ಬುಧವಾರ, ಮೇ 12, 2021
18 °C
ತೋಂಟದಾರ್ಯ ಮಠದ ನಡೆದ ಶಿವಾನುಭವ ಕಾರ್ಯಕ್ರಮ; ತಜ್ಞರಿಂದ ಉಪನ್ಯಾಸ

ಮಹದಾಯಿ ಮೇಲ್ಮನವಿ ಅಗತ್ಯ: ಸಿದ್ಧಲಿಂಗ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಗದಗ:‘ಮಹದಾಯಿ ನದಿ ನೀರಿನಲ್ಲಿ ರಾಜ್ಯದ ಸಂಪೂರ್ಣ ಪಾಲು ಪಡೆಯಲು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದು ಅಗತ್ಯ’ಎಂದು ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಮಹದಾಯಿ ನ್ಯಾಯಮಂಡಳಿ ತೀರ್ಪು ತೃಪ್ತಿ ತಂದಿಲ್ಲ.ರಾಜ್ಯ ಸರ್ಕಾರ ಸಮರ್ಪಕ ದಾಖಲೆಗಳನ್ನು ಸಿದ್ಧಪಡಿಸಿ, ಸುಪ್ರೀಂಗೆ ಮೇಲ್ಮನವಿ ಸಲ್ಲಿಸಬೇಕು’ಎಂದು ಒತ್ತಾಯಿಸಿದರು.

‘ಬಿ.ಎಂ.ಹೊರಕೇರಿ ಅವರು ಈ ಭಾಗದ ರೈತರನ್ನು ಜಾಗೃತಗೊಳಿಸುವ ಕಾರ್ಯ ಮಾಡಿದರು. ಅದರ ಫಲವಾಗಿ ರೈತ ಸಂಘಟನೆಗಳು ಮಹದಾಯಿ ಹೋರಾಟದಲ್ಲಿ ತೊಡಗಲು ಸಾಧ್ಯವಾಯಿತು. ಸಮುದ್ರದ ಪಾಲಾಗುವ ನೀರನ್ನು ಜನರ ಒಳಿತಿಗಾಗಿ ಬಳಸುವ ಯೋಜನೆಗೆ ಗೋವಾ ಸರ್ಕಾರ ಸಹಕರಿಸಬೇಕು’ಎಂದು ಸ್ವಾಮೀಜಿ ಹೇಳಿದರು.

‘ಮಹದಾಯಿ ನದಿ ನೀರಿನ ಹಂಚಿಕೆ ಸಮಸ್ಯೆ ಮತ್ತು ಪರಿಹಾರಗಳ ಕುರಿತು ಮಹದಾಯಿ ತಜ್ಞರ ತಂಡದ ಸದಸ್ಯ, ಕಾರವಾರದ ಕವಿವಿ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಡಾ.ಜಗನ್ನಾಥ ರಾಠೋಡ ಉಪನ್ಯಾಸ ನೀಡಿದರು.

‘ಮಹದಾಯಿ ಯೋಜನೆ ಜಾರಿಯಿಂದ ಮೀನುಗಾರಿಕೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಗೋವಾ ನ್ಯಾಯಮಂಡಳಿಗೆ ಆಕ್ಷೇಪಣೆ ಸಲ್ಲಿಸಿತ್ತು. ಇದರಲ್ಲಿ ಸತ್ಯಾಂಶವಿಲ್ಲ ಎಂಬುದನ್ನು ನ್ಯಾಯಮಂಡಳಿಗೆ ಮನದಟ್ಟು ಮಾಡಿಕೊಡಲಾಯಿತು. ತಜ್ಞರು ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರೆ, ರಾಜ್ಯಕ್ಕೆ ಹೆಚ್ಚಿನ ಪ್ರಮಾಣದ ನೀರು ಪಡೆದುಕೊಳ್ಳಲು ಸಾಧ್ಯವಾಗುತ್ತದೆ’ಎಂದು ರಾಠೋಡ ಅಭಿಪ್ರಾಯಪಟ್ಟರು.

ಸಂಗಮೇಶ್ವರ ದೇವರು ವಚನ ದರ್ಶನ ಪ್ರವಚನ ನೀಡಿದರು. ಶ್ರದ್ಧಾ ರೊಟ್ಟಿ ಧರ್ಮಗ್ರಂಥ ಪಠಣ, ಸಂಜನಾ ರೊಟ್ಟಿ ವಚನ ಚಿಂತನೆ ನೀಡಿದರು. ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ, ನಾರಾಯಣ ಹಿರೇಕೊಳಚಿ ಅವರು ವಚನ ಸಂಗೀತ ಕಾರ್ಯಕ್ರಮ ನೀಡಿದರು. ಪ್ರಕಾಶ ಚಳ್ಳಮರದ, ಚಿಂತಕ ರವೀಂದ್ರ ಹೊನವಾಡ, ಮಂಜುಳಾ ಹಾಸಲಕರ, ವಿವೇಕಾನಂದಗೌಡ ಪಾಟೀಲ, ಶೇಖಣ್ಣ ಕವಳಿಕಾಯಿ, ಅನ್ನಪೂರ್ಣಕ್ಕ ಬಡಿಗಣ್ಣವರ, ಜಿ.ಪಿ.ಕಟ್ಟಿಮನಿ, ಎಸ್.ಯು.ಸಜ್ಜನಶೆಟ್ಟರ, ಶಿವಕುಮಾರ ರಾಮನಕೊಪ್ಪ, ಮಂಜುನಾಥ ಅಸುಂಡಿ, ವಿಜಯಕುಮಾರ ಹಿರೇಮಠ, ಶರಣಬಸಪ್ಪ ಅಂಗಡಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು