ಮುಂಡರಗಿ: ಆಶ್ರಯ ನಿವೇಶನ ವಿತರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ವಿವಿಧ ಅಲೆಮಾರಿ ಸಮುದಾಯಗಳ ಜನರು ಅಖಿಲ ಕರ್ನಾಟಕ ಕೊರಚ ಮಹಾ ಸಂಘದ ಮಹಿಳಾ ಘಟಕದ ಕಾರ್ಯಕರ್ತೆಯರ ನೇತೃತ್ವದಲ್ಲಿ ಮಂಗಳವಾರ ತಹಶೀಲ್ದಾರ್ ಎರ್ರಿಸ್ವಾಮಿ.ಪಿ.ಎಸ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮುಂಡರಗಿ ಹಾಗೂ ಡಂಬಳ ಹೋಬಳಿ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ನೂರಾರು ಅಲೆಮಾರಿ ಬಡ ಹಾಗೂ ನಿರ್ಗತಿಕ ಬಡ ಕುಟುಂಬಗಳು ವಾಸಿಸುತ್ತಿವೆ. ಸಣ್ಣ, ಪುಟ್ಟ ಗುಡಿಲು ಹಾಗೂ ತಗಡಿನ ಶಡ್ಗಳಲ್ಲಿ ಇದ್ದಾರೆ. ಸರ್ಕಾರ ತಕ್ಷಣ ಅವರಿಗೆ ಆಶ್ರಯ ಮನೆಗಳನ್ನು ನೀಡಬೇಕು ಎಂದು ಮಹಿಳೆಯರು ಆಗ್ರಹಿಸಿದರು.

ಕೊರಚ ಸಮುದಾಯಕ್ಕೆ ಆಶ್ರಯ ಮನೆಗಳನ್ನು ನಿರ್ಮಿಸಿ ಕೊಡಬೇಕು ಎಂದು ಮಾ2ರಂದು ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿಯನ್ನು ಪುರಸ್ಕರಿಸಿರುವ ನಿಗಮ ಅಲೆಮಾರಿಗಳಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಮಾ26ರಂದು ಆದೇಶ ಹೊರಡಿಸಿದೆ. ನಿಗಮದ ಆದೇಶದನ್ವಯ ತಕ್ಷಣ ನಮಗೆಲ್ಲ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.

ಅಲೆಮಾರಿ ಗಳಾಗಿರುವುದರಿಂದ ನಮಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಚೀಟಿ ಮೊದಲಾದವುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನಮಗೆ ಎಲ್ಲ ರೀತಿಯ ಗುರುತಿನ ಚೀಟಿಗಳನ್ನು ಮಾಡಿಸಿಕೊಡಬೇಕು. ಆ ಮೂಲಕ ಎಲ್ಲ ನಾಗರಿಕರಿಗೆ ದೊರೆಯುವ ಎಲ್ಲ ಸೌಲಭ್ಯಗಳು ನಮಗೂ ದೊರೆಯುವಂತಾಗಬೇಕು ಎಂದು ಮನವಿ ಮಾಡಲು.

ಈ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಎರ್ರಿಸ್ವಾಮಿ.ಪಿ.ಎಸ್. ಭರವಸೆ ನೀಡಿದರು.

ಮುಖಂಡರಾದ ದೇವಪ್ಪ ಇಟಗಿ, ಗಂಗಾಧರ ಕೊರಚರ, ಎಲ್ಲಪ್ಪ ಕೊರಚರ, ಸಂಗಪ್ಪ ಕೊರಚರ, ಹನುಮಂತ ಕೊರಚರ, ರಾಮಪ್ಪ ಕೊರಚರ, ರಾಮಣ್ಣ ನರೇಗಲ್ಲ, ರಾಮಪ್ಪ ಮಾದಗುಂಡ, ಲಕ್ಷ್ಮಿ ಕೊರಚರ, ಮಂಜವ್ವ ಕೊರಚರ, ದ್ಯಾಮವ್ವ ಕೊರಚರ, ಮಲ್ಲವ್ವ ಕೊರಚರ, ಶಾಂತವ್ವ ಕೊರಚರ, ಹುಸೇನವ್ವ ಸಾಳೇರ ಉಪಸ್ಥಿತರಿದ್ದರು.

ಮುಳಗುಂದ: ಅರ್ಹ ಫಲಾನುಭವಿಗಳಿಗೆ ಆಶ್ರಯ ನಿವೇಶನ ಹಂಚಿಕೆ ವಿಳಂಬ ಧೋರಣೆ ಖಂಡಿಸಿ, ನಿವೇಶನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ನಿವೇಶನ ರಹಿತರು ಸ್ಥಳಿಯ ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಪಟ್ಟಣದ ವ್ಯಾಪ್ತಿಯಲ್ಲಿ 2012 ರಿಂದ ಈ ವರೆಗೂ ಆಶ್ರಯ ನಿವೇಶನ ಹಂಚಿಕೆ ಆಗಿಲ್ಲ, ನಿವೇಶನ ರಹಿತರಿಗಾಗಿ ಸರ್ಕಾರ ಈಗಾಗಲೇ ಭೂಮಿ ಖರೀದಿಸಿ ನಿವೇಶನ ವಿನ್ಯಾಸಗೊಳಿಸಿದೆ. ಆದರೆ ಈ ಹಿಂದೆ ಆಡಳಿತ ಮಂಡಳಿ ಆಯ್ಕೆ ಪಟ್ಟಿ ಅಂತಿಮಗೊಳಿಸಿತ್ತು. ಅದರಲ್ಲಿ ಅನರ್ಹರು ಇದ್ದರು ಎನ್ನುವ ಆರೋಪದ ಕಾರಣ ಆಯ್ಕೆ ಪಟ್ಟಿ ರದ್ದುಗೊಳಿಸಿ ಮತ್ತೊಮ್ಮೆ ಅರ್ಹರನ್ನ ಗುರುತಿಸುವ ಕಾರ್ಯ ಮಾಡಲಾಗಿದೆ. ಆದರೂ ಕಳೆದ 6 ತಿಂಗಳಿಂದ ನಿವೇಶನ ಹಂಚಿಕೆ ಆಗುತ್ತಿಲ್ಲ ಎಂದು ಎಂ.ಎಸ್.ಕಣವಿ ಆರೋಪಿಸಿದರು.

ಆಶ್ರಯ ಸಮಿತಿ ಹಾಗೂ ಅಧಿಕಾರಿಗಳ ನಡುವೆ ನಾವು ನಿವೇಶನ ರಹಿತರಾಗಿಯೇ ಉಳಿಯುವಂತಾಗಿದೆ. ನಿವೇಶನಕ್ಕಾಗಿ ನಿತ್ಯ ಪಂಚಾಯಿತಿಗೆ ಅಲೆಯುವ ಸ್ಥಿತಿ ಎದುರಾಗಿದೆ. ಮುಖ್ಯಾಧಿಕಾರಿ ಇಂದು, ನಾಳೆ ಎನ್ನುತ್ತಾ ಕಾಲಹರಣ ಮಾಡುತ್ತಿದ್ದಾರೆ. ಇವತ್ತು ಬಂದಿದ್ದೇವೆ ಆದರೆ ಮುಖ್ಯಾಧಿಕಾರಿ ಬೆಂಗಳೂರಿಗೆ ಹೋಗಿದ್ದಾರೆ ಎನ್ನುತಿದ್ದಾರೆ. ನಿವೇಶನಕ್ಕಾಗಿ 2012ರಿಂದ ಅನೇಕ ಭಾರಿ ಅರ್ಜಿ ಸಲ್ಲಿಸಿ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡಿದ್ದೇವೆ. ಬಾಡಿಗೆ ಮನೆಯಲ್ಲಿದ್ದೇವೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಕೊಡಲೇ ಆಶ್ರಯ ಸಮಿತಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಬೇಕು ಇಲ್ಲವಾದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಮಹಿಳೆಯರು ಎಚ್ಚರಿಕೆ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-23-1476079970

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.