ಮುಂಡರಗಿ: 'ಸಮಾಜದ ಏಕತೆ ಮತ್ತು ಪ್ರಗತಿಗಾಗಿ ಶ್ರಮಿಸುವುದು ಪ್ರತಿಯೊಬ್ಬರ ಪ್ರಮುಖ ಕರ್ತವ್ಯವಾಗಬೇಕು. ಸಮಾಜದ ಪ್ರತಿಯೊಬ್ಬರೂ ಸಂಘಟನೆಯಲ್ಲಿ ತೊಡಗಿದಾಗ ಮಾತ್ರ ಸಮಾಜ ಬಲಿಷ್ಠವಾಗುತ್ತದೆ' ಎಂದು ಬಿಜೆಪಿ ಮುಂಡರಗಿ ಮಂಡಲದ ನೂತನ ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ ತಿಳಿಸಿದರು.

ತಾಲ್ಲೂಕು ವೀರಮಾಹೇಶ್ವರ ಜಂಗಮಾಭಿವೃದ್ಧಿ ಸಂಘದ ಕಾರ್ಯಕರ್ತರು ಇಲ್ಲಿನ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಸಮಾಜದ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತಗೆದುಕೊಂಡು ಸಮಾಜದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಯುವಕರಿಗೆ ಮಾರ್ಗದರ್ಶನ, ಶಿಕ್ಷಣಕ್ಕೆ ಪ್ರೋತ್ಸಾಹ ಹಾಗೂ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ ಡಿ.ಸಿ.ಮಠದ ಮಾತನಾಡಿ, ಯುವಕರಾಗಿರುವ ಕುಮಾರಸ್ವಾಮಿ ಹಿರೇಮಠ ಅವರು ಮುಂಡರಗಿ ಮಂಡಲದ ಅಧ್ಯಕ್ಷರಾಗಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಅವರು ತಮ್ಮ ನಾಯಕತ್ವದ ಮೂಲಕ ಸಮಾಜದ ಏಕತೆ, ಸಂಘಟಿತ ಶಕ್ತಿ ಮತ್ತು ಅಭಿವೃದ್ಧಿಗೆ ಹೊಸ ದಿಕ್ಕು ತೋರಲಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಪದವಿಗಳು ದೊರೆಯಲಿ ಎಂದು ಹಾರೈಸಿದರು.

ಯುವ ಮುಖಂಡ ಅಮರೇಶ ಹಿರೇಮಠ ಮಾತನಾಡಿ, ವೀರಮಾಹೇಶ್ವರ ಜಂಗಮಾಭಿವೃದ್ಧಿ ಸಮಾಜದ ಸಂಘಟಿತ ಶಕ್ತಿಯು ಸಮಾಜದ ಪ್ರಗತಿಯ ಬೆನ್ನೆಲುಬಾಗಬೇಕು. ಯುವಕರು ಬಿಡುವಿನ ಸಮಯದಲ್ಲಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬಸಯ್ಯ ಗಿಂಡಿಮಠ ಅದ್ಯಕ್ಷತೆ ವಹಿಸಿಕೊಂಡಿದ್ದರು. ವಿ.ಜೆ. ಹಿರೇಮಠ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.

ಆರ್.ಬಿ. ಡಂಬಳಮಠ, ಚೆನ್ನವೀರಯ್ಯ ಹಿರೇಮಠ, ಯು.ಸಿ.ಹಂಪಿಮಠ, ವಿ.ಆರ್.ಹಿರೇಮಠ, ಎಫ್.ಆರ್.ಹಿರೇಮಠ, ಬಸಯ್ಯ ಅಮರಗೋಳಹಿರೇಮಠ, ವೀರೇಶ ಶಾಸ್ತ್ರಿಮಠ, ಮಲ್ಲಯ್ಯ ವಿರುಪಾಪುರಮಠ, ಹಾಲಯ್ಯ ಹಿರೇಮಠ, ವಿನಯಕುಮಾರ ಗಂಧದ, ಪ್ರಶಾಂತ ಹಿರೇಮಠ, ಕೊಟ್ರೇಶ ನವಲಿಹಿರೇಮಠ, ಚಂದ್ರು ತಂಬ್ರಳ್ಳಿಮಠ, ಶಿವು ಹಿರೇಮಠ, ಶಿವು ಕುಲಕರ್ಣಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-23-450499804

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.