ಮುಂಡರಗಿ: ವಿವಿಧ ಕೃಷಿ ಸೌಲಭ್ಯಗಳ ವಿತರಣೆಯಲ್ಲಿ ಇಲ್ಲಿಯ ಕೃಷಿ ಅಧಿಕಾರಿಗಳು ತಾರತಮ್ಯ ಎಸಗುತ್ತಿದ್ದಾರೆ ಎನ್ನುವ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಅವರು ಶುಕ್ರವಾರ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯಕ್ಕೆ ದಿಢೀರ್ ಭೇಟಿ ನೀಡಿ, ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

ಶಿರಹಟ್ಟಿ ಮತಕ್ಷೇತ್ರವು ರೋಣ ಹಾಗೂ ಮುಂಡರಗಿ ತಾಲ್ಲೂಕುಗಳಿಗೆ ಹಂಚಿ ಹೋಗಿದ್ದು, ಕೃಷಿ ಅಧಿಕಾರಿಗಳು ಮುಂಡರಗಿ ತಾಲ್ಲೂಕನ್ನು ಅಲಕ್ಷಿಸುತ್ತಿದ್ದಾರೆ. ಇದರಿಂದ ತಾಲ್ಲೂಕಿನ ಬಡ ಕೃಷಿಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಬಡ ರೈತರ ಮೇಲಾಗುವ ಅನ್ಯಾಯವನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ರೈತರಿಗೆ ವಿತರಿಸಲು ಒಟ್ಟು 42 ಹಸುಗಳು ಮಂಜೂರಾಗಿದ್ದವು. ಅವೆಲ್ಲವುಗಳನ್ನು ಕೇವಲ ರೋಣ ಮತಕ್ಷೇತ್ರಕ್ಕೆ ವಿತರಿಸಲಾಗಿದ್ದು, ಈ ಭಾಗದ ರೈತರಿಗೆ ಒಂದೂ ಹಸವುವನ್ನು ವಿತರಿಸಿಲ್ಲ. ಕಳೆದ ಎರಡು ವರ್ಷಗಳಿಂದ ಈ ಭಾಗರ ರೈತರಿಗೆ ಹಸುಗಳನ್ನು ವಿತರಿಸದೆ ಇರುವುದರಿಂದ ಇಲ್ಲಿಯ ರೈತರಿಗೆ ಅನ್ಯಾಯವಾಗಿದ್ದು, ಅದಕ್ಕೆ ಅಧಿಕಾರಿಗಳ ಮಲತಾಯಿ ಧೋರಣೆಯೇ ಕಾರಣವಾಗಿದೆ. ಇಂತಹ ತಾರತಮ್ಯವನ್ನು ಸಹಿಸಲಾಗುವುದಿಲ್ಲ ಎಂದು ತಿಳಿಸಿದರು.

ಕೃಷಿಹೊಂಡ ನಿರ್ಮಾಣದಲ್ಲಿಯೂ ಈ ಭಾಗದ ರೈತರಿಗೆ ಕೃಷಿ ಅಧಿಕಾರಿಗಳು ಅನ್ಯಾಯ ಎಸಗಿದ್ದು, ಒಟ್ಟು 52 ಕ್ಷೃಷಿ ಹೊಂಡಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿತ್ತು. ಅದರಲ್ಲಿ 26ಕೃಷಿಹೊಂಡಗಳು ಈ ಭಾಗದ ರೈತರಿಗೆ ದೊರೆಯಬೇಕಿತ್ತು. ಆದರೆ ಇಲ್ಲಿಯ ಅಧಿಕಾರಿಗಳು ಅಷ್ಟೂ ಕೃಷಿಹೊಂಡಗಳನ್ನು ರೋಣ ಮತಕ್ಷೇತ್ರಕ್ಕೆ ನೀಡಿದ್ದು, ಇಲ್ಲಿಯ ಕೃಷಿಕರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಿರಹಟ್ಟಿ ಮತಕ್ಷೇತ್ರವು ಅರೆಮಲೆನಾಡು ಪ್ರದೇಶವಾಗಿದ್ದು, ಕೃಷಿಕರಿಗೆ ಅನುಕೂಲವಾಗಲಿ ಎನ್ನುವ ಕಾರಣದಿಂದ ಕಳೆದ ಅಧಿವೇಶನದಲ್ಲಿ ಸಾಕಷ್ಟು ಕೃಷಿಹೊಂಡಗಳನ್ನು ಮಂಜೂರು ಮಾಡಿಸಿಕೊಳ್ಳಲಾಗಿತ್ತು. ಆದರೆ ನಮ್ಮ ಕ್ಷೇತ್ರಕ್ಕೆ ಕೃಷಿಹೊಂಡ ವಿತರಿಸದಿರುವುದು ಅಧಿಕಾರಿಗಳ ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದು ತಿಳಿಸಿದರು.

ಒಂದು ವಾರದೊಳಗಾಗಿ ಅರ್ಜಿ ಸಲ್ಲಿಸಿದ ಇಲ್ಲಿಯ ಅರ್ಹ ರೈತರಿಗೆ ಹಸುಗಳನ್ನು ವಿತರಿಸಬೇಕು ಹಾಗೂ ಕೃಷಿಹೊಂಡ ನಿರ್ಮಿಸಿಕೊಡಬೇಕು. ಇಲ್ಲದಿದ್ದರೆ ರೈತರು ಕೃಷಿ ಅಧಿಕಾರಿಗಳ ಮನೆಯ ಮುಂದೆ ಧರಣಿ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.

ಮುಖಂಡರಾದ ಕುಮಾರಸ್ವಾಮಿ ಹಿರೇಮಠ, ಬಸವರಾಜ ಬಿಳಿಮಗ್ಗದ, ರವಿಗೌಡ ಪಾಟೀಲ, ಸುನೀಲರಡ್ಡಿ ನೀರಲಗಿ, ರವಿ ಲಮಾಣಿ, ಪವನ ಮೇಟಿ, ರಾಜಶೇಖರ ರಡ್ಡಿ, ಶಿವಕುಮಾರ ಕುರಿ, ಶಂಕರ ಉಳ್ಳಾಗಡ್ಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.