ನವಗ್ರಾಮಕ್ಕೆ ಬೇಕಿದೆ ಬಸ್ ಸೌಲಭ್ಯ
ನವಗ್ರಾಮ ಹಾಗೂ ಹಳೆಗ್ರಾಮಗಳ ನಡುವೆ ಒಂದು ಕಿ.ಮೀ ಅಂತರವಿದ್ದು, ಎರಡೂ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ರಾಜ್ಯ ರಸ್ತೆ ಸಾರಿಗೆಯ ಬಸ್‌ಗಳು ಕೇವಲ ಹಳೆಬಿದರಳ್ಳಿ ಗ್ರಾಮಕ್ಕೆ ಮಾತ್ರ ಬರುತ್ತಿವೆ. ನವಗ್ರಾಮದಿಂದ ಮುಂಡರಗಿ ಹಾಗೂ ಮತ್ತಿತರ ಪಟ್ಟಣಗಳಿಗೆ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳು ನಿತ್ಯ ನಡೆದುಕೊಂಡು ಹಳೆಬಿದರಳ್ಳಿ ಗ್ರಾಮಕ್ಕೆ ಬರಬೇಕಾಗಿದೆ. ಸಂಜೆ ಬಸ್ ತಡವಾಗಿ ಬಂದರೆ ವಿದ್ಯಾರ್ಥಿನಿಯರು ಭಯದಿಂದ ನವಗ್ರಾಮ ತಲುಪಬೇಕಾಗಿದೆ. ನವಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಬೇಕು ಎಂದು ಪಿಡಿಒ ಅವರು ಹಲವು ಸಭೆಗಳಲ್ಲಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದಾರೆ. ಆದರೂ ಬಸ್ ಸಮಸ್ಯೆ ನಿವಾರಣೆಯಾಗಿಲ್ಲ.