ಮುಂಡರಗಿ: 'ಬಡತನ ಹಾಗೂ ಸೌಲಭ್ಯ ವಂಚಿತ ಕುಟುಂಬದ ಹಿನ್ನೆಲೆಯಿಂದ ಬಂದ ಡಾ.ಅಂಬೇಡ್ಕರ್ ಅವರು ನಿಶ್ವಿತ ಗುರಿಯೊಂದಿಗೆ ಅಧ್ಯಯನಶೀಲರಾಗಿ ಜಗತ್ತಿಗೆ ಮಾದರಿಯಾಗಬಲ್ಲ ಸಂವಿಧಾನ ರಚಿಸಿದರು. ಅವರು ರಚಿಸಿರುವ ಸಂವಿಧಾನವು ಇಂದು ಜಗತ್ತಿನ ಹಲವು ರಾಷ್ಟ್ರಗಳ ಸಂವಿಧಾನಗಳಿಗೆ ಪ್ರೇರಣೆಯಾಗಿದೆ' ಎಂದು ತಾ.ಪಂ.ಇ.ಒ. ವಿಶ್ವನಾಥ ಹೊಸಮನಿ ತಿಳಿಸಿದರು.

ತಾಲ್ಲೂಕು ಆಡಳಿತವು ಮಂಗಳ ವಾರ ಇಲ್ಲಿಯ ತಹಶೀಲ್ದಾರ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ನೀಡಿದ ಸಮಾನತೆಯ ಕಾರಣದಿಂದ ಇಂದು ದೇಶದ ಎಲ್ಲ ಧರ್ಮ, ಜಾತಿ, ಮತ, ಪಂತಗಳ ಜನರು ಸಮಾನತೆಯಿಂದ ಬದುಕುವಂತಾಗಿದೆ. ಅವರ ಬದುಕು ನಮಗೆಲ್ಲ ಮಾದರಿಯಾಗಿದೆ ಎಂದು ತಿಳಿಸಿದರು.

ಡಿ.ಎಸ್.ಎಸ್. ಮುಖಂಡ ಸತೀಶ ಪಾಶಿ ಮಾತನಾಡಿ, ಅಪಾರ ಜ್ಞಾನ ಸಂಪನ್ನರಾಗಿದ್ದ ಡಾ.ಅಂಬೇಡ್ಕರ್ ಅವರು ಅಪ್ರತಿಮ ಪಂಡಿತರಾಗಿದ್ದರು. ಕೆಲವು ದೇಶಗಳಲ್ಲಿ ಅವರ ಜಯಂತಿಯನ್ನು ಜ್ಞಾನದ ಜಯಂತಿಯನ್ನಾಗಿ ಆಚರಿಸಲಾಗುತ್ತಿದೆ. ಬಡತನ ಕಲಿಸುವಷ್ಟು ಪಾಠಗಳನ್ನು ಯಾವ ವಿಶ್ವವಿದ್ಯಾಲಯಗಳು ಕಲಿಸುವುದಿಲ್ಲ ಎಂದು ತಿಳಿಸಿದರು.

ತಹಶೀಲ್ದಾರ್ ಎರ್ರಿಸ್ವಾಮಿ.ಪಿ.ಎಸ್. ಮಾತನಾಡಿ, ಮಹಾನ್ ತತ್ವಜ್ಞಾನಿಯಾಗಿದ್ದ ಅಂಬೇಡ್ಕರ್ ಅವರು ಜಗತ್ತು ಕಂಡ ಒಬ್ಬ ಮಹಾನ್ ನಾಯಕರಾಗಿದ್ದಾರೆ. ಅವರ ತತ್ವಾದರ್ಶಗಳನ್ನು ನಾವೆಲ್ಲ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಆಶಯಗಳಂತೆ ಬದುಕಬೇಕು ಎಂದು ಸಲಹೆ ನೀಡಿದರು. ಡಿ.ಎಸ್.ಎಸ್. ಮುಖಂಡ ಎಚ್.ಡಿ.ಪೂಜಾರ ಸಂವಿಧಾನದ ಪೀಠಿಕೆ ಬೋಧಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಉದಯಕುಮಾರ ಎಲಿವಾಳ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ ಅರಹುಣಸಿ ಕಾರ್ಯಕ್ರಮ ನಿರೂಪಿಸಿದರು.

ಡಿ.ಎಸ್.ಎಸ್. ಮುಖಂಡರಾದ ಸೊಮಣ್ಣ ಹೈತಾಪುರ, ದುರುಗಪ್ಪ ವಿಠಲಾಪೂರ, ಮುಖಂಡರಾದ ರಾಮಣ್ಣ ಕೋಳಿ, ಆನಂದಗೌಡ ಪಾಟೀಲ, ನಾಗೇಶ ಹುಬ್ಬಳ್ಳಿ, ಬಸವರಾಜ ದೇಸಾಯಿ, ಚಿನ್ನಪ್ಪ ಒಡ್ಡಟ್ಟಿ, ಬಸವರಾಜ ನವಲಗುಂದ, ದ್ರುವಕುಮಾರ ಹೂಗಾರ, ಮಂಜುನಾಥ ಮುಧೋಳ, ಪವಿತ್ರಾ ಕಲ್ಲಕುಟಿಗರ, ಅರುಣಾ ಪಾಟೀಲ, ಪುಷ್ಪಾ ಉಕ್ಕಲಿ ಉಪಸ್ಥಿತರಿದ್ದರು.

‘ಜಾತಿ ವಿನಾಶಕ್ಕೆ ಕರೆ ನೀಡಿದ ಸುಧಾರಕ’

ನರೇಗಲ್: ವಿಶ್ವಕಂಡ ಮಹಾನ್ ಸಮಾಜ ಸುಧಾರಣೆಯ ಹರಿಕಾರರಾದ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ ವಾಗಿದೆ ಎಂದು ಸರ್ವಧರ್ಮ ಸಮನ್ವಯ ಸಮಿತಿಯ ಮುಖಂಡ ಸಂತೋಷ ಹನಮಸಾಗರ ಹೇಳಿದರು.

ನರೇಗಲ್ ಪಟ್ಟಣದ ಹೊಸ ಬಸ್ ನಿಲ್ದಾಣದ ಹಿಂದುಗಡೆಯ ಸರ್ಕಲ್ನಲ್ಲಿ ಸರ್ವಧರ್ಮ ಸಮನ್ವಯ ಸಮಿತಿ ವತಿಯಿಂದ ಮಂಗಳವಾರ ಆಚರಣೆ ಮಾಡಲಾದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಬಹಳಷ್ಟು ಸಾಮಾಜಿಕ ಸಮಸ್ಯೆಗಳನ್ನು ಎದುರಿಸಿ ಸಾಮಾಜಿಕ ಸಾಮರಸ್ಯ ಹಾಗೂ ಸಮಾಜ ಸುಧಾರಣೆಗಾಗಿ ಹೋರಾಡಿದ ಮಹಾನ್ ದಾರ್ಶನಿಕರಾಗಿದ್ದಾರೆ. ಸಮಾಜದಲ್ಲಿನ ಅನಿಷ್ಠ ಜಾತಿ ಪದ್ಧತಿಯನ್ನು ತಮ್ಮ ಚಿಕ್ಕವಯಸ್ಸಿನಲ್ಲೇ ಕಂಡ ಡಾ. ಅಂಬೇಡ್ಕರ ಅವರು ಜಾತಿ ಪದ್ಧತಿ ಸಂಪೂರ್ಣ ನಿರ್ಮೂಲನೆ ಮಾಡಲು ಸಾಕಷ್ಟು ಹೋರಾಟಗಳನ್ನು ಕೈಗೊಂಡಿದ್ದಾರೆ. ದೇಶದ ಸಂವಿಧಾನ ರಚನೆಯಲ್ಲಿ ಅವರ ಪಾತ್ರ ಪ್ರಮುಖವಾಗಿದೆ ಎಂದರು.

