ಮುಂಡರಗಿ: ‘ಬುದ್ಧ, ಬಸವ, ಅಂಬೇಡ್ಕರ್ ಅವರು ಸಮಾಜದಲ್ಲಿ ಮನೆ ಮಾಡಿದ್ದ ಜಾತಿ ಪದ್ಧತಿ ನಿರ್ಮೂಲನೆಗೆ ಶ್ರಮಿಸಿದ ಮಹಾನ್ ನಾಯಕರಾಗಿದ್ದು, ಸಮಾನತೆಯ ಜೊತೆಗೆ ಅವರು ಪ್ರತಿಪಾದಿಸಿದ ತತ್ವಾದರ್ಶಗಳನ್ನು ನಾವೆಲ್ಲ ಆಚರಣೆಗೆ ತರಬೇಕು’ ಎಂದು ತಹಶೀಲ್ದಾರ್ ಎರ್ರಿಸ್ವಾಮಿ.ಪಿ.ಎಸ್. ಹೇಳಿದರು.

ತಾಲ್ಲೂಕು ಆಡಳಿತವು ಸೋಮವಾರ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತಿಯಲ್ಲಿ ಅವರು ಮಾತನಾಡಿದರು.

ಹಿಂದೆ ಮೇಲು, ಕೀಳುಗಳೆಂಬ ಅನಿಷ್ಟ ಪದ್ಧತಿಯು ನಮ್ಮ ಸಮಾಜವನ್ನು ನಾಶ ಮಾಡುತ್ತಿತ್ತು. ಬಸವಾದಿ ಶರಣರು ಮಹಾಮನೆ ಹಾಗೂ ಅನುಭವ ಮಂಟಪಗಳ ಮೂಲಕ ಎಲ್ಲರಿಗೂ ಸಮಾನ ಸ್ಥಾನಮಾನ ನೀಡಿದರು. ಆ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದರು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಮಾತನಾಡಿ, ಎಲ್ಲರನ್ನೂ ಒಳಗೊಳ್ಳುವ ಸಮಾಜದಲ್ಲಿ ಸದಾ ಶಾಂತಿ ತುಂಬಿರುತ್ತದೆ. ಈ ಸತ್ಯವನ್ನು ಮನಗಂಡಿದ್ದ ಬಸವಾದಿ ಶರಣರು ಸಮಾಜದಲ್ಲಿ ಸಮಾನತೆ ಮೂಡಿಸಲು ಶ್ರಮಿಸಿದರು. ಅವರು ಸಮಾಜದ ದಾರಿದೀಪಗಳಾಗಿದ್ದಾರೆ ಎಂದು ತಿಳಿಸಿದರು.

ಮುಖಂಡರಾದ ಪ್ರಹ್ಲಾದ ಹೊಸಮನಿ, ನಾಗರಾಜ ಹೊಂಬಳಗಟ್ಟಿ, ರಾಜಾಭಕ್ಷಿ ಬೆಟಗೇರಿ, ವಿ.ಎಸ್.ಗಟ್ಟಿ, ಚಂದ್ರಶೇಖರ ಪೂಜಾರ, ಅಶ್ವಿನಿ ಗೌಡರ, ರವಿ ಪಾಟೀಲ, ನಬಿಸಾಬ ಕೆಲೂರ ಮತ್ತಿತರರು ಮಾತನಾಡಿದರು. ಉಪತಹಶೀಲ್ದಾರ್ ಸಿ.ಕೆ.ಬಳೂಟಗಿ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ರಾಮಣ್ಣ ಕೋಳಿ, ಯಲ್ಲಪ್ಪ ಹೊಂಬಳಗಟ್ಡಿ, ದ್ರುವಕುಮಾರ ಹೂಗಾರ, ನಿಂಗಪ್ಪ ಭಂಡಾರಿ, ಮಲ್ಲೇಶ ಹರಿಜನ, ಗೌರಿಶಂಕರ ಸಜ್ಜನರ, ಐ.ಎಸ್.ದೊಡ್ಡಮನಿ, ಶ್ರೀಕಾಂತ ತಳವಾರ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-23-1038334242

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.