ಮುಂಡರಗಿ (ಗದಗ ಜಿಲ್ಲೆ): ತಾಲ್ಲೂಕಿನ ನಾಗರಹಳ್ಳಿ ಗ್ರಾಮದ ಬಳಿ ಬುಧವಾರ ರಾತ್ರಿ ಹಳ್ಳ ದಾಟುವಾಗ ಬೈಕ್ ಸವಾರ ಕೊಚ್ಚಿಕೊಂಡು ಹೋಗಿ, ಮೃತಪಟ್ಟಿದ್ದಾರೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಏಣಗಿ ಬಸಾಪುರ ಗ್ರಾಮದ ರವಿಕುಮಾರ ಕರಬಸಪ್ಪ ಸುತಾರಿ (30) ಮೃತರು. ರವಿಕುಮಾರ ಮತ್ತು ಮಂಜಪ್ಪ ಬೊಮ್ಮಸಂದ್ರ ಇಬ್ಬರೂ ಬುಧವಾರ ರಾತ್ರಿ ಬೈಕ್‌ನಲ್ಲಿ ನಾಗರಹಳ್ಳಿ ಗ್ರಾಮದ ಹಳ್ಳ ದಾಟುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.
‘ಕೊಚ್ಚಿ ಹೋಗುತ್ತಿದ್ದ ರವಿಕುಮಾರ ರಕ್ಷಣೆಗೆ ಮಂಜಪ್ಪ ಬೊಮ್ಮಸಂದ್ರ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಗುರುವಾರ ಹುಡುಕಾಡಿದಾಗ, ಶವ ಪತ್ತೆಯಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.