ಮುಳಗುಂದ: ಪಟ್ಟಣದಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ನಡೆದ ಹೊತ್ತಿನಲ್ಲಿ, ಸೋಮವಾರ ಡೀಸೆಲ್ ಅಭಾವ ಉಂಟಾಗಿ, ದಿನವೀಡಿ ಕೃಷಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಉತ್ತಮ ಮಳೆಯಾಗಿದ್ದು, ರೈತರು ಟ್ರ್ಯಾಕ್ಟರ್ ಮೂಲಕ ಬೀಜ ಬಿತ್ತನೆಗೆ ಭೂಮಿ ಹದಗೊಳಿಸುವ ಕೆಲಸ ಬಿರುಸು ಪಡೆದುಕೊಂಡಿದೆ. ಈ ಹೊತ್ತಲ್ಲೆ ಇಲ್ಲಿನ ನಾಲ್ಕು ಬಂಕ್ಗಳಲ್ಲಿ ಡೀಸೆಲ್ ಕೊರತೆ ಉಂಟಾಗಿ ಸೋಮವಾರ ದಿನವೀಡಿ ಡೀಸೆಲ್ ಇಲ್ಲದೇ ಕೃಷಿ ಕಾರ್ಯಗಳು ಸ್ಥಗಿತಗೊಂಡಿದ್ದವು. ಕೆಲವು ರೈತರು ಗದಗ ನಗರಕ್ಕೆ ಹೋಗಿ ಕ್ಯಾನ್ನಲ್ಲಿ ಡೀಸೆಲ್ ತಂದು ಕೃಷಿ ಕೆಲಸ ಮುಂದುವರಿಸಿದರು. ಸಂಜೆ ಹೊತ್ತಿಗೆ ಬಸವೇಶ್ವರ ಬಂಕ್ಗೆ ಡೀಸೆಲ್ ಬರುತ್ತಿದ್ದಂತೆ ನೂರಾರು ರೈತರು ಕ್ಯಾನ್ ಹಾಗೂ ಟ್ರ್ಯಾಕ್ಟರ್ ತಂದು ಸರದಿ ಸಾಲಿನಲ್ಲಿ ನಿಂತು ಡೀಸೆಲ್ ಖರೀದಿಸಿದರು.

ವಿವಿಧ ಭಾಗದಲ್ಲಿ ಡೀಸೆಲ್ ಸಿಗುತ್ತಿಲ್ಲ ಎನ್ನುವ ಸುದ್ದಿ ಹರಡಿದ ಕಾರಣ ಸಾಕಷ್ಟು ರೈತರು ಭಾನುವಾರವೇ ಹೆಚ್ಚಿನ ಪ್ರಮಾಣದಲ್ಲಿ ಡೀಸೆಲ್ ಖರೀದಿಸಿದ್ದರು. ಜೊತೆಗೆ ನಿಗದಿತ ಅವಧಿಗೆ ಬರಬೇಕಿದ್ದ ಡೀಸೆಲ್ ಟ್ಯಾಂಕರ್ ಬಾರದೇ ಇರುವ ಕಾರಣ ಕೊರತೆ ಉಂಟಾಯಿತು ಎಂದು ಬಂಕ್ ಮಾಲೀಕರೊಬ್ಬರು ತಿಳಿಸಿದರು. ಸಧ್ಯ ಮೂರು ಬಂಕ್ಗಳಿಗೆ ಡೀಸೆಲ್ ಬಂದಿದ್ದು, ಕೊರೆತೆ ನೀಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-23-1588182955

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.