ನರಗುಂದ: ತಾರ್ಕಿಕ ಅಂತ್ಯ ಕಂಡ ‘ಮಹಾ’ಹೋರಾಟ –ವಿಜಯೋತ್ಸವ

7
ಗದಗ, ನರಗುಂದದಲ್ಲಿ ವಿವಿಧ ಸಂಘಟನೆಗಳಿಂದ ವಿಜಯೋತ್ಸವ

ನರಗುಂದ: ತಾರ್ಕಿಕ ಅಂತ್ಯ ಕಂಡ ‘ಮಹಾ’ಹೋರಾಟ –ವಿಜಯೋತ್ಸವ

Published:
Updated:
Deccan Herald

ನರಗುಂದ: ರೈತ ಬಂಡಾಯದ ಮೂಲಕ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾದ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮಹದಾಯಿ ನದಿ ನೀರಿಗಾಗಿ ರೈತರು 1,126 ದಿನಗಳಿಂದ ನಡೆಸುತ್ತಿದ್ದ ನಿರಂತರ ಹೋರಾಟವು ಸೋಮವಾರ ತಾರ್ಕಿಕ ಅಂತ್ಯ ಕಂಡಿದೆ.

ಮಹದಾಯಿ ನ್ಯಾಯಮಂಡಳಿ ತೀರ್ಪು ರಾಜ್ಯದ ಪರವಾಗಿ ಬಂದಿರುವ ಹಿನ್ನೆಲೆಯಲ್ಲಿ, ಗದಗ ಜಿಲ್ಲೆಯಾದ್ಯಂತ ಸಂಭ್ರಮ ಮನೆ ಮಾಡಿದೆ. ತೀರ್ಪು ಹೊರಬಿದ್ದ ಬೆನ್ನಲ್ಲೇ, ನರಗುಂದ ಮತ್ತು ಗದಗ ನಗರದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಹೋರಾಟದ ಹಿನ್ನೆಲೆ

ನರಗುಂದ ಪಟ್ಟಣದ ಹೃದಯ ಭಾಗದಲ್ಲಿ, ಹುಬ್ಬಳ್ಳಿ–ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ನಿರ್ಮಿಸಿರುವ ಧರಣಿ ವೇದಿಕೆಯಲ್ಲಿ ರೈತ ಸೇನೆ ಹಾಗೂ ಮಹದಾಯಿ– ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿಯಿಂದ ನಡೆಯುತ್ತಿರುವ ಪ್ರತಿಭಟನೆ ಜುಲೈ 16ರಂದು ಮೂರು ವರ್ಷಗಳನ್ನು ಪೂರೈಸಿತ್ತು.

ಕುಡಿಯುವ ನೀರಿಗಾಗಿ ದೇಶದಲ್ಲಿ ನಡೆದಿರುವ ಸುದೀರ್ಘ ಅವಧಿಯ ಹೋರಾಟ ಎಂಬ ಹೆಗ್ಗಳಿಗೆ ಈಗಾಗಲೇ ಮಹದಾಯಿ ಹೋರಾಟ ಪಾತ್ರವಾಗಿದೆ.

ಹೋರಾಟದ ಆರಂಭ

2015ರ ಜುಲೈ 16ರಂದು ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹಾಗೂ ಶಂಕ್ರಣ್ಣ ಅಂಬಲಿ ಅವರು ಜತೆಯಾಗಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಜತೆಗೆ, ಇಲ್ಲಿನ ಧರಣಿ ವೇದಿಕೆಯಲ್ಲಿ ಪ್ರತಿಭಟನೆ ಪ್ರಾರಂಭಿಸಿದ್ದರು. ದಿನ ಕಳೆದಂತೆ ಇದು ಜನಾಂದೋಲನವಾಗಿ ಬದಲಾಗಿತ್ತು. ಹೋರಾಟವು ಮೂರು ವರ್ಷಗಳನ್ನು ಸಮೀಪಿಸಿದ ಸಂದರ್ಭದಲ್ಲೇ, ಅಂದರೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸೊಬರದಮಠ ಮತ್ತು ಅಂಬಲಿ ಅವರ ನಡುವೆ ಭಿನ್ನಾಭಿಪ್ರಾಯ ಮೂಡಿ, ಮಹದಾಯಿ ಹೋರಾಟವೇ ಅಂತ್ಯಗೊಳ್ಳುವ ಹಂತಕ್ಕೆ ಬಂದು, ಮತ್ತೆ ಇತ್ತೀಚೆಗೆ ಎರಡು ಬಣಗಳಾಗಿ ಪುನರಾರಂಭಗೊಂಡಿತ್ತು.

2018ರ ಮೇ ತಿಂಗಳಲ್ಲಿ ಮಹದಾಯಿ ಹೋರಾಟಗಾರರು ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದರು. ಈ ಅರ್ಜಿಗೆ ಸ್ಪಂದನೆ ಲಭಿಸದ ಕಾರಣ, ಜುಲೈ 16ರಿಂದ ಮತ್ತೆ ಧರಣಿ ವೇದಿಕೆಯಲ್ಲಿ ದಯಾಮರಣ ಪತ್ರ ಚಳವಳಿ ಪ್ರಾರಂಭಿಸಿದ್ದರು. ಇತ್ತೀಚೆಗೆ ‘ನೀರು ಇಲ್ಲವೇ ಸಾವು’ ಚಳವಳಿಗೆ ಚಾಲನೆ ನೀಡಿದ್ದರು.

* ಇದನ್ನೂ ಓದಿ...

ಮಹದಾಯಿ: ರಾಜ್ಯಕ್ಕೆ 5.5 ಟಿಎಂಸಿ ನೀರು ಹಂಚಿಕೆ ಮಾಡಿ ನ್ಯಾಯಮಂಡಳಿ ತೀರ್ಪು

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !