ಮುಂಡರಗಿ: ‘ಕಾಯಕ ಮತ್ತು ದಾಸೋಹಗಳು ಶರಣರ ಎರಡು ಕಣ್ಣುಗಳಾಗಿದ್ದವು. ಆದರೆ ಈಗಿನ ಸರ್ಕಾರ ಜನತೆಗೆ ಉಚಿತ ಕೊಡುಗೆಗಳನ್ನು ನೀಡುವ ಮೂಲಕ ಕಾಯಕವನ್ನು ಕಡೆಗಣಿಸುತ್ತಿರುವುದು ದುರ್ದೈವದ ಸಂಗತಿಯಾಗಿದೆ' ಎಂದು ಜ.ಅ.ವಿದ್ಯಾ ಸಮಿತಿಯ ಆಡಳಿತಾಧಿಕಾರಿ ಬಿ.ಜಿ.ಜವಳಿ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಇಲ್ಲಿಯ ಜಗದ್ಗುರು ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ವಚನ ಚಿಂತನ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ನಮ್ಮ ವಿಧಾನ ಸಭೆ ಹಾಗೂ ಲೋಕಸಭೆಗಳು ಶರಣರ ಮಹಾಮನೆ ಹಾಗೂ ಅನುಭವ ಮಂಟಪಗಳ ಪ್ರತಿರೂಪವಾಗಿದ್ದು, ಅಲ್ಲಿ ನಮ್ಮ ಶಾಸಕರು ಹಾಗೂ ಸಂಸದರು ಮನ ಬಂದಂತೆ ವರ್ತಿಸುತ್ತಿದ್ದಾರೆ. ಸಂಸದೀಯ ಪದಗಳ ಬಳಕೆ ಹಾಗೂ ಉತ್ತಮ ನಡವಳಿಕೆಗಳು ಅಲ್ಲಿ ಕಣ್ಮರೆಯಾಗುತ್ತಿದ್ದು, ನಮ್ಮ ಜನಪ್ರತಿನಿಧಿಗಳು ಶರಣರ ವಚನಗಳನ್ನು ಓದಬೇಕು’ ಎಂದು ಸಲಹೆ ನೀಡಿದರು.

ಹಿರಿಯ ಶಿಕ್ಷಕಿ ಅಕ್ಕಮಹಾದೇವಿ ಕೊಟ್ಟೂರಶೆಟ್ಟರ ಮಾತನಾಡಿ, ‘ಜೀವನದಲ್ಲಿ ಮನುಷ್ಯ ಹೇಗೆ ಬದುಕಬೇಕು ಎನ್ನುವುದನ್ನು ನಮ್ಮ ಶರಣರು ನಮಗೆ ಕಲಿಸಿದ್ದಾರೆ. ಶರಣ ಸಂಕುಲದ ಕಣ್ಮಣಿಯಾಗಿದ್ದ ಬಸವಣ್ಣ ನಮಗೆಲ್ಲ ಮಾದರಿ. ಅವರ ತತ್ವಾದರ್ಶಗಳು ನಮಗೆ ದಾರಿದೀಪವಾಗಿದೆ’ ಎಂದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ ಮಾತನಾಡಿ, ‘ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲರ ಪ್ರೀತಿ ಹಾಗೂ ಗೌರವಕ್ಕೆ ಪಾತ್ರವಾಗಿದೆ. ಸರ್ವ ಕಾರ್ಯಗಳಿಗೆ ಸಹಕಾರ ನೀಡುತ್ತಿರುವ ಸರ್ವ ಸದಸ್ಯರ ಕಾರ್ಯ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗಾಯಕಿ ಜಯಶ್ರೀ ಅಳವುಂಡಿ ವಚನ ಗಾಯನ ನಡೆಸಿದರು.

ಐ.ಎ.ಮುಲ್ಲಾ ಪ್ರಾರ್ಥನೆ ಹಾಡಿದರು. ಕಾಶೀನಾಥ ಬಿಳಿಮಗ್ಗದ ಪ್ರಾಸ್ತಾವಿಕ ಮಾತನಾಡಿದರು. ಎನ್.ಎನ್.ಕಲಕೇರಿ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಮುಧೋಳ, ವೀಣಾ ಪಾಟೀಲ, ಮಹೇಶ ಮೇಟಿ, ಅರುಣಾ ಗುಜ್ಜರಿ, ಮಧುಮತಿ ಇಲಕಲ್, ಹನುಮರಡ್ಡಿ ಇಟಗಿ, ಯುವರಾಜ ಮುಂಡರಗಿ, ಕೃಷ್ಣ ಸಾಹುಕಾರ, ಪರಶುರಾಮ ಏಳುಕೊಳ್ಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-23-761866114

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.