ಮುಂಡರಗಿ: ಎಲ್ಲ ರಸಗೊಬ್ಬರಗಳ ಎಂ.ಆರ್.ಪಿ ದರದ ಮೇಲೆ ಮಾರಾಟಗಾರರಿಗೆ ಶೇ 8ರಷ್ಟು ಲಾಭಾಂಶ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ಕಾರ್ಯಕರ್ತರು ಸೋಮವಾರ ತಮ್ಮ ಮಳಿಗೆಗಳನ್ನು ಬಂದ್ ಮಾಡಿ ತಹಶೀಲ್ದಾರ್ ಹಾಗೂ ಕೃಷಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ಡಿ.ಎ.ಪಿ., ಯುರಿಯಾ ಹಾಗೂ ಮತ್ತಿತರ ರಸಗೊಬ್ಬರಗಳ ಜೊತೆಗೆ ಪೂರಕ ಉತ್ಪನ್ನಗಳ ಖರೀದಿಗೆ ರೈತರು ಹಿಂಜರಿಯುತ್ತಿದ್ದಾರೆ. ಹೀಗಾಗಿ ರಸಗೊಬ್ಬರಗಳ ಜೊತೆಗೆ ಅನ್ಯ ಉತ್ಪನ್ನಗಳ ಮಾರಾಟ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮೊದಲಾದವುಗಳ ಕಳಪೆ ಶಾಂಪಲ್ ಪೂರೈಸಿದಾಗ ಮಾರಾಟಗಾರರ ಮೇಲೆ ದೂರು ದಾಖಲಿಸಲಾಗುತ್ತದೆ. ಅದರ ಬದಲಿಗಿ ಕಳಪೆ ಸಾಮಗ್ರಿಗಳನ್ನು ಪೂರೈಸಿದ ಕಂಪನಿಗಳ ಮೇಲೆ ದೂರು ದಾಖಲಿಸಬೇಕು. ಮಾರಾಟಗಾರರನ್ನು ಸಾಕ್ಷಿದಾರರೆಂದು ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಸರ್ಕಾರ ರಸಗೊಬ್ಬರ ಪೂರೈಕೆಯ ಮೇಲೆ ನಿಯಂತ್ರಣ ಹೇರಿದ್ದು, ರೈತರ ಅಗತ್ಯಕ್ಕೆ ತಕ್ಕಷ್ಟು ರಸಗೊಬ್ಬರ ಪೂರೈಸಬೇಕು. ಅಧಿಕಾರಿಗಳು ಕೃಷಿ ಪರಿಕರ ಮಳಿಗೆಗಳ ತಪಾಸಣೆಗೆ ಬಂದಾಗ ಅದನ್ನು ‘ದಾಳಿ’ ಎಂದು ಬಿಂಬಿಸದೆ ‘ಪರಿಶೀಲನೆ’ ಎಂದು ಪರಿಭಾವಿಸಬೇಕು ಎಂದು ಒತ್ತಾಯಿಸಿದರು.

ಈರಣ್ಣ ತಂಟ್ರಿ, ಸುರೇಶ ಮಾಳಗಿಮನಿ, ಅಜ್ಜಪ್ಪ ಲಿಂಬಿಕಾಯಿ, ಬಸಲಿಂಗಪ್ಪ ಕೊರ್ಲಹಳ್ಳಿ, ಮಹೇಶ ಎಮ್ಮಿಯವರ, ಶರಣಪ್ಪ ಕುರಿ, ಎಂ.ಎಚ್.ದೊಡ್ಡಮನಿ, ಮುತ್ತಪ್ಪ ಬೆಟಗೇರಿ, ರಾಘವೇಂದ್ರ ಕೊಂಬಳಿ, ರುದ್ರೇಶ ಹುಬ್ಬಳ್ಳಿ, ರಾಮು ಕಾಂಬಳೆ, ನಾಗರಾಜ ಹೆಗ್ಡಾಳ, ಅಶೋಕ ತಂಟ್ರಿ, ನಿಂಗಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-23-1956187756

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.