ಮುಂಡರಗಿ: ಭಾರಿ ಮಳೆ, ಗಾಳಿ ಬೀಸಿದ ಪರಿಣಾಮ ಪಟ್ಟಣದ ಜಾಗೃತ ವೃತ್ತದಲ್ಲಿ ಖಾಸಗಿ ಕಂಪನಿಯು ಸ್ಥಾಪಿಸಿದ್ದ ಭಾರಿ ಗಾತ್ರದ ಮೊಬೈಲ್ ಟವರ್ ಧರೆಗುರುಳಿರುವ ಘಟನೆ ಸೋಮವಾರ ಸಂಜೆ ನಡೆದಿದೆ.

ಸಂಜೆ 5ಗಂಟೆಗೆ ಪಟ್ಟಣದಲ್ಲಿ ಭಾರಿ ಮಳೆ, ಗಾಳಿ ಆರಂಭವಾಯಿತು. ರಭಸದಿಂದ ಬೀಸಿದ ಭಾರಿ ಗಾಳಿಯ ಹೊಡೆತಕ್ಕೆ ಜಾಗೃತ ವೃತ್ತದ ಮೂರು ಅಂತಸ್ತಿನ ಕಟ್ಟಡದಲ್ಲಿ ಸ್ಥಾಪಿಸಿದ್ದ ಕಬ್ಬುಣದ ಭಾರಿ ಗಾತ್ರದ ಮೊಬೈಲ್ ಟವರ್ ಬುನಾದಿ ಸಮೇತ ಧರೆಗುರುಳಿದೆ.

ಟವರ್ ಬಿದ್ದ ರಭಸಕ್ಕೆ ವೃತ್ತದ ನಾಲ್ಕು ದಿಕ್ಕುಗಳಲ್ಲಿದ್ದ ಹಲವು ವಿದ್ಯುತ್ ಹಾಗೂ ಟೆಲಿಫೋನ್ ಕಂಬಗಳು, ಸಂಪೂರ್ಣವಾಗಿ ಧರೆಗುರುಳಿವೆ. ಅಕ್ಕಪಕ್ಕದ ಕೆಲವು ಅಂಗಡಿಗಳು ಜಖಂಗೊಂಡಿವೆ.

ಏಕಕಾಲದಲ್ಲಿಯೇ ಭಾರಿ ಗಾಳಿ ಬೀಸಿದ್ದರಿಂದ ಹಾಗೂ ರಭಸದಿಂದ ಮಳೆ ಸುರಿದದ್ದರಿಂದ ಜನ ಸಂಚಾರ ಸಂಪೂರ್ಣವಾಗಿ ಸ್ಥಬ್ಧಗೊಂಡಿತ್ತು. ಆ ಮೂಲಕ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದಂತಾಯಿತು.

ಜಾಗೃತ ವೃತ್ತದಲ್ಲಿ ನಾಲ್ಕು ಮುಖ್ಯ ರಸ್ತೆಗಳು ಸೇರುತ್ತಿದ್ದು, ವೃತ್ತವು ಸದಾ ಜನ ಜಂಗುಳಿಯಿಂದ ಕೂಡಿರುತ್ತದೆ. ಮೊಬೈಲ್ ಟವರ್ ಧರೆಗುರುಳಿದ್ದರಿಂದ ಸಂಚಾರವು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು.

ಘಟನಾ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಸಿದ್ಧರಾಜು ಕಟ್ಟಿಮನಿ, ಹೆಸ್ಕಾಂ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಶೀಘ್ರ ಧರೆಗುರುಳಿದ ಟವರ್ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಪಟ್ಟಣದ ವಿವಿಧ ಭಾಗಗಳಲ್ಲಿ ಗಿಡ, ಮರಗಳು ಧರೆಗುರುಳಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-23-402072302

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.