ಮುಳಗುಂದ: ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ಒಂದು ವಾರದಿಂದ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೇ ಸತಾಯಿಸಿದ ಹೆಸ್ಕಾಂ ಸಿಬ್ಬಂದಿ ವಿರುದ್ಧ ಆಕ್ರೋಶಗೊಂಡ ರೈತರು ಇಲ್ಲಿನ ಹೆಸ್ಕಾಂ ಕಚೇರಿಗೆ ಶನಿವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಕಳೆದ ಕೆಲ ತಿಂಗಳಿಂದ ಪಟ್ಟಣಕ್ಕೆ ವಿದ್ಯುತ್ ಕೊರತೆಯಾಗುತ್ತಿದ್ದು, ವಿದ್ಯುತ್ ಕಡಿತವಾಗುತ್ತಿದೆ. ವಾರದಿಂದ ನಿರಂತರ ವಿದ್ಯುತ್ ಕಡಿತವಾಗುತ್ತಿದೆ. ಕಳೆದ ವಾರ ಮಳೆ ಗಾಳಿಯಿಂದ ಕಂಬಗಳು ಬಿದ್ದಿದ್ದರಿಂದ ಇಲ್ಲಿಯವರೆಗೆ ನಾವು ಹೇಗೋ ನಿಭಾಯಿಸಿದ್ದೇವೆ. ಆದರೆ ಸುಮ್ಮನೆ ಇದ್ದಾರೆ ಎನ್ನುವ ಕಾರಣಕ್ಕೆ ವಿದ್ಯುತ್ ದುರಸ್ತೆ ಕಾರ್ಯ ಮಾಡದೇ ಹೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತ ಅಕ್ಷಯ ಬಟ್ಟೂರ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಸ್ಥಳಕ್ಕಾಗಮಿಸಿದ ಗದಗ ಹೆಸ್ಕಾಂ ಎಇಇ ನಾಗರಾಜ ಕುರಿಯವರಿಗೆ ಸಹ ರೈತರು ತರಾಟೆಗೆ ತೆಗೆದುಕೊಂಡರು. ನಂತರ ಎಂಜನಿಯರ್ ರೈತರ ಮನವೊಲಿಸಿದರು. ಕೆಲ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿವೆ ಇನ್ನೂ ಕೆಲ ಸಮಸ್ಯೆಗಳು ಬಂದಿಲ್ಲ. ಅವುಗಳನ್ನು ಒಂದು ವಾರದಲ್ಲಿ ಬಗೆಹರಿಸುತ್ತೇವೆ. ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ತಿಳಿಸಿ ಹೇಳಿ ನಾನು ಬಗೆ ಹರಿಸುತ್ತೇನೆ. ರೈತರ ಸಮಸ್ಯೆಗಳನ್ನು ಸಿಬ್ಬಂದಿಯಿಂದ ಪಟ್ಟಿ ಮಾಡಿಸಿ ಒಂದು ವಾರದಲ್ಲಿಯೇ ಸಮಸ್ಯೆಗಳನ್ನು ಪರಿಹರಿಸುವುದಾಗಿ ನಾಗರಾಜ ಕುರಿ ತಿಳಿಸಿದರು.

ರೈತರಾದ ದೇವರಾಜ ಸಂಗನಪೇಟಿ, ಕಿರಣ ಕುಲಕರ್ಣಿ, ಕಿರಣ ಬಟ್ಟೂರ, ಮಲ್ಲಪ್ಪ ಹೊಸಕಟ್ಟಿ, ಪ್ರಭು ಲದ್ದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-23-1240579071

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.