ಮಹದಾಯಿಗಾಗಿ ನೀರು ಇಲ್ಲವೇ ಸಾವು: ಸೊಬರದಮಠ 

7

ಮಹದಾಯಿಗಾಗಿ ನೀರು ಇಲ್ಲವೇ ಸಾವು: ಸೊಬರದಮಠ 

Published:
Updated:

ನರಗುಂದ: ‘ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ರಾಷ್ಟ್ರಪತಿ ಗಮನ ಸೆಳೆಯಲು ದಯಾಮರಣ ಕೋರಿ ಸಲ್ಲಿಸಿದ್ದ ಮನವಿಗೆ ಇದುವರೆಗೆ ಸ್ಪಂದನೆ ಲಭಿಸಿಲ್ಲ. ಇದರಿಂದ ಬೇಸತ್ತು ‘ನೀರು ಇಲ್ಲವೇ ಸಾವು’ ಚಳವಳಿ ಪ್ರಾರಂಭಿಸುತ್ತಿದ್ದೇವೆ. ಇದಕ್ಕೆ ರೈತರು ಹಾಗೂ ಹೋರಾಟಗಾರರು ಬೆಂಬಲಿಸಲು ಮುಂದಾಗಬೇಕು ಎಂದು ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರಮಠ ಹೇಳಿದ್ದಾರೆ.

‘ಮಲಯಾಳಂ ನಟಿಯೊಬ್ಬರು ಹಾಡೊಂದರಲ್ಲಿ ಕಣ್ಣು ಹೊಡೆಯುವ ದೃಶ್ಯ ದಿನ ಬೆಳಗಾಗುವುದರೊಳಗೆ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದೆ. ಆದರೆ, ನೀರಿಲ್ಲದೆ ಇಲ್ಲಿ ರೈತ ಕುಲ ಕಣ್ಣುಮುಚ್ಚುತ್ತಿದ್ದರೂ ಆಳುವ ಸರ್ಕಾರ ಕಣ್ಣು ತೆರೆದು ನೋಡುವ ಮನಸ್ಸು ಮಾಡಿಲ್ಲ’ ಎಂದು ಸೊಬರದಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮಿನರಲ್‌ ವಾಟರ್‌ ಕುಡಿಯುವ ವೋಟ್‌ ಬ್ಯಾಂಕ್‌ ರಾಜಕಾರಣಿಗಳಿಗೆ ಮಹದಾಯಿ ಹೋರಾಟಗಾರರ ನೋವು ಅರ್ಥವಾಗುವ ಭರವಸೆ ಉಳಿದಿಲ್ಲ. ನಮಗೆ ನೀರು ಬಂದರೆ ನಾವು ವಿಜಯೋತ್ಸವ ಆಚರಿಸುತ್ತೇವೆ. ಈಗ ನಮ್ಮ ಮುಂದೆ ಇನ್ನು ‘ನೀರು ಇಲ್ಲವೇ ಸಾವು’ಮಾತ್ರ ಉಳಿದಿದೆ’ ಎಂದು ಸೊಬರದಮಠ ಪ್ರಜಾವಾಣಿಗೆ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !