ಮುಳಗುಂದ: ಪಟ್ಟಣದಿಂದ ನೀಲಗುಂದ ಗ್ರಾಮಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುವ ಡಾಂಬರ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಸುಗಮ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ಅಭಿವೃದ್ದಿಪಡಿಸಿ ಸುಮಾರು 8 ವರ್ಷ ಆಗಿದ್ದು, ಹಲವು ದಿನಗಳಿಂದ ರಸ್ತೆ ಹಾಳಾಗಿದೆ. ಆದರೆ ಈ ವರೆಗೂ ದುರಸ್ತಿ ನಡೆದಿಲ್ಲ. ರಸ್ತೆ ಉದ್ದಕ್ಕೂ ಡಾಂಬರ್ ಕಿತ್ತು ಗುಂಡಿಗಳು ಬಿದ್ದಿವೆ, ಕೆಲವು ಭಾಗದಲ್ಲಿ ಮೆಟ್ಲಿಂಗ್ ಹಾಳಾಗಿ ಕಲ್ಲುಗಳು ರಸ್ತೆ ತುಂಬ ಹರಡಿವೆ. ಈ ರಸ್ತೆಯ ಮಧ್ಯ ಹಳ್ಳದ ಹತ್ತಿರ ಅಪಾಯ ಮಟ್ಟದ ತಿರುವಿನಲ್ಲಿ ಸುರಕ್ಷಾ ಗೋಡೆ ನಿರ್ಮಿಸದೇ ಇರುವುದರಿಂದ ಹಲವು ವಾಹನ, ಬೈಕ್ ಸವಾರರು ಗುಂಡಿಗೆ ಬಿದ್ದು ಅಪಘಾತಗಳು ಸಂಭವಿಸಿವೆ.

ಮಳೆ ಸುರಿದರೆ ಗುಂಡಿಗಳು ತುಂಬಿ ಹೊಂಡವಾಗುತ್ತಿವೆ. ಕೆಲವು ಭಾಗದಲ್ಲಿ ಇಕ್ಕಟಾದ ರಸ್ತೆ ಇದ್ದು, ಇನ್ನಷ್ಟು ವಿಸ್ತರಿಸಿ ರಸ್ತೆ ನಿರ್ಮಿಸಬೇಕಿದೆ. ಚಿಂಚಲಿ ಮತ್ತು ಮುಳಗುಂದ ಮುಖ್ಯ ರಸ್ತೆಯಿಂದ ನೀಲಗುಂದ ಗ್ರಾಮದವರೆಗೆ ಸುಮಾರು 5 ಕಿ.ಮೀ ರಸ್ತೆ ಹಾಳಾಗಿ ಸಾಕಷ್ಟು ಪ್ರಮಾಣದಲ್ಲಿ ಕಡಿ ಕಿತ್ತು ಹರಡಿಕೊಂಡಿದೆ. ಬಹುತೇಕ ರೈತರೆ ಬಳಸುವ ರಸ್ತೆ ಇದಾಗಿದೆ. ಕಡಿ ಕಿತ್ತಿದ್ದರಿಂದ ಎತ್ತು ಚಕ್ಕಡಿ ಸಂಚಾರಕ್ಕೆ ತೊಂದರೆ ಆಗುತ್ತಿದೆ.

ರಸ್ತೆ ದುರಸ್ತಿಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಈವರೆಗೂ ದುರಸ್ತಿ ಕಾಮಗಾರಿ ಮಾಡಿಲ್ಲ. ಈಚೆಗೆ ಪಿಡಬ್ಲುಡಿ ಇಲಾಖೆ ವತಿಯಿಂದ ಗುಂಡಿ ಮುಚ್ಚುವ ಕೆಲಸವೂ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿನಯ್ ಬಂಗಾರಿ ಆರೋಪಿಸಿದರು.

ನೀಲಗುಂದ ಗ್ರಾಮಸ್ಥರಿಗೆ ನಿತ್ಯದ ಕೆಲಸ, ವಾಣಿಜ್ಯ ಉದ್ದೇಶಕ್ಕಾಗಿ ಮುಳಗುಂದಕ್ಕೆ ಬರಲು ನೇರ ಸಂಪರ್ಕಕೊಂಡಿಯಂತೆ ಇದ್ದ ರಸ್ತೆ ತೀರಾ ಹಾಳಾಗಿದೆ. ವಾಹನ ಸಂಚಾರಕ್ಕೆ ಯೋಗ್ಯವಿಲ್ಲದ ಕಾರಣ ಚಿಂಚಲಿ ಮೂಲಕ 12 ಕಿ.ಮೀ ಸುತ್ತಿ ಮುಳಗುಂದಕ್ಕೆ ಬರುವ ಸ್ಥಿತಿ ಇದೆ. ಕೂಡಲೇ ರಸ್ತೆ ಕಾಮಗಾರಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-23-465640937

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.