ಧರಣಿ ನಿರತರನ್ನು ಭೇಟಿಯಾದ ಶಾಸಕ ಲಮಾಣಿ

7
ನಾಲ್ವರು ಮಹಿಳೆಯರು ಆಸ್ಪತ್ರೆಗೆ ದಾಖಲು

ಧರಣಿ ನಿರತರನ್ನು ಭೇಟಿಯಾದ ಶಾಸಕ ಲಮಾಣಿ

Published:
Updated:
1. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ಐದು ದಿನಗಳಿಂದ ಇಲ್ಲಿನ ಪುರಸಭೆ ಎದುರು ಅಹೋರಾತ್ರಿ ಧರಣಿ ನಡೆಸುತ್ತಿರುವ ಹೊರಗುತ್ತಿಗೆ ಮಹಿಳಾ ಪೌರ ಕಾರ್ಮಿಕರನ್ನು ಭಾನುವಾರ ಶಾಸಕ ರಾಮಣ್ಣ ಲಮಾಣಿ ಭೇಟಿ ಮಾಡಿ ಅವರ ಅಹವಾಲು ಆಲಿಸಿದರು.

ಲಕ್ಷ್ಮೇಶ್ವರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಐದು ದಿನಗಳಿಂದ ಇಲ್ಲಿನ ಪುರಸಭೆ ಎದುರು ಅಹೋರಾತ್ರಿ ಧರಣಿ ನಡೆಸುತ್ತಿರುವ ಹೊರಗುತ್ತಿಗೆ ಮಹಿಳಾ ಕಾರ್ಮಿಕರನ್ನು ಭಾನುವಾರ ಶಾಸಕ ರಾಮಣ್ಣ ಲಮಾಣಿ ಭೇಟಿ ಮಾಡಿ ಅವರ ಅಹವಾಲು ಆಲಿಸಿದರು.

ಈ ಸಂದರ್ಭದಲ್ಲಿ ಧರಣಿ ಮಹಿಳೆಯೊಬ್ಬರು ‘ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಅಳುತ್ತ ಶಾಸಕರ ಕಾಲಿಗೆ ಬಿದ್ದರು. ಆಗ ಶಾಸಕರು ಮಹಿಳೆಯರನ್ನು ಸಮಾಧಾನಪಡಿಸಿ ‘ಬೆಂಗಳೂರಿಗೆ ತೆರಳಿ ಪೌರಾಡಳಿತ ಸಚಿವ ರಮೇಶ ಜಾರಕಿಜೊಳಿ ಅವರನ್ನು ಭೇಟಿ ಮಾಡಿ ನಿಮ್ಮ ಸಮಸ್ಯೆಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.

ನಾಲ್ವರು ಮಹಿಳೆಯರು ಆಸ್ಪತ್ರೆಗೆ ದಾಖಲು: ಇದಕ್ಕೂ ಮೊದಲು ಶಾಸಕರು ಧರಣಿ ನಿರತ ಮಹಿಳೆಯರಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಳಲುತ್ತಿದ್ದ ಸಾವಕ್ಕ ಗಡದವರ, ದ್ಯಾಮವ್ವ ನಂದೆಣ್ಣವರ, ಗಂಗವ್ವ ಅಯ್ಯಣ್ಣವರ, ಕಮಲವ್ವ ನಂದೆಣ್ಣವರ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಅನಾರೋಗ್ಯ ಪೀಡಿತ ಮಹಿಳೆಯರಲ್ಲಿ ಸಾವಕ್ಕ ಗಡದವರ ಅವರು ಟೈಫಾಯ್ಡ್‌ ಜ್ವರದಿಂದ ಬಳಲುತ್ತಿದ್ದು ಉಳಿದ ಮೂವರು ಮಹಿಳೆಯರು ವಾಂತಿ-ಭೇದಿ ರೋಗದಿಂದ ನರಳುತ್ತಿದ್ದಾರೆ.

ಈ ಸಂದರ್ಭದಲ್ಲಿ ಪ್ರವೀಣ ಬೋಮಲೆ, ವಿಜಯ ಕುಂಬಾರ, ಅರುಣ ಮೆಕ್ಕಿ, ಸಂತೋಷ ಜಾವೂರ, ಬಸಣ್ಣ ಮೆಣಸಿನಕಾಯಿ, ಲೋಕೇಶ ಸುತಾರ, ವಿಜಯ ಗಜಾಕೋಶ, ಮಹೇಶ ನಂದೆಣ್ಣವರ, ನಾಗೇಶ ನಂದೆಣ್ಣವರ, ಕೋಟೆಪ್ಪ ನಂದೆಣ್ಣವರ, ಮಂಜುನಾಥ ಗಡದವರ, ರಮೇಶ ಅಯ್ಯಣ್ಣವರ, ಆನಂದ ಗಡದವರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !