ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಸನ್ಮಾನ ಉಳಿತಾಯ ಯೋಜನೆ ಸದುಪಯೊಗ ಪಡಿಸಿಕೊಳ್ಳಿ: ಪದ್ಮಶಾಲಿ

Published : 30 ಜುಲೈ 2023, 15:49 IST
Last Updated : 30 ಜುಲೈ 2023, 15:49 IST
ಫಾಲೋ ಮಾಡಿ
Comments

ಲಕ್ಷ್ಮೇಶ್ವರ: ‘ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಹೊಸ ಉಳಿತಾಯ ಯೋಜನೆಯು ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ. ಎಲ್ಲ ಮಹಿಳೆಯರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಗದಗ ಅಂಚೆ ವಿಭಾಗದ ಅಧೀಕ್ಷಕ ಚಿದಾನಂದ ಪದ್ಮಶಾಲಿ ಹೇಳಿದರು.

ಪಟ್ಟಣದ ಅಂಚೆ ಕಚೇರಿಯಲ್ಲಿ ಈಚೆಗೆ ನಡೆದ ಸಂಪೂರ್ಣ ಮಹಿಳಾ ಸಮ್ಮಾನ ಉಳಿತಾಯ ಗ್ರಾಮಗಳ ಘೋಷಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಹಿಳಾ ಸಮ್ಮಾನ ಉಳಿತಾಯ ಸರ್ಟಿಫಿಕೇಟ್ ಯೋಜನೆಯಲ್ಲಿ ದೇಶದ ಎಲ್ಲಾ ಮಹಿಳೆಯರು ಯಾವುದೇ ವಯಸ್ಸಿಯ ಮಿತಿಯಿಲ್ಲದೆ ಕನಿಷ್ಠ ಒಂದು ಸಾವಿರದಿಂದ ಗರಿಷ್ಠ ಎರಡು ಲಕ್ಷದವರೆಗೆ ಹಣವನ್ನು, ಯಾವುದೇ ಅಂಚೆ ಕಚೇರಿಯಲ್ಲಿಯಾದರೂ ತೊಡಗಿಸಬಹುದು. ಇಲಾಖೆಯಿಂದ ಶೇಕಡಾ 7.5ರಷ್ಟು ವಾರ್ಷಿಕ ಬಡ್ಡಿಯನ್ನು ಕೊಡಲಾಗುತ್ತದೆ. ಈ ಯೋಜನೆಯು ಕೇವಲ ಎರಡು ವರ್ಷದ ಅವಧಿಯವರೆಗೆ ಮಾತ್ರ ಜಾರಿಯಲ್ಲಿದ್ದು ಇದು 2025ರ ಮಾರ್ಚ್‌ 31ಕ್ಕೆ ಮುಕ್ತಾಯಗೊಳ್ಳುವುದು’ ಎಂದರು.

ಕಾರ್ಯಕ್ರಮದಲ್ಲಿ ಗದಗ ಉಪ ವಿಭಾಗದ ನಾಲ್ಕು ಗ್ರಾಮಗಳನ್ನು ಸಂಪೂರ್ಣ ಗ್ರಾಮಗಳನ್ನಾಗಿ ಘೋಷಣೆ ಮಾಡಲಾಯಿತು. ಈ ಯೋಜನೆಯಲ್ಲಿ ಲಕ್ಷ್ಮೇಶ್ವರ ಉಪ ಅಂಚೆ ಕಚೇರಿ ವ್ಯಾಪ್ತಿಯಲ್ಲಿ ಬರುವಂತ ಆದ್ರಹಳ್ಳಿ ಗ್ರಾಮದಲ್ಲಿ 164, ಫುಟಗಾವ್ ಬಡ್ನಿ ಗ್ರಾಮದಲ್ಲಿ 147, ಬಟ್ಟೂರು ಗ್ರಾಮದಲ್ಲಿ 102 ಹಾಗೂ ಮುಳಗುಂದ ಉಪ ಅಂಚೆ ಕಚೇರಿ ವ್ಯಾಪ್ತಿಯಲ್ಲಿ ಬರುವಂತಹ ನೀಲಗುಂದ ಗ್ರಾಮದಲ್ಲಿ 100 ಹೊಸ ಖಾತೆಗಳನ್ನು ತೆರೆದು ಅಲ್ಲಿನ ಶಾಖಾ ಅಂಚೆ ಪಾಲಕರು ಸಂಪೂರ್ಣ ಮಹಿಳಾ ಸಮ್ಮಾನ ಉಳಿತಾಯ ಗ್ರಾಮಗಳನ್ನಾಗಿ ಘೋಷಿಸಲಾಯಿತು.

ಹೊಸ ಖಾತೆಗಳನ್ನು ತೆಗೆದು ಹಣವನ್ನು ತೊಡಗಿಸಿದ ಮಹಿಳೆಯರಿಗೆ ಪಾಸ್ ಪುಸ್ತಕಗಳನ್ನು ವಿತರಿಸಲಾಯಿತು.

ಗದಗ ಅಂಚೆ ಉಪವಿಭಾಗದ ಸಹಾಯಕ ಅಧೀಕ್ಷಕ ಶ್ರೀಕಾಂತ ಜಾಧವ ಪ್ರಾಸ್ತಾವಿಕವಾಗಿ ಮಾತನಾಡಿದರು, ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮೇಶ್ವರದ ಅಂಚೆ ಪಾಲಕ ದೊಡ್ಡಪ್ಪ ಇಟಗಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT