ರೋಣ: ‘ಮಹರ್ಷಿ ವಾಲ್ಮೀಕಿಯವರು ಭಾರತದ ಮಹಾನ್ ದಾರ್ಶನಿಕ ಕವಿಯಾಗಿ ರಾಮಾಯಣದಂತಹ ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಮಹಾ ಕಾವ್ಯವನ್ನು ನಮಗೆ ನೀಡಿದ್ದಾರೆ. ಅದರ ಸಾರಾಂಶವನ್ನು ಅರಿತು ನಾವು ಜೀವನ ರೂಪಿಸಿಕೊಳ್ಳಬೇಕು’ ಎಂದು ಪುರಸಭೆ ಮಾಜಿ ಉಪಾಧ್ಯಕ್ಷ ಮಿಥುನ್.ಜಿ.ಪಾಟೀಲ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಸೋಮವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿಯವರ ಆದರ್ಶ ಹಾಗೂ ಜೀವನ ಚರಿತ್ರೆಯನ್ನು ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಯಂತಿಗಳನ್ನು ಆಚರಣೆ ಮಾಡುವುದರ ಹಿಂದೆ ಅದರದ್ದೆ ಆದ ಮಹತ್ವ ಇರುತ್ತದೆ ಎಂದರು.

ಮಹಾನ್ ನಾಯಕರ, ದಾರ್ಶನಿಕರ ಜೀವನ ಚರಿತ್ರೆಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವುದೇ ಜಯಂತಿ ಆಚರಣೆಯ ಪ್ರಮುಖ ಉದ್ದೇಶವಾಗಿರಬೇಕು. ಅದನ್ನು ಸಾಕಾರಗೊಳಿಸಲು ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದಲೇ ಎಲ್ಲವನ್ನು ಪಡೆದುಕೊಳ್ಳಲು ಸಾಧ್ಯ. ಆದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಪಾಳು ಬಿದ್ದಿರುವ ತಾಲ್ಲೂಕಿನ ವಾಲ್ಮೀಕಿ ಭವನದ ಪುನರ್ ನಿರ್ಮಾಣವನ್ನು ಮುಂಬರುವ ದಿನಮಾನಗಳಲ್ಲಿ ಪೂರ್ಣಗೊಳಿಸುವಲ್ಲಿ ಶಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ನಾವು ಪುರಸಭೆಯಿಂದ ಸಹಾಯ ಸಹಕಾರ ನೀಡಲು ಸಿದ್ದರಿದ್ದೆವೆ ಎಂದರು.

ಕಾರ್ಯಕ್ರಮದಲ್ಲಿ ರಾಜಾ ಅಚ್ಚುತ ನಾಯಕ ವಾಲ್ಮೀಕಿ ಸಮಾಜದ ಗುರುಗಳು (ಹುಲಿಹೈದರ), ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಸವರಾಜ ತಳವಾರ, ಗಜೇಂದ್ರಗಡ ಅಧ್ಯಕ್ಷ ಹನಮಂತಪ್ಪ ಹಟ್ಟಿಮನಿ, ಬಸವಂತಪ್ಪ ತಳವಾರ, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಮಂಜುಳಾ ಹುಲ್ಲಣ್ಣವರ, ಅನೀಲ ಸಿದ್ದಮ್ಮನಹಳ್ಳಿ, ಪುರಸಭೆ ಸದಸ್ಯ ಸಂತೋಷ ಕಡಿವಾಲ, ತಹಶಿಲ್ದಾರ ನಾಗರಾಜ ಕೆ., ತಾಲ್ಲೂಕು ಪಂಚಾಯಿತಿ ಇ.ಒ ಮಂಜುಳಾ ಹಕಾರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೀತಾ ಆಲೂರ, ಬಿಇಒ ರುದ್ರಪ್ಫ ಹುರಳಿ, ಪಿ.ಎಚ್.ಕಡಿವಾಲ, ಶ್ರೀಧರ ನಾಯಕ, ಲಕ್ಷ್ಮಣ ಗೌಡಣ್ಣವರ, ಶೇಖಪ್ಪ ಜುಟ್ಲ, ಕುಮಾರ ಗೌಡಣ್ಣವರ, ಸಂಜಯ ದೊಡ್ಡಮನಿ, ಬಲವಂತ ನಾಯಕ, ಎಲ್.ಆರ್.ನಾಯಕ ಇದ್ದರು.

ಶರಣು ಮುಷ್ಠಿಗೇರಿ ಉಪನ್ಯಾಸ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.