ ಪಾಲಕರೊಂದಿಗೆ ಹಿರಿಯರೊಂದಿಗೆ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳುವತ್ತ ಗಮನಹರಿಸಬೇಕು.
 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !