ಮುಂಡರಗಿ: ನಾಡಿನೆಲ್ಲೆಡೆ ಉತ್ತಮ ಮಳೆ ಸುರಿದು, ಸಮೃದ್ಧವಾಗಿ ಬೆಳೆ ಬರಲಿ ಎಂದು ಆಶಿಸಿ ಇಲ್ಲಿನ ರೈತ ಮಹಿಳೆಯರು ಹಾಗೂ ಸಾರ್ವಜನಿಕರು ಪಟ್ಟಣದ ಎಲ್ಲ ದೇವತೆಗಳಿಗೆ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿ ಉಡಿ ತುಂಬಿದರು.

ಈ ಹಿಂದಿನ ಒಟ್ಟು ಐದು ಮಂಗಳವಾರ ಮುಂಜಾನೆ ಬಾಲಕ, ಬಾಲಕಿಯರು ಪಟ್ಟಣದ ಎಲ್ಲ ದೇವಾಲಯಗಳಿಗೆ ತೆರಳಿ ನೀರೆರೆದು, ಬೇವಿನ ಸೊಪ್ಪು ಅರ್ಪಿಸಿ ಬಂದಿದ್ದರು. ಕೊನೆಯ ಮಂಗಳವಾರ ಮಹಿಳೆಯರು ಪಟ್ಟಣದ ಎಲ್ಲ ದೇವಾಲಯಗಳಿಗೆ ತೆರಳಿ ಫಲ, ತಾಂಬೂಲ, ಅರಿಸಿಣ, ಕುಂಕುಮ, ಹಸಿರು ಗಾಜಿನ ಬಳೆ, ಸೀರೆ, ಕುಪ್ಪಸ ಮೊದಲಾದವುಗಳನ್ನು ಒಳಗೊಂಡ ಉಡಿಯನ್ನು ದೇವತೆಗಳಿಗೆ ತುಂಬಿದರು.

ಇಲ್ಲಿಯ ದುರ್ಗಾದೇವಿ ದೇವಸ್ಥಾನ, ದ್ಯಾಮವ್ವನ ಗುಡಿ, ಹುಡೇದಲಕ್ಷ್ಮಿ ದೇವಾಲಯ, ಅಂಬಾ ಭವಾನಿ ದೇವಸ್ಥಾನ, ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಭದ್ರಕಾಳಿ ದೇವಾಲಯ, ಬನಶಂಕರಿ ದೇವಸ್ಥಾನಗಳಿಗೆ ಭೇಟಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-23-1936098397

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.