ಮುಂಡರಗಿ: ‘ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಸಂದರ್ಭದಲ್ಲಿ ಮುಂಡರಗಿಯನ್ನು ಸ್ವತಂತ್ರ ಮತಕ್ಷೇತ್ರವನ್ನಾಗಿ ಉಳಿಸಬೇಕು’ ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ಒತ್ತಾಯಿಸಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2002ರಲ್ಲಿ ಕೇಂದ್ರ ಸರ್ಕಾರ ಕೈಗೊಂಡಿದ್ದ ಕ್ಷೇತ್ರ ಪುನರ್ ವಿಂಗಡಣೆ ಸಮಯದಲ್ಲಿ ಮುಂಡರಗಿ ತಾಲ್ಲೂಕಿಗೆ ಅನ್ಯಾಯವಾಗಿದ್ದು, ಈಗ ಅದನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

‘ಆಯಾ ತಾಲ್ಲೂಕುಗಳ ಭೌಗೋಳಿಕತೆ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳನ್ನು ಪುನರ್ ವಿಂಗಡಣೆ ಮಾಡಲಾಗುತ್ತದೆ. 2002ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಸಮಯದಲ್ಲಿ ಗದಗ ಜಿಲ್ಲೆಯಲ್ಲಿ ಐದು ತಾಲ್ಲೂಕುಗಳಿದ್ದವು. ಮುಂಡರಗಿಯ ಭೌಗೋಳಿಕ ವಿಸ್ತೀರ್ಣವು 891 ಚ.ಕಿ.ಮೀ ಹಾಗೂ 2011ರ ಜನಗಣತಿಯ ಪ್ರಕಾರ ತಾಲ್ಲೂಕಿನ ಜನಸಂಖ್ಯೆ 1,31,897 ಆಗಿತ್ತು’ ಎಂದರು.

‘ಆ ಸಂದರ್ಭದಲ್ಲಿ ನರಗುಂದವು ಜಿಲ್ಲೆಯ ಅತಿ ಚಿಕ್ಕ ತಾಲ್ಲೂಕು ಆಗಿತ್ತು. ಅದರ ಭೌಗೋಳಿಕ ವಿಸ್ತೀರ್ಣ 436 ಚ.ಕಿ.ಮೀ ಹಾಗೂ 2011ರ ಜನಗಣತಿಯ ಪ್ರಕಾರ ಜನಸಂಖ್ಯೆ 1,00,623 ಇತ್ತು. ವಾಸ್ತವವಾಗಿ, ಆಗ ಕೈಗೊಂಡಿದ್ದ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ನರಗುಂದ ವಿಧಾನಸಭಾ ಕ್ಷೇತ್ರವನ್ನು ಅಕ್ಕಪಕ್ಕದ ವಿಧಾನಸಭಾ ಕ್ಷೇತ್ರಗಳಿಗೆ ಹಂಚಬೇಕಿತ್ತು. ಆದರೆ, ಅದೆಲ್ಲವನ್ನು ಬದಿಗೊತ್ತಿ ಮುಂಡರಗಿ ತಾಲ್ಲೂಕನ್ನು ಒಡೆದು ಕ್ಷೇತ್ರದ ಅಸ್ತಿತ್ವವನ್ನು ಹಾಳು ಮಾಡಲಾಯಿತು’ ಎಂದು ದೂರಿದರು.

‘ಮುಂಡರಗಿ ತಾಲ್ಲೂಕಿನ ಡಂಬಳ ಹೋಬಳಿಯನ್ನು ರೋಣ ವಿಧಾನಸಭಾ ಕ್ಷೇತ್ರಕ್ಕೂ ಹಾಗೂ ಮುಂಡರಗಿ ಹೋಬಳಿಯನ್ನು ಶಿರಹಟ್ಟಿ ವಿಧಾನಸಭಾ ಕ್ಷೇತ್ರಕ್ಕೂ ಹಂಚಿಕೆ ಮಾಡಲಾಯಿತು. ಅಂದಿನಿಂದ ಮುಂಡರಗಿ ತಾಲ್ಲೂಕು ನಿರ್ಲಕ್ಷ್ಯಕ್ಕೆ ಒಳಗಾಯಿತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲ ಪಕ್ಷಗಳ ಮುಖಂಡರು, ಹಿರಿಯರು, ಸಂಘ–ಸಂಸ್ಥೆಗಳ ಸರ್ವ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಚಿಂತಕರು, ಬುದ್ದಿಜೀವಿಗಳು ಒಂದಾಗಿ ಈ ಕುರಿತು ಧ್ವನಿ ಎತ್ತಬೇಕು. ಇಲ್ಲದಿದ್ದರೆ ಮುಂಡರಗಿ ತಾಲ್ಲೂಕು ಸ್ವತಂತ್ರವಾಗದೆ, ಅನಾಥವಾಗುತ್ತದೆ’ ಎಂದು ಎಚ್ಚರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-23-655016259

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.