ಮುಂಡರಗಿ: ‘ಮಣ್ಣು, ರೈತನ ಜೀವಾಳವಾಗಿದೆ. ಅದರ ಆರೈಕೆ ಹಾಗೂ ತಪಾಸಣೆ ಕುರಿತು ರೈತರು ಮೌನ ವಹಿಸಿರುವುದು ಭೂಮಿ ತಾಯಿಗೆ ಮಾಡಿದ ಅವಮಾನವಾಗಿದೆ. ರೈತರು ನಿಯಮಿತವಾಗಿ ಮಣ್ಣಿನ ತಪಾಸಣೆ ಮಾಡಿಸಬೇಕು’ ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಪ್ರಾಣೇಶ ಹೇಳಿದರು.

ತಾಲ್ಲೂಕಿನ ತಾಲ್ಲೂಕಿನ ಡ.ಸ. ರಾಮೇನಹಳ್ಳಿ ಗ್ರಾಮದಲ್ಲಿ ಡಂಬಳದ ಚಂದನವನ ರೈತ ಉತ್ಪಾದಕ ಕಂಪನಿ, ಕೃಷಿ ಇಲಾಖೆ ಮತ್ತು ಬೆಂಗಳೂರಿನ ಪ್ರೊ ನೇಚರ್ ಕೇಂದ್ರವು ಶನಿವಾರ ಹಮ್ಮಿಕೊಂಡಿದ್ದ ಮಣ್ಣು ಆರೋಗ್ಯ ತಪಾಸಣೆ ಅಭಿಯಾನದಲ್ಲಿ ಅವರು ಮಾತನಾಡಿದರು.

‘ಪ್ರಾಣಿ–ಪಕ್ಷಿ, ಗಿಡ–ಮರಗಳಿಗೆ ಜೀವಸತ್ವಗಳು ಎಷ್ಟು ಮುಖ್ಯವೋ, ಮಣ್ಣಿಗೂ ಜೀವಸತ್ವಗಳು ಅಷ್ಟೇ ಮುಖ್ಯ. ಮಣ್ಣಿನ ಆರೋಗ್ಯ ತಪಾಸಣೆ ನಡೆಸಿದರೆ, ಯಾವ ಪೋಷಕಾಂಶಗಳಿವೆ, ಯಾವುದರ ಕೊರತೆ ಇದೆ ಎನ್ನುವುದು ತಿಳಿಯುತ್ತದೆ. ಅದರ ಆಧಾರದ ಮೇಲೆ ಮಣ್ಣಿಗೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಕೃಷಿ ಇಲಾಖೆಯ ಆತ್ಮ ವಿಭಾಗದ ಅಕ್ಕಮಹಾದೇವಿ ಶೆಲವಡಿ ಅವರು ಮಣ್ಣು ಪರೀಕ್ಷೆ ಹಾಗೂ ಮಣ್ಣು ಮಾದರಿ ತೆಗೆಯುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ಚಂದನವನ ರೈತ ಉತ್ಪಾದಕ ಕಂಪನಿಯು, ಸಾವಯವ ಕೃಷಿಯ ಆಸಕ್ತಿ ಇರುವ 200 ರೈತರ ಜಮೀನಿನ ಮಣ್ಣನ್ನು ಉಚಿತವಾಗಿ ಪರೀಕ್ಷೆ ಮಾಡಿಸಿತು.

ಬಸವರಾಜ ಹಮ್ಮಿಗಿ, ತಿಮ್ಮಣ್ಣ ರಾಟಿ, ಬಸವರಾಜ ಪ್ಯಾಟಿ, ಮುತ್ತಣ್ಣ ಕರಿಗಾರ, ಹನುಮಂತಪ್ಪ ಆನಿ, ಸೋಮಣ್ಣ ಸಂದಿಗೋಡ, ಶಂಭಣ್ಣ ಸಂದಿಗೋಡ, ಮಲ್ಲಪ್ಪ ಗೋಲಪ್ಪನವರ, ಶರಣಪ್ಪ ಬೆಟಗೇರಿ, ಶಿವಪ್ಪ ಹುಡೇದ, ಸುರೇಶ ಅಸೂಟಿ ಇದ್ದರು. ರಾಕೇಶಗೌಡ ಕದಾಂಪೂರ ನಿರೂಪಿಸಿದರು. ಬೀರಪ್ಪ ಬಚೇನಳ್ಳಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-23-1594996065

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.