ಮುಂಡರಗಿ: ‘ಸರ್ಕಾರದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಡವರಿಗೆ ವಿತರಿಸುತ್ತಿರುವ ಪಡಿತರ ಅಕ್ಕಿಯನ್ನು ಕಾಳ ದಂದೆಕೋರರು ಖರೀದಿಸುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಅವರು ಅಕ್ರಮವಾಗಿ ಅಕ್ಕಿಯನ್ನು ಸಂಗ್ರಹಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಅಕ್ರಮವಾಗಿ ಅಕ್ಕಿ ಖರೀದಿಸುವವರನ್ನು ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಡಿ.ಡಿ. ಮೊರನಾಳ ಅವರು ತಾಲ್ಲೂಕು ಆಹಾರ ನಿರೀಕ್ಷಕರಿಗೆ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ತಾಲ್ಲೂಕಿನಾದ್ಯಂತ ಈಗಾಗಲೇ ಪಂಚ ಗ್ಯಾರಂಟಿ ಯೋಜನೆಯು ಶೇ 97ರಷ್ಟು ಪ್ರಗತಿಯಾಗಿದ್ದು, ಶೇ 100ರಷ್ಟು ಗುರಿ ತಲುಪಿಸುವ ಕೆಲಸ ನಡೆಯಬೇಕಿದೆ. ಜನತಾ ಸದನ ಯೋಜನೆಯಿಂದ ಹಾಗೂ ಹಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಯೋಜನೆಯಿಂದ ಹೊರಗುಳಿದವರನ್ನು ಗುರುತಿಸಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತದೆ’ ಎಂದು ತಿಳಿಸಿದರು.

‘ಪಂಚ ಗ್ಯಾರಂಟಿ ಯೋಜನೆಗಳ ಕಾರಣದಿಂದ ಬಡತನ ರೇಖೆಗಿಂತ ಕಡಿಮೆಯಿದ್ದ ಲಕ್ಷಾಂತರ ಕುಟುಂಬಗಳು ಮೇಲೇಳುವಂತಾಗಿದೆ. ಪಂಚ ಗ್ಯಾರಂಟಿಗಳು ರಾಜ್ಯದ ಜನಮನ ಗೆದ್ದಿದ್ದು, ಅವುಗಳ ನೆರವಿನಿಂದ ಹಲವು ಕುಟುಂಬಗಳು ಉದ್ಧಾರವಾಗಿವೆ. ರಾಜ್ಯ ಸರ್ಕಾರ ಎರಡು ವರ್ಷಗಳಲ್ಲಿ ಗ್ಯಾರಂಟಿ ಯೋಜನೆ ಜಾರಿ ಸೇರಿ ಹಲವು ಜನಪರ ಕೆಲಸಗಳ ಮೂಲಕ ಅದ್ಭುತ ಕೆಲಸ ಮಾಡುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಹೆಸ್ಕಾಂ ಎಇಇ ಸಂತೋಷ ಆನೆಕಲ್ಲ, ಆಹಾರ ನಿರೀಕ್ಷಕ ಜೆ.ಬಿ. ಅಮಾತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ ಆನಂದ ಪಾಟೀಲ, ಕೆಎಸ್ಆರ್ಟಿಸಿ ಸ್ಥಳೀಯ ಘಟಕದ ಸಿಬ್ಬಂದಿ ಆರ್.ಎ. ಭಂಡಾರಿ, ಯುವ ಸಬಲಿಕರಣ ಇಲಾಖೆಯ ಸಿಬ್ಬಂದಿಯು ತಮ್ಮ ಇಲಾಖೆಯ ಪ್ರಗತಿ ವರದಿಯನ್ನು ಸಭೆಯಲ್ಲಿ ಮಂಡಿಸಿದರು.

ಗ್ಯಾರಂಟಿ ಅನುಷ್ಠಾನ ಸಭೆಯಲ್ಲಿ ಸಮಿತಿ ಸದಸ್ಯ ಕಾರ್ಯದರ್ಶಿ ವಿಶ್ವನಾಥ ಹೊಸಮನಿ, ಸದಸ್ಯರಾದ ನಾಗರಾಜ ಸಜ್ಜನರ, ರಾಮಣ್ಣ ಮೇಗಲಮನಿ, ನಿಂಗಪ್ಪ ಮಜ್ಜಿಗಿ, ಸುರೇಶ ಮೇಲಗಮನಿ, ಶರಣಪ್ಪ ಮಲ್ಲಾಪೂರ, ಭುವನೇಶ್ವರಿ ಕಲ್ಲಕುಟಗರ, ಉಮೇಶ ಕಲಾಲ, ಮಹೇಶ ದ್ರಾಕ್ಷಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.