ಮುಂಡರಗಿ: 'ಬಿಜೆಪಿಯು ಶಿಸ್ತಿನ ಪಕ್ಷವಾಗಿದ್ದು, ಶಿಸ್ತು ಪಕ್ಷದ ಮೊದಲ ಸಿದ್ಧಾಂತವಾಗಿದೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ಮೊದಲು ಶಿಸ್ತು ಹಾಗೂ ಸಮಯಕ್ಕೆ ಗೌರವ ನೀಡಬೇಕು' ಎಂದು ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನಿರ್ಮಲಾ ಕೊಳ್ಳಿ ತಿಳಿಸಿದರು.

ತಾಲ್ಲೂಕಿನ ಡಂಬಳ ಹೋಬಳಿಯ ಪೇಠಾಲೂರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಂಡಿತ ದೀನದಯಾಳ ಉಪಾಧ್ಯಾಯ ಅವರ ಪ್ರಶಿಕ್ಷಣ ಮಹಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ತರಬೇತಿಯ ವಿಷಯವನ್ನು ಪ್ರತಿಯೊ ಬ್ಬರು ಮನದಟ್ಟು ಮಾಡಿಕೊಳ್ಳಬೇಕು. ಪಕ್ಷದ ಸಂಘಟನಾತ್ಮಕ ದೃಷ್ಠಿಯಿಂದ ಕಾರ್ಯಕರ್ತರಿಗೆ ಚೈತನ್ಯ ಮೂಡಿಸಲು ಪ್ರಶಿಕ್ಷಣವನ್ನು ಪಕ್ಷದ ಎಲ್ಲಾ ಹಂತದ ಕಾರ್ಯಕರ್ತರಿಗೆ ನೀಡಲಾಗುತ್ತದೆ. ಪ್ರಶಿಕ್ಷಣವು ಕಾರ್ಯಕರ್ತರಿಗೆ ದಾರಿ ದೀಪವಾಗಿದ್ದು, ಎಲ್ಲರೂ ಪ್ರಶಿಕ್ಷಣದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು. ಡಂಬಳ ಮಂಡಳದ ಬಿಜೆಪಿ ಅಧ್ಯಕ್ಷ ಅಂದಪ್ಪ ಹಾರೂಗೇರಿ ಮಾತನಾಡಿ, ಭಾರತೀಯ ಜನತಾ ಪಕ್ಷವು ರಾಷ್ಟ್ರ ಮೊದಲು ಎಂಬ ಧೈಯ ದೊಂದಿಗೆ ಸ್ಥಾಪಿತಗೊಂಡಿರುವ ಏಕೈಕ ರಾಜಕೀಯ ಪಕ್ಷವಾಗಿದ್ದು, ದೇಶ ಸೇವೆಗೆ ಇಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ಬಿಜೆಪಿಯು ರಾಷ್ಟ್ರೀಯ ಹಿತ ಚಿಂತನೆ ಹಾಗೂ ಜನ ಸೇವೆಯಲ್ಲಿ ನಂಬಿಕೆ ಯಿಟ್ಟಿದೆ. ಇಲ್ಲಿ ಕಾರ್ಯಕರ್ತರೆ ಪಕ್ಷದ ನಿಜವಾದ ಶಕ್ತಿಯಾಗಿದ್ದಾರೆ ಎಂದು ತಿಳಿಸಿದರು. ನಾಗರಾಜ ಕುಲಕರ್ಣಿ, ಫಕ್ಕನಗೌಡ ರ, ವೆಂಕನಗೌಡ ಪಾಟೀಲ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಶ್ರೀದೇವಿ ಯಾವಗಲ್, ರತ್ನಮ್ಮ ತೋಟಪ್ಪನವರ, ಸೋಮಶೇಖರ ಹಿರೇಮಠ, ಉಮೇಶ ಮಲ್ಲಾಪೂರ, ರೇಣುಕಾ ಚಿಕ್ಕರಡ್ಡಿ, ಚನ್ನವೀರಪ್ಪ ಚಿನ್ನೂರ, ರಾಜೇಶ ಅರಕಾಲ, ಪಂಚಾಕ್ಷರಯ್ಯ ಹರ್ಲಾಪೂರಮಠ, ಪ್ರಭು ಕೊರ್ಲಹಳ್ಳಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-23-159478809

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.