ಮುಂಡರಗಿ: ‘ಕಠಿಣ ಹಾಗೂ ಸಮಸ್ಯಾತ್ಮಕ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಇಲ್ಲಿಯ ಜಾಫರ್ ಬಚೇರಿ ಅವರು ಚಾಣಾಕ್ಷರಾಗಿದ್ದು, ಅವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹಲವು ಪ್ರಕರಣಗಳನ್ನು ಪತ್ತೆಹಚ್ಚಿ ಇಲಾಖೆಗೆ ಕೀರ್ತಿ ತಂದಿದ್ದಾರೆ. ಹೀಗಾಗಿ ಅವರಿಗೆ ಕಿರಿಯ ವಯಸ್ಸಿನಲ್ಲಿ ಮುಖ್ಯಮಂತ್ರಿ ಸೇವಾ ಪದಕ ದೊರೆತಿದೆ’ ಎಂದು ಹಿರಿಯ ಮುಖಂಡ ಕೆ.ವಿ.ಹಂಚಿನಾಳ ತಿಳಿಸಿದರು.

ಪಟ್ಟಣದ ಗೆಳೆಯರ ಬಳಗದ ಕಾರ್ಯಕರ್ತರು ಇಲ್ಲಿಯ ಬಸವಾ ಏಜನ್ಸಿಯಲ್ಲಿ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ಸೇವಾ ಪದಕ ಪಡೆದ ಪೊಲೀಸ್ ಜಾಫರ್ ಬಚೇರಿ ಅವರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಖಂಡ ಎಸ್.ವಿ.ಪಾಟೀಲ ಮಾತನಾಡಿ, ‘ನಮ್ಮ ತಾಲ್ಲೂಕಿನ ಪೊಲೀಸ್ ಜಾಫರ್ ಬಚೇರಿ ಅವರು ತಮ್ಮ ಪ್ರಾಮಾಣಿಕ ಸೇವೆ ಹಾಗೂ ಪರಿಶ್ರಮದಿಂದ ಮುಖ್ಯಮಂತ್ರಿ ಪದಕ ಪಡೆದುಕೊಂಡಿರುವುದು ನಮ್ಮ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿದೆ’ ಎಂದು ಹಾರೈಸಿದರು.

ಕೊಟ್ರೇಶಪ್ಪ ಅಂಗಡಿ ಮಾತನಾಡಿ, ‘ಜಾಫರ್ ಬಚೇರಿ ಅವರು ಸದಾ ಎಲ್ಲ ವರ್ಗದ ಜನರೊಂದಿಗೆ ಮುಕ್ತವಾಗಿ ಬೆರೆಯುತ್ತಾ, ಜನಮೆಚ್ಚಿದ ಪೊಲೀಸರೆಂದು ಖ್ಯಾತಿ ಗಳಿಸಿದ್ದಾರೆ. ಅವರ ಪರಿಶ್ರಮ ಇತರರಿಗೆ ಮಾದರಿಯಾಗಿದೆ’ ಎಂದರು.

ಜಾಫರ್ ಬಚೇರಿ ಮಾತನಾಡಿ, ‘ಇದೇ ತಾಲ್ಲೂಕಿನವನಾಗಿರುವ ನಾನು ಎಲ್ಲರ ಮಾರ್ಗದರ್ಶನದಲ್ಲಿ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇನೆ. ನಾನು ಪಡೆದುಕೊಂಡಿರುವ ಪ್ರಶಸ್ತಿ, ಪುರಸ್ಕಾರಗಳು ಎಲ್ಲರಿಗೂ ಸಲ್ಲುತ್ತವೆ’ ಎಂದು ಹರ್ಷ ವ್ಯಕ್ತಪಡಿಸಿದರು.

ರಜನಿಕಾಂತ ದೇಸಾಯಿ ಮಾತನಾಡಿದರು. ಎಸ್.ಡಿ.ಚವಡಿ, ಶಂಬುಲಿಂಗನಗೌಡ ಹಕ್ಕಂಡಿ, ಸಿದ್ದು ದೇಸಾಯಿ, ಸೋಮಶೇಖರ ಹಕ್ಕಂಡಿ, ವೆಂಕಟೇಶ ದೇಸಾಯಿ, ವಿರೇಶ ಹಡಗಲಿ, ಪ್ರಕಾಶ ದೇಸಾಯಿ, ಮುತ್ತು ಅಳವಂಡಿ, ಮಹೇಶ ಜಂತ್ಲಿ, ನಾಗೇಶ ಹುಬ್ಬಳ್ಳಿ, ಮೋಹನ ದೇಸಾಯಿ, ಪರಸಪ್ಪ ಕುಂಬಾರ, ತಿಪ್ಪಣ್ಣ ಕಟ್ಟೀಮನಿ, ಗ್ಯಾನಪ್ಪ ಶೀರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-23-156502922

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.