ಮುಂಡರಗಿ: ‘ಪಟ್ಟಣದ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದಾ ಜನಪರ ಕಾರ್ಯಗಳನ್ನು ಮಾಡುತ್ತಿದ್ದ ಇಲ್ಲಿಯ ಪುರಸಭೆಯ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಅವರ ವರ್ಗಾವಣೆಯನ್ನು ಸರ್ಕಾರ ತಕ್ಷಣ ಹಿಂಪಡೆದು ಅವರನ್ನು ಪುನಃ ಇಲ್ಲಿಯ ಪುರಸಭೆಗೆ ನಿಯೋಜಿಸಬೇಕು’ ಎಂದು ಡಿಎಸ್ಎಸ್ ಮುಖಂಡ ಎಚ್.ಡಿ.ಪೂಜಾರ ಒತ್ತಾಯಿಸಿದರು.

ಅಂಬೇಡ್ಕರ್ ಅಭಿಮಾನಿ ಬಳಗ ಸೇರಿದಂತೆ ಪಟ್ಟಣದ ವಿವಿಧ ಪ್ರಗತಿಪರ ಸಂಘಟನೆಗಳು ಸೋಮವಾರ ಇಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಶಂಕರ ಹುಲ್ಲಮ್ಮನವರ ಅವರನ್ನು ಪುನಃ ಮುಂಡರಗಿ ಪುರಸಭೆಗೆ ನಿಯೋಜಿಸದಿದ್ದರೆ ಏ.15ರಂದು ಪಟ್ಟಣಕ್ಕೆ ಆಗಮಿಸುವ ವಿವಿಧ ಹಂತಗಳ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಕಪ್ಪುಬಟ್ಟೆ ಪ್ರದರ್ಶಿಸಲಾಗುವುದು ಎಂದು ಎಚ್ಚರಿಸಿದರು.

ಕಳೆದ ಎರಡು ವರ್ಷಗಳಿಂದ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶಂಕರ ಹುಲ್ಲಮ್ಮನವರ ಅವರು ಪಟ್ಟಣದ ಜನತೆಯ ಮೆಚ್ಚಿನ ಅಧಿಕಾರಿಯಾಗಿದ್ದರು. ಸದಾ ಜನರ ಮದ್ಯದಲ್ಲಿದ್ದುಕೊಂಡು ಜನರ ಕೆಲಸ, ಕಾರ್ಯಗಳನ್ನು ಸಕಾಲದಲ್ಲಿ ಮಾಡಿಕೊಡುತ್ತಿದ್ದರು. ಅವರನ್ನು ವಿನಾಕಾರಣ ವರ್ಗಾವಣೆ ಮಾಡಲಾಗಿದ್ದು, ಇದರಿಂದ ಪಟ್ಟಣದ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯ ಹಲವು ದಶಕಗಳಿಂದ ನನೆಗುದಿಗೆ ಬಿದ್ದಿತ್ತು. ಶಂಕರ ಹುಲ್ಲಮ್ಮನವರ ಅವರು ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಪುರಸಭೆಯ ಮುಂದೆ ಅಂಬೇಡ್ಕರ್ ಮೂರ್ತಿ ಸ್ಥಾಪನೆಗೆ ಕ್ರಮ ಕೈಗೊಂಡಿದ್ದರು. ಮೂರ್ತಿ ಪ್ರತಿಷ್ಠಾಪನೆಗೆ ₹10 ಲಕ್ಷ ಅನುದಾನ ನೀಡಿ ಅದಕ್ಕೆ ಚಾಲನೆ ನೀಡಿದ್ದರು. ಈಗ ಅವರನ್ನು ವರ್ಗಾಯಿಸುವ ಮೂಲಕ ಎಲ್ಲ ಕಾರ್ಯಗಳು ನನೆಗುದಿಗೆ ಬೀಳುವಂತಾಗಿವೆ ಎಂದು ತಿಳಿಸಿದರು.

ಯುವ ಮುಖಂಡ ನಿಂಗರಾಜ ಹಾಲಿನವರ ಮಾತನಾಡಿದರು.

ಮುಖಂಡರಾದ ಸತೀಶ ಪಾಸಿ, ದಂಡೆಪ್ಪ ಹರಿಜನ, ಸಹದೇವಪ್ಪ ರಾಮೇನಹಳ್ಳಿ, ನಿಂಗರಾಜ ಮೇಗಲಮನಿ, ಮಂಜುನಾಥ ಹೈತಾಪುರ, ಸಂತೋಷ ಹಡಗಲಿ, ರಾಜು ದೊಡ್ಡಮನಿ, ಮಂಜು ಕರಡಿಗುಡ್ಡ, ಮನೋಜ ವಡ್ಡರ, ಸಾಹಿಲ್ ಅಳವುಂಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-23-404405839

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.