ಮುಂಡರಗಿ: ‘ಹಿಂದೂ ಧರ್ಮವು ಸರ್ವರನ್ನು ಸಮಾನವಾಗಿ ಕಾಣುತ್ತದೆ. ಅದನ್ನು ಸಹಿಸದ ಕೆಲವರು ಜನರಲ್ಲಿ ಗೊಂದಲ ಸೃಷ್ಟಿಸಿ ಹಿಂದೂ ಧರ್ಮವನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ಸಮಾನತೆ ಹಾಗೂ ಸಾಮರಸ್ಯ ಮೂಡಿಸುವುದು ಹಿಂದೂ ಸಮಾವೇಶದ ಮೂಲ ಉದ್ದೇಶವಾಗಿವೆ’ ಎಂದು ವಿಜಯಪುರದ ಕೇಶರಟ್ಟಿ ಸೋಮಲಿಂಗ ಸ್ವಾಮೀಜಿ ಹೇಳಿದರು.

ಗದಗದಲ್ಲಿ ಮೇ 31ರಂದು ನಡೆಯುವಬಸವಾದಿ ಶಿವಶರಣರ ಬೃಹತ್ ಹಿಂದೂಸಮಾವೇಶದ ಕರಪತ್ರಗಳನ್ನು ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದರು.

‘ಬಸವಣ್ಣನವರ ಸಮಾನತೆಯ ಆಶಯದ ತಳಹದಿಯ ಮೇಲೆ ಹಿಂದೂ ಸಮಾವೇಶ ಕೈಗೊಳ್ಳಲಾಗಿದ್ದು, ಧರ್ಮವನ್ನು ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದೆ. ಸಮಾವೇಶದ ಆಶಯವನ್ನು ಅರ್ಥ ಮಾಡಿಕೊಳ್ಳದೆ ಕೆಲವರು ವಿನಾಕಾರಣ ವಿರೋಧಿಸುತ್ತಿರುವುದು ಸಮಂಜಸವಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಾಧು, ಸಂತರು, ಶರಣರು, ಮಹಾತ್ಮರು ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿದ್ದು, ಧರ್ಮವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನೇರಿಯ ಅದೃಷ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಹಿಂದೂ ಸಮಾವೇಶ ಏರ್ಪಡಿಸಲಾಗಿದೆ’ ಎಂದರು.

‘ಸಮಾವೇಶದಲ್ಲಿ ನಾಡಿನ ವಿವಿಧ ಭಾಗಗಳ 300ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಳ್ಳುತ್ತಿದ್ದಾರೆ. ಸಮಾವೇಶದಲ್ಲಿ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.

ಯುವ ಮುಖಂಡ ರವಿಕಾಂತ ಅಂಗಡಿ ಮಾತನಾಡಿ, ‘ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿದ್ದು, ಅದು ಬಹುಸಂಸ್ಕೃತಿಯ ನಾಡಾಗಿದೆ. ಹೀಗಾಗಿ ಯಾವ ಭೇದ ಭಾವ ಇಲ್ಲದೆ ಹಿಂದೂ ಧರ್ಮದ ಎಲ್ಲ ಸಮು ದಾಯದ ಸಹಕಾರದೊಂದಿಗೆ ಸಮಾವೇಶ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

ಮುಖಂಡರಾದ ಸುಭಾಷ ಗುಡಿಮನಿ, ಬೆನಕರಾಜ ಪೂಜಾರ, ವಸಂತ ನಾಯಕ, ಪರಮೇಶ ನಾಯಕ, ಫಕ್ಕೀರಪ್ಪ ನಾಯಕ, ವೆಂಕಟೇಶ ಗುಡಿಮನಿ, ಸುರೇಶ ಲಮಾಣಿ, ಕುರಪ್ಪ ನಾಯಕ, ಬಸವರಾಜ ಕರಿಯವರ, ಚನ್ನಪ್ಪ ಮುರುಡಿ, ತುಕಾರಾಮ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-23-1577703496

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.