ಸರ್ವಧರ್ಮ ಸಮನ್ವಯ ಸಮಿತಿಯ ಮುಖಂಡ ರಫೀಕ ನದಾಫ್ ಮಾತನಾಡಿದರು. ಕಾರ್ಯಕ್ರಮದ ಬಳಿಕ ಜನರಿಗೆ ಅನ್ನಸಂತರ್ಪಣೆ ನೆರವೇರಿತು.

ಮುಖಂಡರಾದ ಸದ್ದಾಂ ನಶೇಖಾನ್, ಮುತ್ತಪ್ಪ ನೂಲ್ಕಿ, ಖಾದರ ಭಾಷಾ ಹೂಲಗೇರಿ, ಸಂತೋಷ ಸಾತನೂರ, ಸತೀಶ ಮಾಳವಾಡ, ರಘು ಕಟ್ಟಿಮನಿ, ಪ್ರಶಾಂತ ನಾಡಗೌಡರ, ವಿನಾಯಕ ಕಟ್ಟಿಮನಿ, ಪ್ರಕಾಶ ಮಣ್ಣೊಡ್ಡರ, ಶ್ರೀಕಾಂತ ಮಣ್ಣೊಡ್ಡರ, ಮುತ್ತಪ್ಪ ಹನಮಸಾಗರ, ನೀಲಪ್ಪ ಚಳ್ಳಮರದ ಇದ್ದರು.

ಸರ್ಕಾರಿ ಕಾಲೇಜು: ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಭಾರತರತ್ನ ಬಿ.ಆರ್.ಅಂಬೇಡ್ಕರ್ ಅವರ ದಿನಾಚರಣೆಯಲ್ಲಿ ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಪ್ರಾಂಶುಪಾಲ ಎಸ್.ಎಲ್.ಗುಳೇದಗುಡ್ಡ, ದೇಶಕ್ಕೆ ಸಮಾನತೆ ತತ್ವಬೋಧಿಸಿದ ಸಂವಿಧಾನಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರು ಮಹಾನ್ ಮಾನವತಾವಾದಿ, ಅಹಿಂಸಾ ಪ್ರತಿಪಾದಕರು. ತಮ್ಮ ಜ್ಞಾನ ಹಾಗೂ ಮಾನವೀಯತೆ ಎನ್ನುವ ಸಂಪತ್ತು ಅನ್ನು ಗಳಿಸಿ ಜಗತ್ತಿಗೆ ತೋರಿಸಿದ ಸಾಧಕರಾಗಿದ್ದಾರೆ ಎಂದರು. ಸಿಬ್ಬಂದಿ ಇದ್ದರು.

ಅಂಗನವಾಡಿ ಕೇಂದ್ರ: ಡಾ. ಬಿ.ಆರ್.ಅಂಬೇಡ್ಕರ್ ನಗರದಲ್ಲಿರುವ 130ನೇ ಅಂಗನವಾಡಿ ಕೇಂದ್ರದಲ್ಲಿ ಆಚರಣೆ ಮಾಡಲಾದ ಜಯಂತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಅನಿತಾ ಚಳ್ಳಮರದ, ಅಲ್ಲಮ್ಮಾ ನಧಾಪ್, ಸಹಾಯಕಿ ಹುಸೇನ್ಬಿ ನೇಶಖಾನ, ಶಶಿಕಲಾ ಗದಗಿನಮನಿ ಇದ್ದರು.

ಗಜೇಂದ್ರಗಡ: ‘ಒಂದೊಂದು ವಿಷಯದಲ್ಲಿ ಪರಿಣಿತಿ ಪಡೆದವರು ಇದ್ದಾರೆ. ಆದರೆ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಕಾನೂನು ಶಾಸ್ತ್ರ, ತತ್ವಶಾಸ್ತ್ರ, ಸಮಾಜ ಶಾಸ್ತ್ರ, ರಾಜಕೀಯ ಹೀಗೆ ವಿವಿಧ ವಿಷಯಗಳಲ್ಲಿ ಪರಿಣತಿ ಪಡೆದ ಭಾರತದ ಏಕೈಕ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಒಬ್ಬರೆ. ಹೀಗಾಗಿ ಅಂಬೇಡ್ಕರ್ ಅವರೊಬ್ಬ ವಿಶಿಷ್ಟ ವ್ಯಕ್ತಿತ್ವದ ಮೇರು ವ್ಯಕ್ತಿಯಾಗಿದ್ದಾರೆ’ ಎಂದು ಉಪನ್ಯಾಸಕ ಅರವಿಂದ ವಡ್ಡರ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿ ಇವರುಗಳ ಸಹಯೋಗದಲ್ಲಿ ಮಂಗಳವಾರ ನಡೆದ ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ, ದೇಶದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ 119ನೇ ಜಯಂತೋತ್ಸವದಲ್ಲಿ ಅವರು ಉಪನ್ಯಾಸ ನೀಡಿದರು.

‘ಅಂಬೇಡ್ಕರರು ಬರೋಡಾ ಮಹಾರಾಜರ ಸಹಾಯದಿಂದ ಉನ್ನತ ಶಿಕ್ಷಣ ಪಡೆಯುವುದರ ಜೊತೆಗೆ ವಿದೇಶದಲ್ಲಿ ಪ್ರಥಮ ಪಿ.ಹೆಚ್.ಡಿ ಪಡೆದ ಭಾರತೀಯರಾಗಿದ್ದಾರೆ. ಅವರು ದೇಶದಲ್ಲಿದ್ದ ಅಜ್ಞಾನ, ಮೂಢನಂಬಿಕೆ, ಜಾತೀಯತೆ, ಮೇಲು-ಕೀಳು ಹತ್ತಾರು ಪೈಶಾಚಿಕ ಕೃತ್ಯಗಳಿಂದ ದೇಶದ ಮೂಲಕ ನಿವಾಸಿಗಳಾದ ಶ್ರಮ ಸಂಸ್ಕೃತಿಯ ವಾರಸುದಾರರ ಬದುಕು, ಭವಿಷ್ಯದ ಅಂಧಕಾರ ದೂರ ಮಾಡಿ ಸಮಾನತೆ ಸಾರಿದ ಮಹಾನ್ ನಾಯಕರಾಗಿದ್ದಾರೆ’ ಎಂದರು.

ಉಪನ್ಯಾಸಕ ಮರಿಯಪ್ಪ ಎಚ್, ಡಾ.ಬಾಬು ಜಗಜೀವನರಾಮ್ ಅವರ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯ್ತಿ ಇಒ ಚಂದ್ರಶೇಖರ ಕಂದಕೂರ ವಹಿಸಿದ್ದರು.

ಪಿ.ಎಸ್.ಐ ಪ್ರಕಾಶ್ ಡಿ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಶರಣಪ್ಪ ಬೆಟಗೇರಿ, ಲೋಕೋಪಯೋಗಿ ಇಲಾಖೆಯ, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಅರೋಗ್ಯ ಇಲಾಖೆಯ ಕೆ.ಎ.ಹಾದಿಮನಿ, ಉಪ ನೋಂದಣಾಧಿಕಾರಿ ವಿರುಪಾಕ್ಷಯ್ಯ ಚೌಕಿಮಠ, ಉಪ ಖಜಾನೆ ಅಧಿಕಾರಿ ಅಮರೇಶ ಹಾದಿಮನಿ, ಸಮಾಜ ಕಲ್ಯಾಣ ಇಲಾಖೆಯ ಗೀತಾ ಆಲೂರ, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ವಿವಿಧ ಸಮುದಾಯಗಳ ಮುಖಂಡರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-23-940818966

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.