ಮಹದಾಯಿ ಧರಣಿ 1248ನೇ ದಿನಕ್ಕೆ

7

ಮಹದಾಯಿ ಧರಣಿ 1248ನೇ ದಿನಕ್ಕೆ

Published:
Updated:
Deccan Herald

ನರಗುಂದ: ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ ಶುಕ್ರವಾರ 1248ನೇ ದಿನಕ್ಕೆ ಕಾಲಿಟ್ಟಿತು.

ಹೋರಾಟ ಸಮಿತಿ ಸದಸ್ಯ ಸೋಮಲಿಂಗಪ್ಪ ಆಯಟ್ಟಿ ಮಾತನಾಡಿ ಮಹದದಾಯಿ ಯೋಜನೆಗಾಗಿ ಸುದೀರ್ಘ ಹೋರಾಟ ನಡೆಯುತ್ತಿದೆ. ಆದರೆ ರಾಜಕಾರಣಿಗಳು ಹೋರಾಟಕ್ಕೆ ಬೆಲೆ ನೀಡುತ್ತಿಲ್ಲ. ನ್ಯಾಯಮಂಡಳಿ ತೀರ್ಪು ಪ್ರಕಟಿಸಿ ನೀರು ಹಂಚಿಕೆ ಮಾಡಿದರೂ ಸರ್ಕಾರಗಳು ಅದನ್ನು ಬಳಕೆ ಮಾಡುವಲ್ಲಿ ಪ್ರಯತ್ನ ಮಾಡದೇ ಇರುವುದು ಈ ಬಾಗದ ರೈತರನ್ನು ರೋಸಿಹೋಗುವಂತೆ ಮಾಡಿದೆ. ಆದ್ದರಿಂದ ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮನವೊಲಿಸಲು ಶಾಸಕರು, ಸಂಸದರು ಮುಂದಾಗಬೇಕೆಂದು ಆಗ್ರಹಿಸಿದರು.

ಧರಣಿಯಲ್ಲಿ ರತ್ನವ್ವ ಸವಳಭಾವಿ, ಚನ್ನಬಸವ್ವ ಆಯಟ್ಟಿ ಹಾಗೂ ಹೋರಾಟ ಸಮಿತಿ ಸದಸ್ಯರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !