ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕ ಅದಾಲತ್‌ಗೆ ‘ಮೆಗಾ’ ಪ್ರತಿಕ್ರಿಯೆ!

4,950 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥ
Last Updated 15 ಆಗಸ್ಟ್ 2021, 2:49 IST
ಅಕ್ಷರ ಗಾತ್ರ

ಗದಗ: ಆ.14 ಶನಿವಾರದಂದು ಗದಗ ಜಿಲ್ಲೆಯಲ್ಲಿ ನಡೆದ ಮೆಗಾ ಲೋಕ ಅದಾಲತ್‌ನಲ್ಲಿ 4,950 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡವು. ಈ ಬಾರಿಯ ಅದಾಲತ್‌ಗೆ 6,124 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಗುರುತಿಸಲಾಗಿತ್ತು.

39 ಮೋಟಾರು ಅಪಘಾತ ಪ್ರಕರಣಗಳು, 123 ಚೆಕ್‍ಬೌನ್ಸ್, 72 ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣಗಳು, 257 ಅಸಲು ದಾವೆ ಪ್ರಕರಣಗಳು, 24 ಭೂಸ್ವಾಧೀನ ದರಖಾಸ್ತು ಪ್ರಕರಣಗಳು, 4,230 ಇತರೆ ಕ್ರಿಮಿನಲ್ ಪ್ರಕರಣಗಳು, 58 ಎಂಎಂಆರ್‌ಡಿ ಪ್ರಕರಣಗಳು, ಮೂರು ವೈವಾಹಿಕ ಪ್ರಕರಣಗಳು, 14 ವಿದ್ಯುಚ್ಛಕ್ತಿ ಪ್ರಕರಣಗಳು, 1 ಕಾರ್ಮಿಕ ಪ್ರಕರಣ, ಎರಡು ಹಣ ವಸೂಲಾತಿ ಪ್ರಕರಣಗಳನ್ನು ಸೇರಿಸಿ ಒಟ್ಟು 4,823 ಚಾಲ್ತಿ ಪ್ರಕರಣಗಳನ್ನು ₹9,79,71,050 ಪರಿಹಾರ ಒದಗಿಸುವುದರ ಮೂಲಕ ರಾಜಿ ಸಂಧಾನ ಮಾಡಲಾಯಿತು.

ಅದೇ ರೀತಿ, 127 ಬ್ಯಾಂಕ್ ಪ್ರಕರಣಗಳ ವ್ಯಾಜ್ಯಪೂರ್ವ ಪ್ರಕರಣಗಳನ್ನು ₹1,40,38,435 ರಾಜಿ ಸಂಧಾನ ಮಾಡಲಾಯಿತು. ಹೀಗೆ ಒಟ್ಟು 4,950 ಪ್ರಕರಣಗಳನ್ನು ₹11,20,09,485ಕ್ಕೆ ರಾಜಿ ಸಂಧಾನಗೊಳಿಸಲಾಯಿತು.

ಮೆಗಾ ಲೋಕ ಅದಾಲತ್‌ನಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಸ್.ಮಹಾಲಕ್ಷ್ಮೀ ನೇರಳೆ, ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಬಿ.ಮಧುಸೂದನ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ನರಶಿಂಸಾ ಎಂ.ವಿ., ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ರಾಜಣ್ಣ ಸಂಕಣ್ಣವರ, ಜೆಎಂಎಫ್‍ಸಿ ನ್ಯಾಯಾಧೀಶರಾದ ಎಸ್.ಚಿನ್ನಸ್ವಾಮಿ, ಶ್ರೀಕಾಂತ ರವೀಂದ್ರಪ್ಪ, ಅರುಣ ಚೌಗಲೆ, ನಿಖಿತಾ ಎಸ್. ಅಕ್ಕಿ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎ.ಮೌಲ್ವಿ, ಪ್ರಧಾನ ಕಾರ್ಯದರ್ಶಿ ಎಂ.ಬಿ.ಮತ್ತೂರ, ಉಪಾಧ್ಯಕ್ಷ ವಿ.ವಿ.ಪಾಟೀಲ, ಜಂಟಿ ಕಾರ್ಯದರ್ಶಿ ಕುಮಾರ ಜಿ.ವಿ. ಹಾಗೂ ವಕೀಲರ ವೃಂದದವರು, ಸಂಧಾನಕಾರ ವಕೀಲರು, ಪಕ್ಷಗಾರರು ಉಪಸ್ಥಿತರಿದ್ದರು.

ಎಲ್ಲ ತಾಲ್ಲೂಕುಗಳ ನ್ಯಾಯಾಧೀಶರು ಹಾಗೂ ವಕೀಲ ವೃಂದದವರು ಕೂಡ ಆಯಾ ತಾಲ್ಲೂಕು ನ್ಯಾಯಾಲಯಗಳಲ್ಲಿ ನಡೆದ ಲೋಕ ಅದಾಲತ್‍ದಲ್ಲಿ ಪಾಲ್ಗೊಂಡಿದ್ದರು.

ಮೆಗಾ ಲೋಕ ಅದಾಲತ್‍ಗೆ ಸಹಕಾರ ನೀಡಿದ ಎಲ್ಲರಿಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಎಸ್.ಮಹಾಲಕ್ಷ್ಮೀ ನೇರಳೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ ಧನ್ಯವಾದ ಸಲ್ಲಿಸಿದ್ದಾರೆ.

ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನ ಹಾಗೂ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ 5 ಪ್ರಕರಣಗಳಲ್ಲಿ ದಂಪತಿಯನ್ನು ಪುನಃ ಒಂದುಗೂಡಿಸಿ ಹಾರ ಬದಲಾಯಿಸಿ, ಅವರಿಗೆ ಸಿಹಿ ಹಂಚಿ ಕಳುಹಿಸಿ ಕೊಡಲಾಯಿತು.
ಎಸ್.ಮಹಾಲಕ್ಷ್ಮೀ ನೇರಳೆ, ನ್ಯಾಯಾಧೀಶೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT