‘ಆರೋಪಿ ಸಿದ್ಧಲಿಂಗಪ್ಪ ಮಂಗಳವಾರ ರಾತ್ರಿ ಕುಡಿದು ಓಣಿಯ ಜನರ ಜತೆಗೆ ಜಗಳವಾಡಿದ್ದ. ಆಗ ಶಾರದಮ್ಮ ಮಗನನ್ನು ಏನೂ ಮಾಡದಂತೆ ಜನರಲ್ಲಿ ಕೋರಿದ್ದರು. ಇದರಿಂದ ಸಿಟ್ಟಿಗೆದ್ದ ಮಗ ಮನೆಯಲ್ಲಿ ತಾಯಿಯ ಜತೆಗೆ ಜಗಳವಾಡಿದ. ರಾತ್ರಿ ಆಕೆಯ ಉಸಿರುಗಟ್ಟಿಸಿ, ನಂತರ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.